ಬಿಎಸ್‌ವೈ ನಾಯಕತ್ವ ಬದಲಾವಣೆ: ವಾಸ್ತವ ಏನು? ಇಲ್ಲಿದೆ ಇನ್‌ಸೈಡ್ ಮಾಹಿತಿ!

ಬೆಂಗಳೂರು: ಜುಲೈ ತಿಂಗಳಲ್ಲಿ ಸಿಎಂ ಬಿಎಸ್‌ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುತ್ತಾರೆ. ಹೈಕಮಾಂಡ್ ಸಿಎಂ ಸ್ಥಾನಕ್ಕೆ ಸೂಕ್ತವಾದ ವ್ಯಕ್ತಿಯನ್ನು ಆಯ್ಕೆ ಮಾಡುತ್ತದೆ. ಸದ್ಯ ಇದು ಬಿಜೆಪಿ ಪಾಳಯದಲ್ಲಿ ಹರಿದಾಡುತ್ತಿರುವ ಸೂಪರ್‌ ಸುದ್ದಿ. ನಾಯಕತ್ವ ಬದಲಾವಣೆ ಈ ಬಾರಿ ಶತಸಿದ್ಧ ಎಂದು ಬಿಜೆಪಿಯ ಒಂದು ಬಣ ಹೇಳುತ್ತಿದ್ದರೆ ಇನ್ನುಳಿದ ಎರಡು ವರ್ಷಗಳ ಕಾಲ ಬಿಎಸ್‌ವೈ ಸಿಎಂ ಆಗಿ ಮುಂದುವರಿಯುತ್ತಾರೆ ಎಂಬುವುದು ಯಡಿಯೂರಪ್ಪ ಆಪ್ತರ ವಾದ. ಆದರೆ ವಾಸ್ತವದಲ್ಲಿ ಏನು ನಡೆಯುತ್ತಿದೆ ಎಂಬುವುದು ಸಹಜವಾಗಿ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಬಿಎಸ್‌ವೈ ನಾಯಕತ್ವಕ್ಕೆ ಯಾರಿಂದ ವಿರೋಧ? ಕಾರಣ ಏನು? ರಾಜ್ಯದಲ್ಲಿ ಆಪರೇಷನ್ ಕಮಲದ ಮೂಲಕ ಬಿಜೆಪಿ ಸರ್ಕಾರವನ್ನು ರಚನೆ ಮಾಡಿ ಒಂದು ವರ್ಷ ಆಗುತ್ತಿದ್ದಂತೆ ನಾಯಕತ್ವ ಬದಲಾವಣೆ ಚರ್ಚೆಗಳು ಹುಟ್ಟುಕೊಂಡಿವೆ. ಪದೇ ಪದೇ ಸುದ್ದಿಗಳು ಸುದ್ದಿಕೇಂದ್ರಕ್ಕೆ ಬಂದು ಮರೆಯಾಗುತ್ತಿವೆ. ಆದರೆ ನಾಯಕತ್ವ ಬದಲಾವಣೆ ಪ್ರಯತ್ನಗಳು ನಡೆಯುತ್ತಿದೆಯಾ? ಎಂದು ಪ್ರಶ್ನೆಗೆ ಉತ್ತರ ಹೌದು. ಇದಕ್ಕೆ ಕಾರಣಗಳು ಕೂಡಾ ಇವೆ. ಮುಖ್ಯಮಂತ್ರಿ ಬಿಎಸ್‌ವೈಗೆ ವಯಸ್ಸಿನ ಕಾರಣಕ್ಕಾಗಿ ಆಡಳಿತದಲ್ಲಿ ಸಂಪೂರ್ಣ ಹಿಡಿತವನ್ನು ಹೊಂದಲು ಸಾಧ್ಯವಾಗುತ್ತಿಲ್ಲ. ಈ ಕಾರಣಕ್ಕಾಗಿ ಆಡಳಿತದ ಕೀಲುಕೈ ಅವರ ಪುತ್ರ ಬಿ.ವೈ ವಿಜಯೇಂದ್ರ ಬಳಿಯಿದೆ ಎಂಬುವುದು ಕೆಲವರ ಅಸಮಾಧಾನಕ್ಕೆ ಕಾರಣ. ಈ ಹಿಂದೆಯೂ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಹಿರಂಗವಾಗಿಯೇ ಆರೋಪ ಮಾಡಿದ್ದರು. ಇದೀಗ ಸಚಿವ ಸಿ.