ಹೊಸದಿಲ್ಲಿ: ಟೆಸ್ಟ್, ಓಡಿಐ ಹಾಗೂ ಟಿ20 ಮೂರೂ ಸ್ವರೂಪದಲ್ಲಿ ಭಾರತ ತಂಡವನ್ನು ಅದ್ಭುತವಾಗಿ ಮುನ್ನಡೆಸುತ್ತಿದ್ದಾರೆ. ಇದರ ನಡುವೆ ಪಾಕಿಸ್ತಾನ ಮಾಜಿ ನಾಯಕ , ವಿರಾಟ್ ಕೊಹ್ಲಿ ಬಳಿಕ ಟೀಮ್ ಇಂಡಿಯಾದ ಭವಿಷ್ಯದ ನಾಯಕನ ಸ್ಥಾನಕ್ಕೆ ಅರ್ಹರಾಗಿರುವ ಮೂವರು ಆಟಗಾರರ ಪಟ್ಟಿ ಮಾಡಿದ್ದಾರೆ. ತಮ್ಮ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿರುವ ಬಟ್, ಅಭಿಮಾನಿಯೊಬ್ಬರು ಕೇಳಿದ ಈ ದೊಡ್ಡ ಪ್ರಶ್ನೆಗೆ ಉತ್ತರಿಸುವ ಪ್ರಯತ್ನವನ್ನು ಮಾಡಿದರು. ಹಿರಿಯ ಬ್ಯಾಟ್ಸ್‌ಮನ್‌ಗಳಾದ ಹಾಗೂ ಅಜಿಂಕ್ಯ ರಹಾನೆ ಅವರೊಂದಿಗೆ ಪಾಕ್ ಮಾಜಿ ನಾಯಕ, ಯುವ ವಿಕಿಟ್ ಕೀಪರ್-ಬ್ಯಾಟ್ಸ್‌ಮನ್ ರಿಷಭ್ ಪಂತ್ ಅವರನ್ನು ಆರಿಸಿದರು. "ದೇಶಿ ಕ್ರಿಕೆಟ್‌ನಲ್ಲಿ ರಿಷಭ್ ಪಂತ್ ಅವರ ದಾಖಲೆ ಹೇಗಿದೆ ಎಂದು ನನಗೆ ಹೆಚ್ಚಿನ ಮಾಹಿತಿ ಇಲ್ಲ. ಆದರೆ, ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ನೋಡಿದ್ದೇನೆ. ಶ್ರೇಯಸ್ ಅಯ್ಯರ್ ಅನುಪಸ್ಥಿತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ನಾಯಕತ್ವವನ್ನು ಪಂತ್‌ಗೆ ನೀಡಲಾಗಿದೆ. ಒಂದು ವೇಳೆ ಪಂತ್‌ಗೆ ಪೂರ್ಣ ಪ್ರಮಾಣದಲ್ಲಿ ಡೆಲ್ಲಿ ಫ್ರಾಂಚೈಸಿ ಪಂತ್ ನಾಯಕತ್ವ ನೀಡಿದರೆ, ಬಿಸಿಸಿಐ ಭವಿಷ್ಯದಲ್ಲಿ ಯುವ ಆಟಗಾರನ ಬಗ್ಗೆ ಯೋಜನೆ ರೂಪಿಸಬಹುದು. ಆದರೆ, ವಿರಾಟ್ ಕೊಹ್ಲಿ ಯುವ ಆಟಗಾರನಾಗಿದ್ದು, ಇನ್ನೂ 8 ರಿಂದ 9 ವರ್ಷಗಳ ವರೆಗೆ ಆಡುತ್ತಾರೆ," ಎಂದಿದ್ದಾರೆ. ಇಂಗ್ಲೆಂಡ್ ವಿರುದ್ಧ ಓಡಿಐ ಸರಣಿಯಲ್ಲಿ ಶ್ರೇಯಸ್ ಅಯ್ಯರ್ ಫೀಲ್ಡಿಂಗ್ ವೇಳೆ ಭುಜದ ಗಾಯಕ್ಕೆ ತುತ್ತಾಗಿದ್ದರು. ಈ ಹಿನ್ನೆಲೆಯಲ್ಲಿ ಅವರು ಹದಿನಾಲ್ಕನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಿಂದ ಹೊರ ನಡೆದಿದ್ದರು. ಈ ಕಾರಣದಿಂದ ಪಂತ್‌ಗೆ ಡೆಲ್ಲಿ ಕ್ಯಾಪಿಟಲ್ಸ್ ನಾಯಕತ್ವವನ್ನು ವಹಿಸಲಾಗಿತ್ತು. ಅದರಂತೆ ರಿಷಭ್ ಪಂತ್ ನಿರೀಕ್ಷೆ ಹುಸಿಗೊಳಿಸಲಿಲ್ಲ. ಬಯೋ ಬಬಲ್ ಒಳಗೆ ಹಲವರಿಗೆ ಕೋವಿಡ್-19 ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ 2021ರ ಆವೃತ್ತಿಯ ಐಪಿಎಲ್ ಟೂರ್ನಿಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ. ಈ ವೇಳೆಗೆ ಡೆಲ್ಲಿ ಕ್ಯಾಪಿಟಲ್ಸ್ ಆಡಿದ 8 ಪಂದ್ಯಗಳಲ್ಲಿ ಎರಡರಲ್ಲಿ ಸೋತು, ಇನ್ನುಳಿದ ಆರು ಹಣಾಹಣಿಗಳಲ್ಲಿ ಗೆದ್ದು ಪಾಯಿಂಟ್ಸ್ ಟೇಬಲ್‌ನಲ್ಲಿ ಅಗ್ರ ಸ್ಥಾನವನ್ನು ಅಲಂಕರಿಸಿದೆ. ಭಾರತ ತಂಡದ ಭವಿಷ್ಯದ ನಾಯಕತ್ವಕ್ಕೆ ರೋಹಿತ್ ಶರ್ಮಾ ಕೂಡ ಸೂಕ್ತ ಎಂದು ಹೇಳಿದ ಬಟ್, ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ತಮ್ಮ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಐದು ಪ್ರಶಸ್ತಿ ತಂದುಕೊಟ್ಟಿರುವುದೇ ಇದಕ್ಕೆ ಸಾಕ್ಷಿ ಎಂದು ಹೇಳಿದ್ದಾರೆ. "ರಿಷಭ್ ಪಂತ್ ಜೊತೆಗೆ ರೋಹಿತ್ ಶರ್ಮಾ ಔಟ್ ಸ್ಟಾಂಡಿಂಗ್ ನಾಯಕ. ನಾಯಕನಾಗಿ ಅವರನ್ನು ನಾನು ನಿಜವಾಗಿಯೂ ಇಷ್ಟಪಡುತ್ತೇನೆ. ತಾಂತ್ರಿಕವಾಗಿ ಹಾಗೂ ಅಂಕಿಸಂಖ್ಯೆಗಳಲ್ಲಿ ಅವರು ಅತ್ಯುತ್ತಮ ನಾಯಕ," ಎಂದು ಬಟ್ ಹೇಳಿದರು. ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿಯ ಮೊದಲನೇ ಪಂದ್ಯದಲ್ಲಿ ಭಾರತ ಹೀನಾಯ ಸೋಲು ಅನುಭಸಿದ ಬಳಿಕ ತಂಡದ ನಾಯಕತ್ವ ವಹಿಸಿಕೊಂಡ ಅಜಿಂಕ್ಯ ರಹಾನೆ, ಹಲವು ಸ್ಟಾರ್ ಆಟಗಾರರ ಅನುಪಸ್ಥಿತಿಯಲ್ಲಿ 2-1 ಅಂತರದಲ್ಲಿ ಐತಿಹಾಸಿಕ ಟೆಸ್ಟ್ ಸರಣಿ ಗೆದ್ದಿದ್ದರು. ಇದರಿಂದ ಸಲ್ಮಾನ್ ಬಟ್ ಕೂಡ ಆಕರ್ಷಿತರಾಗಿದ್ದಾರೆ. "ಅಜಿಂಕ್ಯ ರಹಾನೆ ನಾಯಕತ್ವದಲ್ಲಿ ಇತ್ತೀಚೆಗೆ , ಆಸ್ಟ್ರೇಲಿಯಾ ವಿರುದ್ಧ ಅವರದೇ ನೆಲದಲ್ಲಿ ಟೆಸ್ಟ್ ಸರಣಿ ಗೆದ್ದಿದೆ. ಆಸ್ಟ್ರೇಲಿಯಾ ನೆಲದಲ್ಲಿ ರಹಾನೆ ಕೂಡ ಅದ್ಭುತವಾದ ಕೆಲಸವನ್ನು ಮಾಡಿದ್ದಾರೆ. ತಾಂತ್ರಿಕವಾಗಿಯೂ ಅವರು ಅದ್ಭುತವಾಗಿ ಕಂಡಿದ್ದಾರೆ. ಅಲ್ಲದೆ, ನಿರ್ಧಾರ ತೆಗೆದುಕೊಳ್ಳುವುದರಲ್ಲಿ ಅವರು ಅತ್ಯುತ್ತಮವಾಗಿದ್ದಾರೆ," ಎಂದು ಸಲ್ಮಾನ್ ಬಟ್ ಗುಣಗಾಣ ಮಾಡಿದ್ದಾರೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3yHfmz2