ರಾಜ್ಯದಲ್ಲಿ ಆಕ್ಸಿಜನ್‌ಗೆ ಯಾಕಿಷ್ಟು ಹಾಹಾಕಾರ ? ಸೋಂಕು ತೀವ್ರ ಇದ್ದವರಿಗೆ ನಿಮಿಷಕ್ಕೆ 15ಲೀ ಗೂ ಹೆಚ್ಚು ಪ್ರಾಣವಾಯು ಅಗತ್ಯ!

ಮಹಾಬಲೇಶ್ವರ ಕಲ್ಕಣಿ ಬೆಂಗಳೂರು ಬೆಂಗಳೂರು: ಸೋಂಕು ಹೆಚ್ಚಾದಂತೆ ಕೊರತೆ ಬಿಗಡಾಯಿಸುತ್ತಿದೆ. ಒಬ್ಬ ತೀವ್ರ ಸೋಂಕಿತನಿಗೆ ಪ್ರತಿ ನಿಮಿಷಕ್ಕೆ 15 ಲೀಟರ್‌ಗಿಂತ ಹೆಚ್ಚು ಆಕ್ಸಿಜನ್‌ ಪೂರೈಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಜೀವವಾಯು ಅತ್ಯಮೂಲ್ಯವಾಗಿದ್ದು, ಅದನ್ನು ವಿವೇಚನೆಯಿಂದ ಬಳಸುವಂತೆ ಸರಕಾರ ಸುತ್ತೋಲೆಯನ್ನು ಹೊರಡಿಸಿದೆ. ಕೆಲವು ರೋಗಿಗಳಿಗೆ ಕಡಿಮೆ ಅಮ್ಲಜನಕ ಸಾಕು. ಇನ್ನೂ ಕೆಲವರಿಗೆ ಹೆಚ್ಚಿನ ಆಕ್ಸಿಜನ್‌, ಮತ್ತೆ ಕೆಲವರಿಗೆ ಆಕ್ಸಿಜನ್‌ನ ಅವಶ್ಯಕತೆಯೇ ಇರುವುದಿಲ್ಲ. ಹೀಗಾಗಿ, ಆಕ್ಸಿಜನ್‌ ಅವಶ್ಯವಿರುವ ರೋಗಿಗಳನ್ನು ಐದು ವಲಯಗಳಾಗಿ ವಿಂಗಡಿಸುವಂತೆ ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಯಾವ ವಲಯಕ್ಕೆ ಎಷ್ಟು ಆಕ್ಸಿಜನ್‌ ಬೇಕು ವಲಯ ಎ: ಆಕ್ಸಿಜನ್‌ ಅಗತ್ಯವಿಲ್ಲದ ರೋಗಿಗಳ ವಾರ್ಡ್‌ ಬಿ1: ನಿಮಿಷಕ್ಕೆ 1 ರಿಂದ 5 ಲೀ ವೇಗ ಬಿ2: ನಿಮಿಷಕ್ಕೆ 6 ರಿಂದ 10 ಲೀ ವೇಗ ಸಿ: ನಿಮಿಷಕ್ಕೆ 11 ರಿಂದ 15 ಲೀ ವೇಗ ಡಿ: ನಿಮಿಷಕ್ಕೆ 15 ಲೀ ವೇಗ ಆಕ್ಸಿಜನ್‌ ಕುರಿತು ತಜ್ಞ ವೈದ್ಯರು ಹೇಳುದೇನು ಸಾಮಾನ್ಯ ಸ್ಥಿತಿಯ ರೋಗಿ ನಿಮಿಷಕ್ಕೆ 2 ರಿಂದ 6 ಲೀಟರ್‌ ಆಕ್ಸಿಜನ್‌ ತೆಗೆದುಕೊಳ್ಳುತ್ತಾನೆ. ದಿನಕ್ಕೆ ಒಂದು ಜಂಬೋ ಸಿಲಿಂಡರ್‌ ಅವಶ್ಯಕತೆ ಇದ್ದರೆ, ಸೋಂಕಿತ ರೋಗಿಗೆ ಪ್ರತಿದಿನಕ್ಕೆ 8 ರಿಂದ 10 ಜಂಬೂ ಸಿಲಿಂಡರ್‌ ಬೇಕಾಗುತ್ತದೆ. ಒಂದು ಜಂಬೋ ಸಿಲಿಂಡರ್‌ ಸುಮಾರು 7000 ಲೀಟರ್‌ ಆಕ್ಸಿಜನ್‌ ಹೊಂದಿರುತ್ತದೆ. 