ನಿಜಕ್ಕೂ ಬ್ಲ್ಯಾಕ್‌ ಫಂಗಸ್‌ ಉಲ್ಬಣಕ್ಕೆ ಕಾರಣವೇನು? ಏಮ್ಸ್‌ನ ವೈದ್ಯರುಗಳು ಹೇಳುವುದೇನು?

ಶಿವಾನಂದ ಹಿರೇಮಠ ಬೆಂಗಳೂರು ಒಮ್ಮಿಂದೊಮ್ಮೆಗೇ ಉಲ್ಬಣಗೊಳ್ಳಲು ಮಿಶ್ರ ಮ್ಯೂಟೆಂಟ್‌ಗಳ ಅಸಹಜ ಕಣ ವಿಭಜನೆ ಮತ್ತು ಬಲಿಷ್ಠ ಕೋವಿಡ್‌ ಕಣಗಳ ಕ್ರೂರ ವರ್ತನೆ ಕಾರಣ ಎಂಬ ಹೊಸ ವಾದವನ್ನು ದಿಲ್ಲಿಯ ಅಖಿಲ ಭಾರತೀಯ ವೈದ್ಯಕೀಯ ಶಿಕ್ಷಣ ಸಂಸ್ಥೆ () ಮುಂದಿಟ್ಟಿದೆ. ಇದುವರೆಗೆ ರೆಮ್‌ಡೆಸಿವಿರ್‌, ಅತಿಯಾದ ಸ್ಟೀರಾಯ್ಡ್‌ ಬಳಕೆ, ಆಕ್ಸಿಜನ್‌ ಬಳಕೆಯಲ್ಲಿ ತಪ್ಪುಗಳಿಂದ ಕೊರೊನಾ ರೋಗಮುಕ್ತಿ ಹೊಂದಿದವರಲ್ಲಿ ಬ್ಲ್ಯಾಕ್‌ ಫಂಗಸ್‌ ಉಲ್ಬಣವಾಗುತ್ತದೆ ಎಂದು ಹೇಳಲಾಗಿತ್ತು. ಸ್ಟಿರಾಯ್ಡ್‌ ಔಷಧ, ಆಮ್ಲಜನಕವನ್ನು ಮೊದಲನೇ ಅಲೆಯಲ್ಲೂ ಬಳಸಲಾಗಿದೆ. ಆದರೆ, ಬ್ಲ್ಯಾಕ್‌ ಫಂಗಸ್‌ ಉಲ್ಬಣಿಸಿರಲಿಲ್ಲ. ಹೀಗಾಗಿ ಈ ಬಾರಿ ಸಮಸ್ಯೆ ಗಂಭೀರವಾಗಲು ಬೇರೆ ಕಾರಣ ಇರಬಹುದು ಎಂದು ಅಭಿಪ್ರಾಯಪಟ್ಟ ಏಮ್ಸ್‌ ಸಂಶೋಧಕರು ಈ ನಿಟ್ಟಿನಲ್ಲಿ ವಿಸ್ತೃತ ಸಂಶೋಧನೆಗೆ ಮುಂದಾಗಿದ್ದಾರೆ. ಡಯಾಬಿಟಿಸ್‌, ಕ್ಯಾನ್ಸರ್‌ಗೆ ಸಂಬಂಧಿಸಿದ ಔಷಧ ಬಳಕೆ, ಕೈಗಾರಿಕಾ ಆಕ್ಸಿಜನ್‌ ಬಳಕೆ, ಸ್ಟಿರಾಯ್ಡ್‌, ಆಕ್ಸಿಜನ್‌ ಬಳಕೆ ಸಂದರ್ಭದಲ್ಲಿ ಸ್ಟೆರಿಲೈಸ್ಡ್‌ ನೀರು ಬಳಸದೇ ಫಂಗಸ್‌ ಉಲ್ಬಣಿಸಿದೆ ಎಂಬ ವಾದ ಕಪೋಲಕಲ್ಪಿತ. ಈ ಎಲ್ಲಔಷಧಗಳನ್ನು ಔಷಧ ಕ್ಷೇತ್ರದಲ್ಲಿಈ ಮೊದಲೇ ಬಳಸಲಾಗುತ್ತಿದೆ. ಫಂಗಸ್‌ ಉಲ್ಬಣಿಸಿರಲಿಲ್ಲ. ಕೊರೊನಾ ಸೋಂಕು ತಗುಲಿದ ನಂತರ ವೈರಸ್‌ ಮ್ಯುಟೇಷನ್‌ ಪ್ರಕ್ರಿಯೆಯಲ್ಲಿ ಕಣಗಳ ಅಸಹಜ ಅಭಿವೃದ್ಧಿಯಿಂದ ಕ್ರೂರವಾಗುತ್ತಿವೆ ಎಂದು 'ಏಮ್ಸ್‌' ತಿಳಿಸಿದೆ. ರಾಜ್ಯದ ಹೆಸರಾಂತ ವೈದ್ಯರು ಕೂಡ ಇದನ್ನು ಪುಷ್ಟೀಕರಿಸಿದ್ದಾರೆ. ಅಸಹಜ ಕಣ ವಿಭಜನೆ! ಅನುವಂಶೀಯ ಗುಣಲಕ್ಷಣ ಹೊಂದಿರುವ ಕೋವಿಡ್‌ 1 ಕಣವು(ಸೆಲ್‌) ಎರಡಾಗಿ ವಿಭಜನೆ ಹೊಂದುತ್ತದೆ. 2 ರಿಂದ 4, 4 ರಿಂದ 8, 8 ರಿಂದ 16 ಹೀಗೆ ಸಹಜ ಅನುವಂಶೀಯ ವಿಭಜನೆ ಪ್ರಕ್ರಿಯೆ ನಡೆಯುತ್ತದೆ. ಆದರೆ, ಬ್ರಿಟನ್‌ ಮತ್ತು ಭಾರತೀಯ ಕೋವಿಡ್‌ ಕಣಗಳು ಸೇರಿದ್ದರಿಂದ ಕಣಗಳ ವಿಭಜನೆ ಅಸಹಜವಾಗಿದೆ. 1ರಿಂದ 4 ಆಗಿರಬಹುದು, 4 ರಿಂದ 40 ಕೂಡ ಆಗಿರಬಹುದು. ಅಸಹಜವಾಗಿ ವಿಭಜನೆ ಆಗುತ್ತಿರುವ ಕಣಗಳು ಸಾಮಾನ್ಯವಾಗಿ ಕ್ರೂರ ವರ್ತನೆ ಹೊಂದಿ ರೋಗ ನಿರೋಧಕ ಶಕ್ತಿ ಕ್ಷೀಣಿಸುವಂತೆ ಮಾಡುತ್ತವೆ ಎಂಬ ವಾದ ಮುನ್ನೆಲೆಗೆ ಬಂದಿದೆ.


from India & World News in Kannada | VK Polls https://ift.tt/3oX94Xo

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...