ಪಿ ಯೋಗೀಶ್ವರ್‌ ಕೂಡಾ ಪರೋಕ್ಷವಾಗಿ ವಿಜಯೇಂದ್ರ ಹಸ್ತಕ್ಷೇಪದ ಬಗ್ಗೆ ಧ್ವನಿ ಎತ್ತಿದ್ದಾರೆ. ಇವರಷ್ಟೇ ಅಲ್ಲ, ಇನ್ನಷ್ಟು ಶಾಸಕರು, ಸಚಿವರು ಇದರಿಂದ ಅಸಮಾಧಾನಗೊಂಡಿದ್ದಾರೆ ಎಂಬುವುದು ಬಿಜೆಪಿ ಮೂಲಗಳು ಮಾಹಿತಿ. ಪಕ್ಷದಲ್ಲಿ ನಮ್ಮ ಮಾತಿಗಿಂತ ವಿರೋಧ ಪಕ್ಷದವರ ಮಾತು ಹೆಚ್ಚಾಗಿ ಮನ್ನಣೆ ಸಿಗುತ್ತಿದೆ. ಸಚಿವರಾಗಿದ್ದೂ ನಮಗೆ ಸಿಗಬೇಕಾದ ಗೌರವ ಸಿಗುತ್ತಿಲ್ಲ. ಎಲ್ಲವೂ ಸಿಎಂ ಹಾಗೂ ಅವರ ಪುತ್ರನ ಮೂಲಕವೇ ಜಾರಿಗೊಳ್ಳಬೇಕು ಎಂಬ ವಾತಾವರಣ ಇದೆ ಎಂಬುವುದು ಅಸಮಾಧಾನಿತರ ಆರೋಪ. ಈ ಕಾರಣಕ್ಕಾಗಿಯೇ ಹೈಕಮಾಂಡ್‌ ಭೇಟಿಯಾಗಿ ಅನೌಪಚಾರಿಕ ದೂರನ್ನು ನೀಡಿದ್ದಾರೆ. ಹೈಕಮಾಂಡ್‌ ವೀಕ್ಷಕರ ಸಮ್ಮುಖದಲ್ಲಿ ಶಾಸಕಾಂಗ ಸಭೆ ಕರೆಯಲು ಒತ್ತಡ ಹೇರಿ ಪತ್ರ ! ಸದ್ಯದ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಶಾಸಕಾಂಗ ಸಭೆಯನ್ನು ಕರೆಯಲು ಒತ್ತಡ ತಂತ್ರವನ್ನು ಪ್ರಯೋಗ ಮಾಡಲು ಅಸಮಾಧಾನಿತ ಬಿಜೆಪಿ ಶಾಸಕರು ಮುಂದಾಗಿದ್ದಾರೆ. ಕಳೆದ ಬಾರಿ ಶಾಸಕರ ಸಭೆ ಕರೆದರೂ ಯಾವುದೇ ಫಲಪ್ರದವಾಗಿಲ್ಲ. ಈ ನಿಟ್ಟಿನಲ್ಲಿ ಹೈಕಮಾಂಡ್‌ ವೀಕ್ಷಕರ ಸಮ್ಮುಖದಲ್ಲಿ ಶಾಸಕಾಂಗ ಸಭೆಯನ್ನು ಕರೆಯಬೇಕು ಎಂಬುವುದು ಅಸಮಾಧಾನಿತರ ಬೇಡಿಕೆ. ಈಗಾಗಲೇ ಸುಮಾರು 20 ಮಂದಿ ಈ ಪತ್ರಕ್ಕೆ ಸಹಿ ಹಾಕಿದ್ದಾರೆ. ಉಳಿದಂತೆ 30 ರಿಂದ 40 ಮಂದಿ ಶಾಸಕರ ಸಹಿ ಹೊಂದಿರುವ ಪತ್ರವನ್ನು ಹೈಕಮಾಂಡ್‌ಗೆ ನೀಡುವ ಪ್ಯ್ಲಾನ್ ಅಸಮಾಧಾನಿತರಿಂದ ನಡೆಯುತ್ತಿದೆ. ಈ ಮೂಲಕ ಶಾಸಕಾಂಗ ಸಭೆಯಲ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿ ಗದ್ದಲ ಉಂಟು ಮಾಡುವುದು ಇದರ ಹಿಂದಿನ ಯೋಜನೆ ಆಗಿದೆ. ಪತ್ರ ಬರೆಯುವ ವಿಚಾರವನ್ನು ಬಿಜೆಪಿ ಉನ್ನತ ಮೂಲಗಳು ಧೃಡಪಡಿಸಿವೆ. ಬಂಡಾಯಕ್ಕೆ ಬೆಂಬಲ ಸಿಗುತ್ತಾ? ಸಿಎಂ ಬಿಎಸ್‌ ಯಡಿಯೂರಪ್ಪ ಹಾಗೂ ಅವರ ಪುತ್ರ ವಿಜಯೇಂದ್ರ ವಿರುದ್ಧದ ಬಂಡಾಯಕ್ಕೆ ಬಿಜೆಪಿಯಲ್ಲಿ ನಿರೀಕ್ಷಿತ ಬೆಂಬಲ ಸಿಗುವುದು ಸುಲಭದ ಮಾತಲ್ಲ. ಇದಕ್ಕೆ ಹಲವು ಕಾರಣಗಳು ಇವೆ. ಸದ್ಯದ ರಾಜಕೀಯ ಪರಿಸ್ಥಿತಿ, ಕೋವಿಡ್‌ ನಿರ್ವಹಣೆಯಲ್ಲಿ ಸರ್ಕಾರದ ವೈಫಲ್ಯದಿಂದ ಜನಸಾಮಾನ್ಯರ ನಡುವೆ ಪಕ್ಷದ ವರ್ಚಸ್ಸಿಗೆ ಹಾನಿಯಾಗಿದೆ.ಇಂತಹ ಸಂದರ್ಭದಲ್ಲಿ ನಾಯಕತ್ವ ಬದಲಾವಣೆ ಮತ್ತಷ್ಟು ಜಟಿಲ ಸಮಸ್ಯೆಗೆ ಕಾರಣವಾಗಬಹುದು. ಮೂವರು ಡಿಸಿಎಂಗಳು ಹಾಗೂ ಸಚಿವರು ಇದಕ್ಕೆ ಒಪ್ಪಿಗೆ ಕೊಡುವ ಸಾಧ್ಯತೆ ತೀರಾ ಕಡಿಮೆ. ಹಾಗಂತ ಹೈಕಮಾಂಡ್‌ ಗಟ್ಟಿ ನಿರ್ಧಾರ ಕೈಗೊಂಡರೆ ಪರಿಸ್ಥಿತಿ ಬದಲಾಗಬಹುದು. ಅದರ ಹೊರತಾಗಿ ಸದ್ಯದ ಅನಿಶ್ಚಿತ ವಾತಾವರಣದಲ್ಲಿ ಅಸಮಾಧಾನ ಇದ್ದರೂ ಒಂದು ಹೆಜ್ಜೆಯನ್ನು ಇಡಲು ಮುಂದಾಗುವ ಸಾಧ್ಯತೆ ತೀರಾ ಕಡಿಮೆ. ನಾಯಕತ್ವ ಬದಲಾವಣೆ ವಿಚಾರ ಮುಂದಿಟ್ಟು ಒತ್ತಡದ ತಂತ್ರ! ಇನ್ನು ಪದೇ ಪದೇ ನಾಯಕತ್ವ ಬದಲಾವಣೆಯ ವಿಚಾರ ಮುಂದಿಟ್ಟು ಬಿಎಸ್‌ವೈ ಮೇಲೆ ಒತ್ತಡದ ತಂತ್ರ ಪ್ರಯೋಗ ಮಾಡುವ ತಂತ್ರಗಾರಿಕೆಯೂ ಇದರ ಹಿಂದೆ ಇದೆ ಎನ್ನಲಾಗುತ್ತಿದೆ. ಆದರೆ ಹೈಕಮಾಂಡ್‌ ಇದಕ್ಕೆ ಎಷ್ಟರ ಮಟ್ಟಿಗೆ ಮನ್ನಣೆ ನೀಡಲಿದೆ ಎಂಬುವುದು ಸದ್ಯದ ಕುತೂಹಲ. ಒಂದು ವೇಳೆ ಬಿಎಸ್‌ವೈ ನಾಯಕತ್ವ ಬದಲಾವಣೆ ಮಾಡಿದ್ದಲ್ಲಿ ಅದರಿಂದ ಕರ್ನಾಟದಲ್ಲಿ ಪಕ್ಷಕ್ಕೆ ಹಿನ್ನಡೆ ಉಂಟಾಗುವ ಸಾಧ್ಯತೆ ಹೆಚ್ಚು. ಅಲ್ಲದೆ ಯಡಿಯೂರಪ್ಪ ನಂತರ ಯಾರು? ಎಂಬ ಪ್ರಶ್ನೆಗೂ ಉತ್ತರವಿಲ್ಲ. ಹೀಗಿರುವಾಗ ಹೈಕಮಾಂಡ್‌ ನಾಯಕತ್ವ ಬದಲಾವಣೆಯಂತಹ ಕಠಿಣ ನಿರ್ಧಾರವನ್ನು ಸದ್ಯಕ್ಕೆ ಕೈಗೊಳ್ಳುವ ಸಾಧ್ಯತೆ ಇಲ್ಲ ಎಂಬುವುದು ಬಿಜೆಪಿ ಮೂಲಗಳ ಮಾಹಿತಿ.


from India & World News in Kannada | VK Polls https://ift.tt/3yQuBWD

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...