ಅಮಾನುಷ ಲೈಂಗಿಕ ದೌರ್ಜನ್ಯದ ವಿಡಿಯೋ ವೈರಲ್: ದುಷ್ಕರ್ಮಿಗಳ ಸುಳಿವು ನೀಡಿದವರಿಗೆ ಬಹುಮಾನ ಘೋಷಣೆ

ಗುವಾಹಟಿ: ಲೈಂಗಿಕ ದೌರ್ಜನ್ಯ ಘಟನೆಯೊಂದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ಘಟನೆಯು ನಾಗಾಲ್ಯಾಂಡ್‌ನಲ್ಲಿ ನಡೆದಿರುವುದು ಅಲ್ಲ ಎಂದು ಪೊಲೀಸರು ಗುರುವಾರ ಸ್ಪಷ್ಟೀಕರಣ ನೀಡಿದ್ದಾರೆ. ಈ ಹೇಯ ಕೃತ್ಯರಾದವರ ಬಗ್ಗೆ ಮಾಹಿತಿ ನೀಡಿದವರಿಗೆ ಸೂಕ್ತ ಬಹುಮಾನ ನೀಡಲಾಗುವುದು ಎಂದು ಪೊಲೀಸರು ಘೋಷಿಸಿದ್ದಾರೆ. ದುಷ್ಕರ್ಮಿಗಳ ಗುಂಪೊಂದು ಲೈಂಗಿಕ ದೌರ್ಜನ್ಯ ಎಸಗುವ ಆಘಾತಕಾರಿ ದೃಶ್ಯಗಳುಳ್ಳ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಮೇ 23ರಂದು ರಾಜಸ್ಥಾನದ ಜೋಧಪುರದಲ್ಲಿ ಆತ್ಮಹತ್ಯೆ ಮಾಡಿಕೊಂಡ ಮೂಲದ ಸಂತ್ರಸ್ತೆಯದ್ದೇ ವಿಡಿಯೋ ಇದು ಎಂದು ಸಾಮಾಜಿಕ ಜಾಲತಾಣದಲ್ಲಿ ಹೇಳಲಾಗಿತ್ತು. ಈ ಘಟನೆ ಬಗ್ಗೆ ಆಕ್ರೋಶಗೊಂಡಿದ್ದ ನೆಟ್ಟಿಗರು ಮತ್ತು ನಾಗರಿಕ ಸಮುದಾಯ ಗುಂಪುಗಳು ಸಂತ್ರಸ್ತೆಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದ್ದರು. ಇದು ಜನಾಂಗೀಯ ದ್ವೇಷದ ಮತ್ತೊಂದು ಅಪರಾಧ ಕೃತ್ಯ ಎಂದು ಆರೋಪಿಸಲಾಗಿತ್ತು. ಮಹಿಳೆಯೊಬ್ಬಳನ್ನು ಒಳಗೊಂಡ ಗುಂಪೊಂದು, ಸಂತ್ರಸ್ತೆಯನ್ನು ಥಳಿಸುವ, ಒದೆಯುವ ಹಾಗೂ ಆಕೆಯ ಮುಖದ ಮೇಲೆ ಹತ್ತಿ ನಿಲ್ಲುವ ಅಮಾನವೀಯ ಕೃತ್ಯಗಳನ್ನು ಎಸಗುವುದು ವಿಡಿಯೋದಲ್ಲಿ ಸೆರೆಯಾಗಿದೆ. ಸಂತ್ರಸ್ತೆ ಸಹಾಯಕ್ಕಾಗಿ ಯಾಚಿಸುತ್ತಿದ್ದಾಗ ಆ ದುಷ್ಕರ್ಮಿಗಳ ಗುಂಪು ಆಕೆಯ ಮೇಲೆ ಮತ್ತಷ್ಟು ದೌರ್ಜನ್ಯ ಎಸಗಿ ಹಿಂಸಿಸಿದೆ. ಬಳಿಕ ಆಕೆಯ ಬಟ್ಟೆಗಳನ್ನು ಕಳಚಿ ಬೆತ್ತಲಾಗಿಸಿ, ಹಲ್ಲೆ ಮುಂದುವರಿಸಿದ್ದಾರೆ. ಈ ವಿಡಿಯೋದಲ್ಲಿ ಇರುವುದು ನಾಗಾಲ್ಯಾಂಡ್‌ನಲ್ಲಿ ದೌರ್ಜನ್ಯಕ್ಕೆ ಒಳಗಾಗಿದ್ದ ಮಹಿಳೆ ಎಂದು ಅನೇಕರು ಪ್ರತಿಪಾದಿಸಿದ್ದಾರೆ. ಈ ವಿಡಿಯೋ ಅಪ್‌ಲೋಡ್ ಆದ ಕೆಲವೇ ನಿಮಿಷಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಸ್ಸಾಂನ ಎಸಿಪಿ ನೂರ್ ಮೊಹಮ್ಮದ್, ಇದು ಲಾಕ್‌ಡೌನ್ ಕಾರಣದಿಂದ ಕುಟುಂಬದವರನ್ನು ಭೇಟಿ ಮಾಡಲಾಗದೆ ಬೇಸರಗೊಂಡು ಭಾನುವಾರ ರಾಜಸ್ಥಾನದ ಜೋಧಪುರದಲ್ಲಿ ಸೀಲಿಂಗ್ ಫ್ಯಾನ್‌ಗೆ ನೇಣುಹಾಕಿಕೊಂಡಿದ್ದ ನಾಗಾಲ್ಯಾಂಡ್ ಮಹಿಳೆಯ ವಿಡಿಯೋ ಅಲ್ಲ ಎಂದು ಹೇಳಿದ್ದಾರೆ. ಈ ಇಬ್ಬರೂ ಮಹಿಳೆಯರು ಒಬ್ಬರೇ ಅಲ್ಲ ಎಂದು ಕೇಂದ್ರ ಸಚಿವ ಕಿರಣ್ ರಿಜಿಜು ಕೂಡ ಹೇಳಿದ್ದಾರೆ. 'ನಾಲ್ವರು ಪುರುಷರು ಹಾಗೂ ಒಬ್ಬ ಮಹಿಳೆಯಿಂದ ಅಮಾನುಷವಾಗಿ ಹಾಗೂ ಹಿಂಸೆಗೆ ಒಳಗಾಗುವ ಈಶಾನ್ಯ ರಾಜ್ಯದ ಯುವತಿಯ ವಿಡಿಯೋಕ್ಕೂ ಜೋಧಪುರದ ಆತ್ಮಹತ್ಯೆ ಪ್ರಕರಣಕ್ಕೂ ಸಂಬಂಧವಿಲ್ಲ. ಜೋಧಪುರದ ಪೊಲೀಸ್ ಕಮಿಷನ್ ಜತೆ ನಾನು ವಿವರವಾಗಿ ಚರ್ಚೆ ನಡೆಸಿದ್ದೇನೆ. ಆದರೆ ಪಾತಕಿಗಳನ್ನು ಸೆರೆಹಿಡಿಯುವ ಎಲ್ಲ ಪ್ರಯತ್ನಗಳನ್ನೂ ರಾಜ್ಯ ಪೊಲೀಸರು ನಡೆಸಬೇಕು' ಎಂದು ಕಿರಣ್ ರಿಜಿಜು ತಿಳಿಸಿದ್ದಾರೆ. ವಿಡಿಯೋದಲ್ಲಿ ದಾಖಲಾದ ಐವರು ಆರೋಪಿಗಳ ಫೋಟೊಗಳನ್ನು ಅಸ್ಸಾಂ ಪೊಲೀಸರು ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಪ್ರಕಟಿಸಿದ್ದಾರೆ. ಈಶಾನ್ಯದ ಎಲ್ಲ ರಾಜ್ಯಗಳ ಪೊಲೀಸರನ್ನೂ ಟ್ಯಾಗ್ ಮಾಡಿ, ಅಪರಾಧಿಗಳ ಪತ್ತೆಗೆ ಜತೆಗೂಡಿ ಕೆಲಸ ಮಾಡುವಂತೆ ಮನವಿ ಮಾಡಿದ್ದಾರೆ.


from India & World News in Kannada | VK Polls https://ift.tt/3vqGqAF

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...