ಬಿಬಿಎಂಪಿ ಕೋವಿಡ್‌ ಬೆಡ್‌ ದಂಧೆ: ನ್ಯಾಯಾಂಗ ತನಿಖೆಗೆ ಜನವಾದಿ ಮಹಿಳಾ ಸಂಘಟನೆ ಆಗ್ರಹ

ಬೆಂಗಳೂರು: ವಾರ್‌ ರೂಂ ಮೂಲಕ ನಡೆಯುತ್ತಿರುವ ಕೋವಿಡ್‌ ಬೆಡ್‌ ದಂಧೆ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ನೀಡಬೇಕು ಎಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಆಗ್ರಹಿಸಿದೆ. ವಾರ್ ರೂಂ ಗಳನ್ನು ರಚಿಸಲು ಅಲ್ಲಿ ಸಿಬ್ಬಂದಿಯನ್ನು ನೇಮಿಸಲು ಅನುಸರಿಸಿದ ಮಾನದಂಡಗಳೇನು? ಬೆಡ್ ಬ್ಲಾಕ್‌ ಮಾಡಿದ ಆಸ್ಪತ್ರೆಗಳ ಪಾತ್ರವೇನು? ವಾರ್ ರೂಂ ಗಳ ಕೇಂದ್ರ ಮಾನಿಟರಿಂಗ್ ವ್ಯವಸ್ಥೆ ಗಳೇನಿವೆ ಇವೆಲ್ಲ ಮಾಹಿತಿ ಗಳು ಸಾರ್ವಜನಿಕರಿಗೆ ದೊರೆಯಬೇಕು ಎಂದು ಸಂಘಟನೆ ಆಗ್ರಹಿಸಿದೆ. ಕೊರೊನಾದಿಂದ ತತ್ತರಿಸಿ ಆಸ್ಪತ್ರೆ ಯ ಬೆಡ್ ಗಳಿಗಾಗಿ ಜನ‌ ಬೀದಿ ಬೀದಿ ಅಲೆಯುತ್ತಿದ್ದಾರೆ. ಉಳ್ಳವರಿಗೆ ಯಾವ ಸಮಸ್ಯೆಯೂ ಇಲ್ಲದೇ ಬೆಡ್ ಆಕ್ಸಿಜನ್ ಔಷಧಿ ಎಲ್ಲವೂ ಸಿಗುವಾಗ ಜನ ಸಾಮಾನ್ಯರು ಪರದಾಡಿ ಸಾಯುತ್ತಿದ್ದಾರೆ. ಈ ಹೊತ್ತಿನಲ್ಲಿ ಬಿ.ಬಿ.ಎಂ.ಪಿ ವಾರ್ ರೂಂ ಗಳು ಬೆಡ್ ಬ್ಲಾಕ್ ದಂಧೆಯಲ್ಲಿ ತೊಡಗಿವೆ. ಸುಮಾರು 4065 ಬೆಡ್ ಗಳನ್ನು ಅಕ್ರಮವಾಗಿ ಕಾಯ್ದಿರಿಸಲಾಗಿದೆ ಎಂಬ ಮಾಹಿತಿಯನ್ನು ಸ್ವತಃ ಬಿ.ಜೆ.ಪಿ.ಯ ಸಂಸದ ಶಾಸಕರೇ ಬಯಲಿಗೆಳೆದರೆಂಬುವುದು ಹಲವು ಅನುಮಾನಗಳನ್ನು ಹುಟ್ಟಿಸುತ್ತಿವೆ. ಈ ನಿಟ್ಟಿನಲ್ಲಿ ಸತ್ಯವನ್ನು ಬಯಲಿಗೆಳೆಯಲು ನ್ಯಾಯಾಂಗ ತನಿಖೆಯೊಂದೆ ಮಾರ್ಗ ಎಂದು ಜನವಾದಿ ಸಂಘಟನೆಯ ಅಧ್ಯಕ್ಷರಾದ ದೇವಿ ಹಾಗೂ ಪ್ರಧಾನ ಕಾರ್ಯದರ್ಶಿ ಗೌರಮ್ಮಅಭಿಪ್ರಾಯ ಪಟ್ಟಿದ್ದಾರೆ. ಸಂಪುಟ ಸಭೆಯಲ್ಲಿ ಕೆಲವು ಸಚಿವರಿಗೆ ಜವಾಬ್ದಾರಿ ಹಂಚಿದ‌ ವರದಿಗಳು ಬರುತ್ತಿದ್ದು ಪ್ರತಿ ದಿನ ಅವರ ಕೆಲಸಗಳ ಮತ್ತು ಲಭ್ಯವಿರುವ ವ್ಯವಸ್ಥೆಯ ಮಾಹಿತಿಯನ್ನು ಕಡ್ಡಾಯವಾಗಿ ಜನರಿಗೆ ತಿಳಿಸಬೇಕು. ಪಾರದರ್ಶಕ ಮಾಹಿತಿ ನಮ್ಮ ಹಕ್ಕು ಎಂದು ನಾವು ‌ಭಾವಿಸುತ್ತೇವೆ.ಸುಳ್ಳಿನ‌ ಸರದಾರರಾಗಿರುವ ಮುಖ್ಯಮಂತ್ರಿಗಳು, ಸಚಿವರು, ಶಾಸಕರು ಸಭೆ ಸಮಾಲೋಚನೆ ಗಳನ್ನು ಪ್ರಚಾರದ ತಂತ್ರವಾಗಿ ಬಳಸುತ್ತಿದ್ದು ಜನರನ್ನು ಮರುಳು‌ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಚಾಮರಾಜನಗರ ದಲ್ಲಿ ಆಕ್ಸಿಜನ್ ಕೊರತೆಯಿಂದ 24 ಜನ ಮೃತ ಪಟ್ಟಿದ್ದರೆ ಆರೋಗ್ಯ ಸಚಿವರು ಕೇವಲ‌ ಮೂರು ಸಾವೆಂದು ಪತ್ರಿಕಾಗೋಷ್ಠಿ ನಡೆಸಿದ ಘಟನೆಯೂ ಖಂಡನಾರ್ಹ ಎಂದು ಸಂಘಟನೆ ಆಕ್ರೋಶ ವ್ಯಕ್ತಪಡಿಸಿದೆ.


from India & World News in Kannada | VK Polls https://ift.tt/3nPGUNq

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...