ಕೋವಿಡ್ ಕಷ್ಟಕಾಲದಲ್ಲಿ ಭಾರತ ಮಾಡಿದ ಸಹಾಯವನ್ನು ಎಂದಿಗೂ ಮರೆಯುವುದಿಲ್ಲ: ಅಮೆರಿಕ

ವಾಷಿಂಗ್ಟನ್: ಎಸ್ ಜೈಶಂಕರ್ ಅವರು ಶುಕ್ರವಾರ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಅವರೊಂದಿಗೆ ಸುದೀರ್ಘ ಮಾತುಕತೆ ನಡೆಸಿದರು. ಮಾರಕ ಸಾಂಕ್ರಾಮಿಕದ ವಿರುದ್ಧದ ಹೋರಾಟದಲ್ಲಿ ಎದುರಿಸುತ್ತಿರುವ ಅತಿದೊಡ್ಡ ಸಂಕಷ್ಟದ ಸಮಯದಲ್ಲಿ ದೇಶಕ್ಕೆ ಭಾರಿ ಬೆಂಬಲ ಹಾಗೂ ಅನುಕಂಪ ವ್ಯಕ್ತಪಡಿಸಿರುವ ಜೋ ಬೈಡನ್ ಆಡಳಿತಕ್ಕೆ ಜೈಶಂಕರ್ ಧನ್ಯವಾದ ಸಲ್ಲಿಸಿದರು. ಜನವರಿ 20ರಂದು ಜೋ ಬೈಡನ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಭಾರತ ಸರ್ಕಾರದ ಸಂಪುಟದಿಂದ ಅಮೆರಿಕಕ್ಕೆ ಅಧಿಕೃತ ಭೇಟಿ ನೀಡಿರುವ ಮೊದಲ ಸಚಿವ ಎನಿಸಿರುವ ಜೈಶಂಕರ್, ಅಲ್ಲಿನ ಅಧಿಕಾರಿಗಳು ಮತ್ತು ಸಂಸದರೊಂದಿಗೆ ಸರಣಿ ಸಭೆಗಳನ್ನು ನಡೆಸಿದ್ದಾರೆ. ಕೋವಿಡ್ ಆರಂಭ ಕಾಲದಲ್ಲಿ ಸಂಕಷ್ಟಗಳನ್ನು ಎದುರಿಸಿದ ಸಂದರ್ಭದಲ್ಲಿ ಭಾರತ ಮಾಡಿದ ಸಹಾಯಗಳನ್ನು ತಮ್ಮ ದೇಶ ಎಂದಿಗೂ ಮರೆಯುವುದಿಲ್ಲ ಎಂದು ಬ್ಲಿಂಕೆನ್ ಹೇಳಿದರು. 'ಈಗ ನಾವು ಭಾರತದೊಂದಿಗೆ ಇದ್ದೇವೆ ಎಂಬುದನ್ನು ಖಾತರಿಪಡಿಸಲು ಬಯಸುತ್ತೇವೆ. ನಮ್ಮ ಕಾಲದ ಅನೇಕ ಮಹತ್ವದ ಸವಾಲುಗಳ ಕುರಿತು ಅಮೆರಿಕ ಮತ್ತು ಭಾರತ ಜಂಟಿಯಾಗಿ ಕೆಲಸ ಮಾಡುತ್ತಿವೆ. ಕೋವಿಡ್ 19 ವಿರುದ್ಧದ ಹೋರಾಟದಲ್ಲಿ ನಾವು ಜತೆಯಾಗಿದ್ದೇವೆ. ಭಾರತ ಮತ್ತು ಅಮೆರಿಕಗಳ ಪಾಲುದಾರಿಗೆ ಅತ್ಯಂತ ಮಹತ್ವದ, ಗಟ್ಟಿಯಾದ ಮತ್ತು ಹೆಚ್ಚು ಫಲದಾಯಕವಾಗುತ್ತಿದೆ' ಎಂದು ತಿಳಿಸಿದರು. ವಿದೇಶಾಂಗ ಇಲಾಖೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜೈಶಂಕರ್, 'ನಾವು ಚರ್ಚಿಸಲು ಸಾಕಷ್ಟು ವಿಷಯಗಳಿವೆ. ವರ್ಷಗಳು ಕಳೆದಂತೆ ನಮ್ಮ ಸಂಬಂಧ ಸಾಕಷ್ಟು ಪ್ರಬಲವಾಗಿ ಬೆಳೆದಿದೆ. ಇದು ಹೀಗೆಯೇ ಮುಂದುವರಿಯಲಿದೆ ಎಂದು ನನಗೆ ವಿಶ್ವಾಸವಿದೆ. ನಮ್ಮ ಅತಿ ದೊಡ್ಡ ಕಷ್ಟಕಾಲದಲ್ಲಿ ಗಟ್ಟಿಯಾಗಿ ಬೆಂಬಲಿಸಿದ ಮತ್ತು ಸಹಾನುಭೂತಿ ವ್ಯಕ್ತಪಡಿಸಿದ ಸರ್ಕಾರ ಹಾಗೂ ಅಮೆರಿಕಕ್ಕೆ ನಮ್ಮ ಕೃತಜ್ಞತೆಗಳನ್ನು ಸಲ್ಲಿಸಲು ಬಯಸುತ್ತೇನೆ' ಎಂದು ಹೇಳಿದರು. ಈ ನಡುವೆ ಜೈಶಂಕರ್ ಅವರು, ಅಮೆರಿಕದ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಅವರನ್ನು ಭೇಟಿ ಮಾಡಿದರು. ಉಭಯ ದೇಶಗಳ ನಡುವೆ ಮತ್ತಷ್ಟು ಯುದ್ಧತಂತ್ರ ಹಾಗೂ ರಕ್ಷಣಾ ಪಾಲುದಾರಿಕೆ ಅಭಿವೃದ್ಧಿಪಡಿಸುವ ಬಗ್ಗೆ ಚರ್ಚಿಸಿದರು. ಜತೆಗೆ ಸಮಕಾಲೀನ ಭದ್ರತಾ ಸವಾಲುಗಳ ಬಗ್ಗೆ ಅಭಿಪ್ರಾಯ ಹಂಚಿಕೊಂಡರು.


from India & World News in Kannada | VK Polls https://ift.tt/3uyi6LV

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...