'ಯಾರ ಅಪ್ಪನಿಗೂ ನನ್ನನ್ನು ಬಂಧಿಸಲು ಆಗುವುದಿಲ್ಲ': ಬಾಬಾ ರಾಮ್‌ದೇವ್ ಹೇಳಿಕೆ ವೈರಲ್

ಹರಿದ್ವಾರ: ಆಯುರ್ವೇದ ಸಮೂಹದ ಸ್ಥಾಪಕ ಹಾಗೂ ಯೋಗಗುರು ಮತ್ತು ಭಾರತೀಯ ವೈದ್ಯಕೀಯ ಸಂಸ್ಥೆ ನಡುವಿನ ಸಂಘರ್ಷ ಮುಂದುವರಿದಿದೆ. ಅಲೋಪಥಿ ವೈದ್ಯಕೀಯ ಪದ್ಧತಿಯಿಂದ ಕೋವಿಡ್ ಚಿಕಿತ್ಸೆ ಪಡೆದವರೇ ಹೆಚ್ಚಿನ ಸಂಖ್ಯೆಯಲ್ಲಿ ಸಾಯುತ್ತಿದ್ದಾರೆ ಎಂಬ ಹೇಳಿಕೆ ನೀಡಿದ್ದ ಬಾಬಾ ರಾಮ್‌ದೇವ್ ವಿರುದ್ಧ ಪ್ರಕರಣ ದಾಖಲಿಸುವಂತೆ ಆಗ್ರಹಿಸಿದೆ. ಈ ಮಧ್ಯೆ, ರಾಮ್‌ದೇವ್ ಅವರ ಮತ್ತೊಂದು ವಿಡಿಯೋ ಬುಧವಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸಾಮಾಜಿಕ ಜಾಲತಾಣಗಳಲ್ಲಿನ '#ರಾಮ್‌ದೇವ್ ಅವರನ್ನು ಬಂಧಿಸಿ' ಎಂಬ ಹ್ಯಾಷ್‌ಟ್ಯಾಗ್ ಟ್ರೆಂಡ್ ಬಗ್ಗೆ ಕೆಲವು ವ್ಯಕ್ತಿಗಳ ಜತೆ ಮಾತನಾಡುವ ಸಂದರ್ಭದಲ್ಲಿ ರಾಮ್‌ದೇವ್, ತಮ್ಮನ್ನು 'ಯಾರಪ್ಪನಿಂದಲೂ ಬಂಧಿಸಲು ಸಾಧ್ಯವಿಲ್ಲ' ಎಂದು ಹೇಳಿರುವುದು ವಿಡಿಯೋದಲ್ಲಿ ದಾಖಲಾಗಿದೆ. 'ಏನಾದರೂ ಆಗಲಿ, ಸ್ವಾಮಿ ರಾಮ್‌ದೇವ್ ಅವರನ್ನು ಬಂಧಿಸಲು ಅವರ ಅಪ್ಪನಿಗೂ ಸಾಧ್ಯವಾಗುವುದಿಲ್ಲ' ಎಂದು ರಾಮ್‌ದೇವ್ ಹೇಳಿಕೊಂಡಿದ್ದಾರೆ. ''ಅವರು, 'ಕಳ್ಳ ರಾಮ್‌ದೇವ್', 'ಮಹಾಕಳ್ಳ ರಾಮ್‌ದೇವ್', 'ರಾಮ್‌ದೇವ್‌ನನ್ನು ಬಂಧಿಸಿ' ಮತ್ತೂ ಇನ್ನಷ್ಟು ಟ್ರೆಂಡ್‌ಗಳನ್ನು ಸೃಷ್ಟಿಸುತ್ತಲೇ ಇರುತ್ತಾರೆ. ಅವರು ಅದನ್ನು ಮಾಡಿಕೊಂಡಿರಲಿ. ನಮ್ಮ ಜನರು ಅಂತಹ ಟ್ರೆಂಡ್‌ಗಳನ್ನು ನಡೆಸುವುದನ್ನು ರೂಢಿಮಾಡಿಕೊಂಡಿದ್ದಾರೆ. ನಮ್ಮ ಟ್ರೆಂಡ್ ಯಾವಾಗಲೂ ಎತ್ತರಕ್ಕೆ ತಲುಪಲಿದೆ'' ಎಂದು ರಾಮ್‌ದೇವ್ ಹೇಳಿರುವುದು ವೈರಲ್ ಆಗಿದೆ. ರಾಮ್‌ದೇವ್ ಅವರ ಹೇಳಿಕೆ ದರ್ಪದಿಂದ ಕೂಡಿದೆ ಎಂದು ಉತ್ತರಾಖಂಡದ ಐಎಂಎ ಟೀಕಿಸಿದೆ. ಇದುವರೆಗೂ ರಾಮ್‌ದೇವ್ ವಿರುದ್ಧ ಇಲ್ಲಿ ಯಾವುದೇ ದೂರು ದಾಖಲಾಗಿಲ್ಲ ಎಂಬುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಅಲೋಪಥಿ ವೈದ್ಯಕೀಯ ಪದ್ಧತಿ ಹಾಗೂ ವೈದ್ಯರ ಬಗ್ಗೆ ಅವಹೇಳನಾಕಾರಿ ಹೇಳಿಕೆ ನೀಡಿದ್ದಕ್ಕಾಗಿ ರಾಮ್‌ದೇವ್‌ಗೆ ಐಎಂಎ 1,000 ಕೋಟಿ ರೂ ನೋಟಿಸ್ ನೀಡಿದೆ. 15 ದಿನಗಳ ಒಳಗೆ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದೆ.


from India & World News in Kannada | VK Polls https://ift.tt/3uow56P

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...