ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಸಂಕಷ್ಟ ಬಿಗಡಾಯಿಸುತ್ತಿದ್ದು, ಹೀಗಿದ್ದರೂ ಬಿಜೆಪಿ ಸರ್ಕಾರ ಆಲ್ ಈಸ್ ವೆಲ್ ಎಂಬ ಭ್ರಮೆಯನ್ನು ಮೂಡಿಸುತ್ತಿದೆ ಎಂದು ಕಾಂಗ್ರೆಸ್ ಶಾಸಕ ಯು.ಟಿ ಖಾದರ್ ಆರೋಪಿಸಿದ್ದಾರೆ. ಈ ಕುರಿತಾಗಿ ಟ್ವೀಟ್ ಮಾಡಿರುವ , ಕ್ಷೇತ್ರದ ಜನರ ಬಗ್ಗೆ ನಮಗೆ ಕಾಳಜಿ ಕಳಕಳಿ ಇದೆ. ವಿರೋಧ ಪಕ್ಷಗಳಿಗಲ್ಲದಿದ್ದರೂ ಜನರಿಗಾಗಿ ಜನ ಪ್ರತಿನಿಧಿಗಳ ಜೊತೆ ಸರ್ಕಾರ ಮಾಹಿತಿ ಹಂಚಿಕೊಳ್ಳಲಿ ಎಂದು ಆಗ್ರಹಿಸಿದ್ದಾರೆ. ರಾಜ್ಯದಲ್ಲಿ ಆಕ್ಸಿಜನ್ ವೈದ್ಯಕೀಯ ಸೌಲಭ್ಯದ ಕೊರತೆ ದಿನೇ ದಿನೇ ಹೆಚ್ಚಾಗುತ್ತಿದೆ.ಅತ್ತ ಬಿಜೆಪಿ ಸರ್ಕಾರ ‘ಆಲ್ ಇಸ್ ವೆಲ್’ ಎಂಬ ಭ್ರಮೆ ಮೂಡಿಸುತ್ತಿದೆ ಎಂದು ಖಾದರ್ ಹರಿಹಾಯ್ದಿದ್ದಾರೆ. ರಾಜ್ಯದ ಜನರನ್ನ ಕತ್ತಲಲ್ಲಿಟ್ಟು ಆಗಿಂದಾಗ ಆದೇಶ ಮಾಡುವ ಸರ್ಕಾರ,ಕನಿಷ್ಠ ಶಾಸಕರಿಗಾದರೂ ಆಕ್ಸಿಜನ್ ಸೇರಿದಂತೆ ವ್ಯವಸ್ಥೆ ಹಾಗೂ ಲಭ್ಯತೆಯ ಮಾಹಿತಿ ನೀಡಲಿ ಎಂದು ಅವರು ಖಾದರ್ ಆಗ್ರಹಿಸಿದ್ದಾರೆ. ರಾಜ್ಯದಲ್ಲಿ ಕೋವಿಡ್ ಸಂಕಷ್ಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಭಾನುವಾರ 34,804 ಹೊಸ ಪ್ರಕರಣಗಳು ಪತ್ತೆಯಾಗಿವೆ. ಕೋವಿಡ್ ನಿಯಂತ್ರಣಕ್ಕೆ ಸರ್ಕಾರ ಎರಡು ದಿನಗಳ ಕಾಲ ವೀಕೆಂಡ್ ಕರ್ಫ್ಯೂ ಜಾರಿಗೊಳಿಸಿತ್ತು. ಈ ನಿರ್ಬಂಧಕ್ಕೆ ಉತ್ತಮ ರೀತಿಯ ಬೆಂಬಲ ಕೂಡಾ ವ್ಯಕ್ತವಾಗಿತ್ತು. ಹೀಗಿದ್ದರೂ ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಆಗುತ್ತಿದೆ. ಬೆಡ್‌ಗಳ ಕೊರತೆ ಆಕ್ಸಿಜನ್ ಕೊರತೆ ಎದುರಾಗುತ್ತಿದೆ. ಈ ಎಲ್ಲಾ ವಿಚಾರಗಳ ಕುರಿತಾಗಿ ಚರ್ಚೆ ನಡೆಸಲು ಇಂದು(ಏ.26-ಸೋಮವಾರ) ಸಚಿವ ಸಂಪುಟ ಸಭೆ ನಡೆಯಲಿದೆ. ಸಭೆಯಲ್ಲಿ ಮಹತ್ವದ ಚರ್ಚೆಗಳು ನಡೆಯಲಿದ್ದು ವೀಕೆಂಡ್ ಕರ್ಫ್ಯೂ ವಿಸ್ತರಣೆ ಹಾಗೂ ಕೋವಿಡ್ ವ್ಯಾಕ್ಸಿನ್ ಖರೀದಿ ಬಗ್ಗೆಯೂ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
from India & World News in Kannada | VK Polls https://ift.tt/3tSLxZz