ಲಂಚ ಪಡೆಯುತ್ತಿದ್ದಾಗಲೇ ರೆಡ್‌ಹ್ಯಾಂಡ್‌ ಆಗಿ ಸಿಕ್ಕಿಬಿದ್ದ ಬಿಬಿಎಂಪಿ ಸಹಾಯಕ ಇಂಜಿನಿಯರ್

ಬೆಂಗಳೂರು: ಅಕ್ರಮ ಕಟ್ಟಡ ನಿರ್ಮಾಣ ಮಾಡುತ್ತಿರುವವರ ವಿರುದ್ಧ ಕೆಎಂಸಿ ಕಾಯಿದೆಯಡಿ ಕ್ರಮ ಕೈಗೊಳ್ಳಲು 15 ಸಾವಿರ ರೂ. ಲಂಚ ಪಡೆದ ಆರೋಪದ ಮೇರೆಗೆ ಬಿಬಿಎಂಪಿ ಸಹಾಯಕ ಎಂಜಿನಿಯರ್‌ನನ್ನು ನಿಗ್ರಹ ದಳ ಬಂಧಿಸಿದೆ. ಬಿಬಿಎಂಪಿ ಗಾಂಧಿನಗರ ಉಪ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್‌ ಕಚೇರಿಯ ಸಹಾಯಕ ಎಂಜಿನಿಯರ್‌ ಪೂಜಾರಪ್ಪ ಬಂಧಿತ ಆರೋಪಿಯಾಗಿದ್ದು, ಶೇಷಾದ್ರಿಪುರ ಪೈಪ್‌ಲೇನ್‌ ಮುಖ್ಯ ರಸ್ತೆಯಲ್ಲಿ ನಗರದ ನಿವಾಸಿಯೊಬ್ಬರಿಗೆ ಸಂಬಂಧಪಟ್ಟ ಸ್ವತ್ತಿನ ಕುರಿತು ನ್ಯಾಯಾಲಯದಲ್ಲಿ ತಕರಾರು ಇದೆ. ಆದರೆ, ಆ ಸ್ವತ್ತನ್ನು ದೂರುದಾರನ ಚಿಕ್ಕಮ್ಮನಿಂದ ಖಾಸಗಿ ವ್ಯಕ್ತಿ ಖರೀದಿಸಿ ಕಾನೂನುಬಾಹಿರವಾಗಿ ಕಟ್ಟಡ ನಿರ್ಮಿಸುತ್ತಿದ್ದರು. ಈ ಬಗ್ಗೆ ಕೆಎಂಸಿ ಕಾಯಿದೆಯಡಿ ಕ್ರಮ ಕೈಗೊಳ್ಳುವಂತೆ ದೂರು ನೀಡಲಾಗಿತ್ತು. ಕ್ರಮ ಕೈಗೊಳ್ಳಲು ಪೂಜಾರಪ್ಪ 50 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಲಂಚ ನೀಡಲು ಇಚ್ಛಿಸದ ದೂರುದಾರ ಎಸಿಬಿಗೆ ದೂರು ನೀಡಿದ್ದರು. ಕೇಸ್‌ ದಾಖಲಿಸಿಕೊಂಡು ಮುಂಗಡವಾಗಿ 15 ಸಾವಿರ ರೂ. ಲಂಚ ಪಡೆಯುತ್ತಿದ್ದ ಪೂಜಾರಪ್ಪ ಅವರನ್ನು ಎಸಿಬಿ ಬಂಧಿಸಿದೆ.


from India & World News in Kannada | VK Polls https://ift.tt/3tEzH5i

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...