ಹೊಸ ಐಟಿ ನೀತಿ: ಆನ್‌ಲೈನ್ ಸುದ್ದಿ ಮಾಧ್ಯಮ, ಒಟಿಟಿಗಳಿಗೆ 15 ದಿನಗಳ ಕಾಲಾವಕಾಶ ನೀಡಿದ ಸರ್ಕಾರ

ಹೊಸದಿಲ್ಲಿ: ಫೆಬ್ರವರಿಯಲ್ಲಿ ಹೊರಡಿಸಲಾದ ನೂತನ ಮಾಹಿತಿ ತಂತ್ರಜ್ಞಾನ ನಿಯಮಗಳನ್ನು ಒಪ್ಪಿಕೊಳ್ಳುವುದಕ್ಕೆ ಸಂಬಂಧಿಸಿದಂತೆ ವಿವರಗಳನ್ನು ಒದಗಿಸುವಂತೆ ಆನ್‌ಲೈನ್ ಸುದ್ದಿ ಮತ್ತು ವೇದಿಕೆಗಳಿಗೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯ 15 ದಿನಗಳ ಕಾಲಾವಕಾಶ ನೀಡಿದೆ. ಸಾಮಾಜಿಕ ಜಾಲತಾಣಗಳು ಈ ವಿರುದ್ಧ ನ್ಯಾಯಾಲಯಗಳಿಗೆ ಮನವಿ ಸಲ್ಲಿಸಿದ್ದರೂ, ಇದೇ ರೀತಿಯ ಅಂಗೀಕಾರ ವರದಿಗಳನ್ನು ನೀಡುವಂತೆ ಬುಧವಾರ 24 ಗಂಟೆಗಳ ಕಾಲಾವಕಾಶ ನೀಡಿತ್ತು. ಕಳೆದ ಫೆಬ್ರವರಿಯಲ್ಲಿ ಐಟಿ ನಿಯಮ 2021, ಅನ್ನು ಸರ್ಕಾರ ರೂಪಿಸಿತ್ತು. ಇದರ ಅನ್ವಯ ಡಿಜಿಟಲ್ ಸುದ್ದಿ ಸಂಸ್ಥೆಗಳು, ಸಾಮಾಜಿಕ ಮಾಧ್ಯಮಗಳು ಮತ್ತು ಒಟಿಟಿ ಸ್ಟ್ರೀಮಿಂಗ್ ಸೇವೆಗಳನ್ನು ಸರ್ಕಾರದ ನಿಯಂತ್ರಣಕ್ಕೆ ಒಳಪಡಿಸಲಾಗುತ್ತದೆ. ಈ ಕಾನೂನು ಡಿಜಿಟಿಲ್ ಸುದ್ದಿ ಮಾಧ್ಯಮಗಳನ್ನು ಪತ್ರಿಕಾ ಮಂಡಳಿಯ ನಿಯಮಗಳ ಅಡಿ ತಂದಿದೆ. ಸುದ್ದಿ ವೆಬ್‌ಸೈಟ್‌ಗಳು ಮಾಹಿತಿ ಮತ್ತು ಪ್ರಸಾರ ಸಚಿವಾಲಯದಲ್ಲಿ ನೋಂದಣಿ ಮಾಡಿಸಿಕೊಳ್ಳುವುದು ಅಗತ್ಯವಾಗಿದೆ. ಸುದ್ದಿ ವೆಬ್‌ಸೈಟ್‌ಗಳು ಹಾಗೂ ಒಟಿಟಿ ವೇದಿಕೆಗಳಲ್ಲಿ ಪ್ರತಿಯೊಬ್ಬರಿಗೂ ನ್ಯಾಯಸಮ್ಮತ ಮತ್ತು ಸಮಾನ ಅವಕಾಶದೊಂದಿಗೆ ಮೃದು ಸ್ಪರ್ಶದ ಪ್ರಗತಿಪರ ಸಾಂಸ್ಥಿಕ ಯಾಂತ್ರಿಕತೆ ನೀಡಲು ಬಯಸಿರುವುದಾಗಿ. ಇದಕ್ಕೆ ನೀತಿ ಸಂಹಿತೆ ಹಾಗೂ ಮೂರು ಹಂತದ ಅಹವಾಲು ಆಲಿಕೆ ವ್ಯವಸ್ಥೆ ಒದಗಿಸಲು ಬಯಸಿರುವುದಾಗಿ ಸರ್ಕಾರ ನಿಯಮಗಳ ಅಧಿಸೂಚನೆ ವೇಳೆ ತಿಳಿಸಿತ್ತು.


from India & World News in Kannada | VK Polls https://ift.tt/3oVoEmn

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...