'ಸೋಂಕಿತರು ತೆಗೆದುಕೊಂಡಷ್ಟು ಆಕ್ಸಿಜನ್‌ ಬೇರೆ ಯಾವ ಕಾಯಿಲೆಗೂ ಬೇಕಾಗದು. ಕೊರೊನಾಕ್ಕೆ ಔಷಧಗಿಂತ ಹೆಚ್ಚು ಆಕ್ಸಿಜನ್‌ ಬೇಕು' ಎನ್ನುತ್ತಾರೆ ವೈದ್ಯರಾದ ಡಾ. ಜಗದೀಶ್‌ ಹಿರೇಮಠ್‌. 'ಪ್ರತೀ ಕೋವಿಡ್‌ ರೋಗಿ ಆಕ್ಸಿಜನ್‌ಗೆ ಹಾಸಿಗೆಗೆ ದಾಖಲಾದಾಗ ಪ್ರತೀ ನಿಮಿಷಕ್ಕೆ ಸರಿ ಸುಮಾರು 7 ರಿಂದ 30 ಲೀಟರ್‌ ಆಕ್ಸಿಜನ್‌ ಪ್ರತಿ ನಿಮಿಷಕ್ಕೆ ಬೇಕಾಗುತ್ತದೆ. ಇವತ್ತಿನ ಸಂದರ್ಭದಲ್ಲಿ ಆಕ್ಸಿಜನ್‌ ಕೊರತೆಗೆ ಮುಖ್ಯ ಕಾರಣ ಕೂಡ ಬೇಡಿಕೆ ಹೆಚ್ಚಿರುವುದು. ಸಾಮಾನ್ಯವಾಗಿ ನಮ್ಮಲ್ಲಿ ಪ್ರತಿ ತಿಂಗಳಿಗೆ ಸರಿ ಸುಮಾರು 30 ಆಕ್ಸಿಜನ್‌ ಸಿಲಿಂಡರ್‌ಗಳ ಅವಶ್ಯಕತೆ ಇತ್ತು. ಪ್ರಸ್ತುತ ನಮಗೆ ಪ್ರತಿನಿತ್ಯ 30 -45 ಅಂತಹ ಸಿಲಿಂಡರ್‌ಗಳು ಬೇಕಾಗಿವೆ' ಎಂದು ಅವರು ಹೇಳಿದರು. ಸೋಂಕಿನ ಬಗ್ಗೆ ನಿರ್ಲಕ್ಯ ಬೇಡ ಸೋಂಕಿತರು ಆದಷ್ಟು ಬೇಗ ಚಿಕಿತ್ಸೆ ಪಡೆಯುವುದರಿಂದ ಆಕ್ಸಿಜನ್‌ ಬೇಕಾಗುವುದಿಲ್ಲ. ರೋಗದ ಲಕ್ಷಣವಿದ್ದು ಟೆಸ್ಟ್‌ ಮಾಡಿಸದೇ ದಿನಕಳೆಯುತ್ತಿದ್ದರೆ ಸೋಂಕು ತೀವ್ರಗತಿಯಲ್ಲಿಹರಡಿದಾಗ ಆಕ್ಸಿಜನ್‌ ಬೇಕಾಗುತ್ತದೆ. ಹೆಚ್ಚು ಸೋಂಕಿಗೆ ಒಳಗಾದಷ್ಟು ಹೆಚ್ಚು ಆಕ್ಸಿಜನ್‌ ಬೇಕಾಗುತ್ತದೆ ಎನ್ನುತ್ತಾರೆ ವೈದ್ಯರು. ಆಕ್ಸಿಜನ್‌ ಸಿಲಿಂಡರ್‌ ದರ ಏರಿಕೆ ಒಂದು ಘನ ಮೀಟರ್‌ಗೆ (ಕ್ಯುಬಿಕ್‌) ಸದ್ಯ ಮಾರುಕಟ್ಟೆಯಲ್ಲಿ40 ರಿಂದ 50 ರೂಪಾಯಿ (ನಿರ್ವಹಣೆ ಮತ್ತು ಇತರ ಶುಲ್ಕ ಸೇರಿ) ಬೆಲೆ ಇದೆ. ಕೆಲವು ಖಾಸಗಿ ಆಸ್ಪತ್ರೆಗಳು ಸಿಲಿಂಡರ್‌ಗೆ 800 ರಿಂದ 900 ರೂ. ಕೊಟ್ಟು ಖರೀದಿಸುತ್ತಿವೆ.


from India & World News in Kannada | VK Polls https://ift.tt/33i4au5

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...