ಪಾಕಿಸ್ತಾನ ಯುದ್ಧ ಘೋಷಿಸಿದರೆ, ರಾಜ್ಯ ಸರ್ಕಾರಗಳೇ ಶಸ್ತ್ರಾಸ್ತ್ರ ಖರೀದಿಸಬೇಕೇ?: ಕೇಂದ್ರದ ವಿರುದ್ಧ ಕೇಜ್ರಿವಾಲ್ ಕಿಡಿ

ಹೊಸದಿಲ್ಲಿ: ಒಂದು ವೇಳೆ ಪಾಕಿಸ್ತಾನವು ಭಾರತದ ಮೇಲೆ ಯುದ್ಧ ಸಾರಿದರೆ, ತನ್ನ ರಕ್ಷಣೆಗೆ ಅಗತ್ಯವಾದ ಶಸ್ತ್ರಾಸ್ತ್ರಗಳನ್ನು ತಾವೇ ನೋಡಿಕೊಳ್ಳುವಂತೆ ರಾಜ್ಯ ಸರ್ಕಾರಗಳಿಗೆ ಹೇಳಲು ಸಾಧ್ಯವಿಲ್ಲ. ಹಾಗೆಯೇ ಲಸಿಕೆಗಳನ್ನು ಕೂಡ ಖರೀದಿಸಿ ಹಂಚಿಕೆ ಮಾಡುವುದು ಕೇಂದ್ರ ಸರ್ಕಾರದ ಜವಾಬ್ದಾರಿಯೇ ವಿನಾ ವಿರುದ್ಧದ ಯುದ್ಧ ಎದುರಿಸುವುದನ್ನು ರಾಜ್ಯ ಸರ್ಕಾರಗಳಿಗೆ ಬಿಡುವುದಲ್ಲ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. 'ನಾಳೆ ಪಾಕಿಸ್ತಾನವು ಭಾರತದ ಮೇಲೆ ಯುದ್ಧ ಘೋಷಿಸಿದರೆ, ತಮ್ಮ ರಾಜ್ಯಗಳನ್ನು ತಾವೇ ಕಾಪಾಡಿಕೊಳ್ಳುವಂತೆ ರಾಜ್ಯ ಸರ್ಕಾರಗಳಿಗೆ ಹೇಳಲು ಸಾಧ್ಯವಾಗುವುದಿಲ್ಲ. ಉತ್ತರ ಪ್ರದೇಶ ತನ್ನದೇ ಟ್ಯಾಂಕ್‌ಗಳನ್ನು ಮತ್ತು ದಿಲ್ಲಿ ತನ್ನದೇ ಶಸ್ತ್ರಾಸ್ತ್ರಗಳನ್ನು ಖರೀದಿ ಮಾಡಲು ಆಗುವುದಿಲ್ಲ' ಎಂದು ಡಿಜಿಟಲ್ ಸುದ್ದಿಗೋಷ್ಠಿಯಲ್ಲಿ ಅರವಿಂದ್ ಕೇಜ್ರಿವಾಲ್ ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 'ಮಾರ್ಚ್ ತಿಂಗಳಲ್ಲಿ ಎರಡನೆಯ ಅಲೆ ಆರಂಭವಾದಾಗಲೇ ಜಗತ್ತಿನ ಎಲ್ಲ ಕಡೆಗಳಿಂದ ಲಸಿಕೆ ಖರೀದಿ ಮಾಡಬೇಕಿತ್ತು. ಆದರೆ ನಿಮ್ಮ ವ್ಯವಸ್ಥೆಯನ್ನು ನೀವೇ ಮಾಡಿಕೊಳ್ಳಿ ಎಂದು ರಾಜ್ಯಗಳಿಗೆ ಸೂಚಿಸಲಾಗಿದೆ. ನಾನು ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ಸಂಪರ್ಕದಲ್ಲಿದ್ದೇನೆ. ಯಾರಿಗೂ ಲಸಿಕೆ ಪಡೆಯುವ ದಾರಿಗಳು ಸಿಗುತ್ತಿಲ್ಲ' ಎಂದು ತಿಳಿಸಿದ್ದಾರೆ. 'ಲಸಿಕೆಗಾಗಿ ಅನೇಕ ರಾಜ್ಯಗಳು ಜಾಗತಿಕ ಟೆಂಡರ್ ಕರೆದು ವಿಫಲವಾಗಿವೆ. ತಾವು ರಾಜ್ಯ ಸರ್ಕಾರಗಳ ಜತೆ ಸಂವಹನ ನಡೆಸುವುದಿಲ್ಲ, ಕೇಂದ್ರ ಸರ್ಕಾರದ ಜತೆ ಮಾತ್ರ ಒಪ್ಪಂದ ಮಾಡಿಕೊಳ್ಳುತ್ತೇವೆ ಎಂದು ಲಸಿಕೆ ಕಂಪೆನಿಗಳು ತಿಳಿಸಿವೆ. ದೇಶವೇಕೆ ಲಸಿಕೆ ಖರೀದಿಸುತ್ತಿಲ್ಲ?' ಎಂದು ಪ್ರಶ್ನಿಸಿದ್ದಾರೆ. 'ಯಾವ ಕಾರಣಕ್ಕೂ ಭಾರತ ಈ ಯುದ್ಧದಲ್ಲಿ ಸೋಲಬಾರದು. ಕೋವಿಡ್ ಯುದ್ಧದಲ್ಲಿ ಕೇಂದ್ರ ಸರ್ಕಾರ ಸೋತರೆ, ಅದು ಬಿಜೆಪಿಯ ಸೋಲು ಮಾತ್ರ ಆಗುವುದಿಲ್ಲ, ಭಾರತವೇ ಸೋಲು ಅನುಭವಿಸಲಿದೆ. ದೆಹಲಿ ಸರ್ಕಾರ ಸೋತರೆ, ಅದು ಎಎಪಿ ಸೋಲುತ್ತದೆ ಎಂದಲ್ಲ. ಅದು ಭಾರತದ ಸೋಲು. ಇದು 36 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಟೀಂ ಇಂಡಿಯಾವಾಗಿ ಕೇಂದ್ರದ ಜತೆ ಕೆಲಸ ಮಾಡುವ ಸಮಯ' ಎಂದಿದ್ದಾರೆ.


from India & World News in Kannada | VK Polls https://ift.tt/3fqwzoF

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...