ಅವ್ಯವಹಾರ ಆರೋಪದ ಬಳಿಕ ಎಚ್ಚೆತ್ತುಕೊಂಡ ಬಿಬಿಎಂಪಿ! ಸದ್ಯ ಲಭ್ಯವಿರುವ ಬೆಡ್‌ಗಳೆಷ್ಟು?

ಬೆಂಗಳೂರು: ಬೆಂಗಳೂರಿನಲ್ಲಿ ನಡೆಯುತ್ತಿದ್ದ ಬೆಡ್‌ ದಂಧೆ ಆರೋಪ ರಾಜ್ಯಾದ್ಯಂತ ಭಾರೀ ಸುದ್ದಿ ಮಾಡಿದ ಬೆನ್ನಲ್ಲೇ ಬಿಬಿಎಂಪಿ ಎಚ್ಚೆತ್ತುಕೊಂಡಿದ್ದು ಸದ್ಯ ಬೆಂಗಳೂರಿನಲ್ಲಿ 2015 ಬೆಡ್‌ಗಳು ಖಾಲಿ ಇದ್ದು 27 ಐಸಿಯು ಬೆಡ್‌ಗಳು ಲಭ್ಯವಿದೆ. ಬಿಜೆಪಿ ಸಂಸದ ಬಿಬಿಎಂಪಿ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಬೆಡ್‌ ಹಗರಣಗಳ ಬಗ್ಗೆ ಮಂಗಳವಾರ ಬಹಿರಂಗ ಪಡಿಸಿದ್ದರು. ಈ ಸುದ್ದಿ ಅಲ್ಲೋಲ ಕಲ್ಲೋಲ ಸೃಷ್ಟಿ ಮಾಡಿತ್ತು. ಈ ಬಗ್ಗೆ ಸೂಕ್ತ ತನಿಖೆ ನಡೆಸುವುದಾಗಿ ಸಿಎಂ ಬಿಎಸ್‌ ಯಡಿಯೂರಪ್ಪ ಅವರು ತಿಳಿಸಿದ್ದರು. ಈ ನಡುವೆ ಬಿಬಿಎಂಪಿ ಸದ್ಯ ಬೆಂಗಳೂರಿನಲ್ಲಿ ಲಭ್ಯ ಇರುವ ಬೆಡ್‌ಗಳ ಕುರಿತಾಗಿ ಮಾಹಿತಿಯನ್ನು ನೀಡಿದೆ. ಇದುವರೆಗೆ ಕೋವಿಡ್ ಸೋಂಕಿತರು ಬೆಡ್‌ಗಾಗಿ ಕರೆ ಮಾಡಿದರೂ ಯಾವುದೇ ಪ್ರಯೋಜನ ಆಗುತ್ತಿರಲಿಲ್ಲ. ಇದರಿಂದ ಸೋಂಕಿತರು ಅಗತ್ಯ ಚಿಕಿತ್ಸೆ ಸಿಗದೆ ಆಸ್ಪತ್ರೆಯಿಂದ ಆಸ್ಪತ್ರೆಗೆ ಪರದಾಟ ನಡೆಸುವ ಸ್ಥಿತಿ ನಿರ್ಮಾನವಾಗಿತ್ತು. ಆದರೆ ಇದೀಗ ನಗರದ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಬೆಡ್‌ಗಳು ಲಭ್ಯವಿದೆ. ನಗರದ ನಾಲ್ಕು ಸರ್ಕಾರಿ ಮೆಡಿಕಲ್ ಕಾಲೇಜು 1020 ಬೆಡ್‌ಗಳನ್ನು ಕೋವಿಡ್ ಸೋಂಕಿತರಿಗೆ ಮೀಸಲಿಡಲಾಗಿದೆ. ಈ ಪೈಕಿ 973 ಬೆಡ್‌ಗಳು ಭರ್ತಿ ಆಗಿವೆ. ಸದ್ಯ 47 ಬೆಡ್‌ಗಳು ಖಾಲಿ ಇವೆ ಬೆಂಗಳೂರಿನ 14 ಸರ್ಕಾರಿ ಆಸ್ಪತ್ರೆಗಳಲ್ಲಿ 907 ಬೆಡ್‌ಗಳನ್ನು ಕೋವಿಡ್‌ಗಾಗಿ ಮೀಸಲಿಡಲಾಗಿದೆ. ಈ ಪೈಕಿ 824 ಬೆಡ್‌ಗಳು ಭರ್ತಿ ಆಗಿದ್ದು 83 ಖಾಲಿ ಇವೆ ನಗರದ 12 ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ-5347 ಬೆಡ್‌ಗಳನ್ನು ಮೀಸಲಿಡಲಾಗಿದೆ. ಈ ಪೈಕಿ 3969 ಬೆಡ್‌ಗಳು ಭರ್ತಿ ಆಗಿವೆ. 1378 ಬೆಡ್‌ಗಳು ಖಾಲಿ ಇವೆ. ಜೊತೆಗೆ 128 ಖಾಸಗಿ ಆಸ್ಪತ್ರೆಗಳಲ್ಲಿ 4005 ಬೆಡ್‌ಗಳನ್ನು ಕೋವಿಡ್‌ಗಾಗಿ ಮೀಸಲಿಡಲಾಗಿದೆ. 3498 ಬೆಡ್‌ಗಳು ಭರ್ತಿ ಆಗಿದ್ದು 507 ಬೆಡ್‌ ಖಾಲಿ ಇವೆ. 27 ಐಸಿಯು ಬೆಡ್‌ಗಳು ಖಾಲಿ ಇವೆ. ಒಟ್ಟು 2015 ಬೆಡ್‌ಗಳು ಖಾಲಿ ಇದ್ದು, 27 ಐಸಿಯು ಬೆಡ್‌ಗಳು ಕೂಡಾ ಸದ್ಯ ಕೋವಿಡ್‌ ಸೋಂಕಿತರಿಗೆ ಲಭ್ಯವಿದೆ.


from India & World News in Kannada | VK Polls https://ift.tt/3nPUHUA

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...