: ಪ್ರತಿ ತಿಂಗಳ ಕೊನೆಯ ಭಾನುವಾರ ಪ್ರಸಾರವಾಗುವ ಅವರ , ಈ ಬಾರಿ ಹಲವು ವಿಶೇಷತೆಗಳನ್ನು ಒಳಗೊಂಡಿತ್ತು. ಪ್ರಧಾನಿ ಮೋದಿಯವರ ರೇಡಿಯೋ ಕಾರ್ಯಕ್ರಮದ 77ನೇ ಸಂಚಿಕೆ ಈ ಭಾನುವಾರ ಪ್ರಸಾರವಾಯ್ತು. ಕೇಂದ್ರದ ಎನ್ಡಿಎ ಸರ್ಕಾರ 7ನೇ ವರ್ಷ ಪೂರೈಸಿದ ದಿನವೇ ಈ ಕಾರ್ಯಕ್ರಮ ಬಿತ್ತರವಾಯ್ತು. ನಿರೀಕ್ಷೆಯಂತೆಯೇ ಪ್ರಧಾನಿ ಮೋದಿಯವರು ಕೋವಿಡ್ ವಿಚಾರವಾಗಿ ತಮ್ಮ ಚಿಂತನೆಗಳನ್ನು ಮಂಡಿಸಿದರು. ಕಳೆದ 100 ವರ್ಷಗಳಲ್ಲೇ ಅತಿ ದೊಡ್ಡ ಸಾಂಕ್ರಾಮಿಕ ಇದಾಗಿದೆ ಎಂದು ಪ್ರಧಾನಿ ಮೋದಿ ಬಣ್ಣಿಸಿದರು. ಭಾರತ ಈ ರೀತಿಯ ನೈಸರ್ಗಿಕ ಅವಗಡಗಳನ್ನು ಸಮರ್ಥವಾಗಿ ಎದುರಿಸಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಇದರ ಜೊತೆಯಲ್ಲೇ ಭಾರತ ಆಂಫನ್ ಹಾಗೂ ನಿಸರ್ಗ್ ಚಂಡಮಾರುತಗಳ ಪ್ರಭಾವವನ್ನೂ ಎದುರಿಸಿತು, ಭೂಕಂಪ, ಪ್ರವಾಹಗಳೂ ಎದುರಾಗಿವೆ ಎಂದು ಪ್ರಧಾನಿ ಮೋದಿ ಹೇಳಿದರು. ಪ್ರಾಕೃತಿಕ ದುರಂತಗಳು ಎದುರಾದಾಗ ಅದನ್ನು ಸಮರ್ಥವಾಗಿ ನಿಭಾಯಿಸುವ ರಕ್ಷಣಾ ಪಡೆಗಳ ಕಾರ್ಯವನ್ನು ಪ್ರಧಾನಿ ಮೋದಿ ಶ್ಲಾಘಿಸಿದರು. ಇದೇ ವೇಳೆ ದುರಂತಗಳಲ್ಲಿ ಮಡಿದವರ ಕುಟುಂಬ ವರ್ಗಕ್ಕೆ ಪ್ರಧಾನಿ ಮೋದಿ ಸಾಂತ್ವನ ಹೇಳಿದರು. ಈ ರೀತಿಯ ಯಾವುದೇ ನೈಸರ್ಗಿಕ ಅವಾಂತರಗಳು ಎದುರಾಗಲಿ, ಭಾರತವು ಏಕತೆಯಿಂದ, ದಿಟ್ಟವಾಗಿ ಎದುರಿಸಲಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಇದೇ ವೇಳೆ ಕೊರೊನಾ ಎರಡನೇ ಅಲೆಯನ್ನು ಪ್ರಸ್ತಾಪಿಸಿದ ಪ್ರಧಾನಿ ಮೋದಿ, ಕೊರತೆ ದೊಡ್ಡ ಸವಾಲಾಯ್ತು ಎಂದು ಹೇಳಿದರು. ದೇಶದ ಮೂಲೆ ಮೂಲೆಗೂ ಆಮ್ಲಜನಕ ರವಾನಿಸೋದು ದೊಡ್ಡ ಸವಾಲಾಯ್ತು ಎಂದು ಅವರು ಹೇಳಿದರು. ಆಮ್ಲಜನಕ ಸಾಗಿಸುವಾಗ, ಅದನ್ನು ಉತ್ಪಾದಿಸುವಾಗ ಒಂದು ಸಣ್ಣ ತಪ್ಪು ನಡೆದರೂ ದೊಡ್ಡ ಸ್ಫೋಟವಾಗುತ್ತೆ. ಈ ಹಂತದಲ್ಲಿ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಆಮ್ಲಜನಕ ಸಾಗಿಸೋದು ಕಷ್ಟಕರ ಸವಾಲು ಎಂದು ಪ್ರಧಾನಿ ಬಣ್ಣಿಸಿದರು. ದೇಶದಲ್ಲಿ ನಿರ್ಮಾಣವಾದ ಎಕ್ಸ್ಪ್ರೆಸ್, ಆಕ್ಸಿಜನ್ ಕಾನ್ಸನ್ಟ್ರೇಟರ್ಸ್ ಸೇರಿದಂತೆ ಇತ್ಯಾದಿ ಉಪಕ್ರಮಗಳ ಬಗ್ಗೆಯೂ ಪ್ರಧಾನಿ ಮೋದಿ ವಿವರಿಸಿದರು. ಭಾರತೀಯ ವಾಯು ಸೇನೆ, ನೌಕಾ ಪಡೆ ಕೂಡಾ ಆಮ್ಲಜನಕ ರವಾನೆ ಕಾರ್ಯದಲ್ಲಿ ತೊಡಗಿದ್ದನ್ನು ಪ್ರಧಾನಿ ಶ್ಲಾಘಿಸಿದರು. ದೇಶದಲ್ಲಿ ಕೊರೊನಾ ಪತ್ತೆ ಪರೀಕ್ಷೆ ಹೆಚ್ಚಾಗಿದೆ, ಲ್ಯಾಬ್ಗಳ ಸಂಖ್ಯೆಯೂ ಹೆಚ್ಚಿದೆ ಎಂದು ಮಾಹಿತಿ ನೀಡಿದ ಪ್ರಧಾನಿ ಮೋದಿ, ಪ್ರತಿ ದಿನ ದೇಶದಲ್ಲಿ 20 ಲಕ್ಷಕ್ಕೂ ಹೆಚ್ಚು ಕೋವಿಡ್ ಪರೀಕ್ಷೆ ನಡೆಸುವ ಸಾಮರ್ಥ್ಯ ಹೊಂದಿದ್ದೇವೆ ಎಂದು ವಿವರಿಸಿದರು. ಇದೇ ವೇಳೆ ತಮ್ಮ ಸರ್ಕಾರಕ್ಕೆ 7 ವರ್ಷದ ತುಂಬಿದ ಬಗ್ಗೆಯೂ ಮಾತನಾಡಿದ ಪ್ರಧಾನಿ ಮೋದಿ, ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎಂಬ ಧ್ಯೇಯವಾಕ್ಯವನ್ನು ಪುನರುಚ್ಚರಿಸಿದರು.
from India & World News in Kannada | VK Polls https://ift.tt/3wNPFuZ