ಮುಂಬೈ: ವಿಕೆಟ್ ಟು ವಿಕೆಟ್ ನೇರವಾಗಿ ಬೌಲಿಂಗ್ ಮಾಡುವುದರಿಂದ ಬ್ಯಾಟ್ಸ್‌ಮನ್‌ಗಳನ್ನು ಔಟ್ ಮಾಡಲು ಹಲವು ಆಯ್ಕೆಗಳು ಲಭಿಸಲಿವೆ ಎಂದು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸ್ಟಾರ್ ಆಲ್‌ರೌಂಡರ್ ಹೇಳಿದರು. ಭಾನುವಾರ ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ರವೀಂದ್ರ ಜಡೇಜಾ ಒಂದೇ ಓವರ್‌ನಲ್ಲಿ 37 ರನ್ ಗಳಿಸಿದ ಹೊರತಾಗಿಯೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರಮುಖ ಮೂರು(ವಾಷಿಂಗ್ಟನ್ ಸುಂದರ್, ಗ್ಲೆನ್ ಮ್ಯಾಕ್ಸ್‌ವೆಲ್ ಹಾಗೂ ಎಬಿ ಡಿವಿಲಿಯರ್ಸ್) ವಿಕೆಟ್‌ಗಳನ್ನು ಪಡೆದರು. ಆ ಮೂಲಕ ಸಿಎಸ್‌ಕೆ 69 ರನ್‌ಗಳಲ್ಲಿ ಪ್ರಮುಖ ಪಾತ್ರವಹಿಸಿದರು. "ಬೌಲರ್‌ಗೆ ಪಿಚ್ ಹೆಚ್ಚು ಸಹಕಾರಿಯಾಗಿದ್ದರೆ, ನಾನು ವಿಕೆಟ್ ಟು ವಿಕೆಟ್ ಬೌಲಿಂಗ್ ಮಾಡಲು ಎದುರು ನೋಡುತ್ತಿರುತ್ತೇನೆ. ಏಕೆಂದರೆ, ಚೆಂಡು ತಿರುಗಿದರೆ ಬ್ಯಾಟ್ಸ್‌ಮನ್ ಕೀಪರ್‌ಗೆ ಕ್ಯಾಚ್ ನೀಡುವ ಹಾಗೂ ಸ್ಟಂಪ್ ಔಟ್ ಆಗುವ ಸಾಧ್ಯತೆ ಇರುತ್ತದೆ, ಒಂದು ವೇಳೆ ಚೆಂಡು ತಿರಗದೆ ಇದ್ದರೆ ಬ್ಯಾಟ್ಸ್‌ಮನ್ ಕ್ಲೀನ್ ಬೌಲ್ಡ್ ಆಗಬಹುದು," ಎಂದು ಜಡೇಜಾ ಸಹ ಆಟಗಾರ ಇಮ್ರಾನ್ ತಾಹೀರ್‌ಗೆ ಹೇಳಿರುವ ವಿಡಿಯೋವನ್ನು ಐಪಿಎಲ್ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. "ಹಾಗಾಗಿ, ನಾನು ವಿಕೆಟ್‌ಗೆ ಟಾರ್ಗೆಟ್ ಮಾಡುತ್ತಿದ್ದೆ. ಇದೇ ರೀತಿ ನಾನು ಬೌಲಿಂಗ್ ಮಾಡಿದರೆ, ಬ್ಯಾಟ್ಸ್‌ಮನ್‌ಗಳನ್ನು ಔಟ್ ಮಾಡಲು ನನಗೆ ಹಲವು ಆಯ್ಕೆಗಳು ಸಿಗುತ್ತವೆ," ಎಂದು ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದ ಜಡೇಜಾ ಹೇಳಿದರು. ಇನ್ನು ಮೊದಲನೇ ಇನಿಂಗ್ಸ್‌ನ ಕೊನೆಯ ಓವರ್‌ನಲ್ಲಿ ಆರ್‌ಸಿಬಿ ವೇಗಿ ಹರ್ಷಲ್ ಪಟೇಲ್‌ಗೆ ಐದು ಸಿಕ್ಸರ್ ಸೇರಿದಂತೆ ಒಟ್ಟು 37 ರನ್ ಸಿಡಿಸಿದ್ದರು. ಆರಂಭಿಕ ಮೂರು ಓವರ್‌ಗಳಿಗೆ ಕೇವಲ 14 ರನ್ ನೀಡಿದ್ದ ಹರ್ಷಲ್ ತನ್ನ ಕೊನೆಯ ಓವರ್‌ನಲ್ಲಿ ದುಬಾರಿಯಾದರು. ಇದು ಚೆನ್ನೈ ಸೂಪರ್ ಕಿಂಗ್ಸ್ ಪಾಲಿಗೆ ಪಾಯಿಂಟ್ ಟರ್ನಿಂಗ್ ಪಾಯಿಂಟ್ ಆಯಿತು. ಆರ್ದ್ರತೆಯ ವಾತಾವರಣದಲ್ಲಿ ಎರಡೆರಡು ರನ್‌ಗಳನ್ನು ಓಡಿ-ಓಡಿ ತುಂಬಾ ಧಣಿದಿದ್ದೆ. ಈ ಕಾರಣದಿಂದ ಕೊನೆಯ ಓವರ್‌ನಲ್ಲಿ ಸ್ಲಾಗ್ ಶಾಟ್‌ಗಳನ್ನು ಹೊಡೆಯಲು ನಿರ್ಧರಿಸಿದ್ದೆ ಎಂದು 20ನೇ ಓವರ್‌ನಲ್ಲಿ ರೂಪಿಸಿದ್ದ ಯೋಜನೆಯನ್ನು ಜಡೇಜಾ ಬಹಿರಂಗಪಡಿಸಿದರು. "19ನೇ ಓವರ್‌ನಲ್ಲಿ ಎರಡೆರಡು ರನ್‌ಗಳಿಗೆ ಓಡಿ-ಓಡಿ ತುಂಬಾ ಸುಸ್ತಾಗಿದ್ದೆ. ಹಾಗಾಗಿ, 'ಮಾಹಿ ಭಾಯ್ ನಾನು ತುಂಬಾ ಸುಸ್ತಾಗಿದ್ದೇನೆ. ಸಾಧ್ಯವಾದಷ್ಟು ಎಸೆತಗಳನ್ನು ಸ್ಲಾಗ್ ಮಾಡುತ್ತೇನೆ. ಅಲ್ಲದೆ, ಇಲ್ಲಿಆರ್ದ್ರತೆ ತುಂಬಾ ಇದೆ ಎಂದು ಹೇಳಿದೆ." "ಕೊನೆಯ ಓವರ್‌ನಲ್ಲಿ ಸ್ಲಾಗ್ ಮಾಡುವುದು ನನ್ನ ಯೋಜನೆಯಾಗಿತ್ತು. ಆದರೆ, ಐದು ಸಿಕ್ಸರ್ ಸಿಡಿಸುತ್ತೇನೆಂದು ನಾನು ಅಂದುಕೊಂಡಿರಲಿಲ್ಲ. ಒಟ್ಟಿನಲ್ಲಿ ಪಂದ್ಯದ ಗೆಲುವಿಗೆ ನೆರವಾಗಿದ್ದರಿಂದ ನನಗೆ ತುಂಬಾ ಖುಷಿಯಾಗುತ್ತಿದೆ," ಎಂದು ರವೀಂದ್ರ ಜಡೇಜಾ ಹೇಳಿದರು. ಈ ಪಂದ್ಯದ ಗೆಲುವಿನೊಂದಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಪಾಯಿಂಟ್ಸ್ ಟೇಬಲ್‌ನಲ್ಲಿ ಅಗ್ರ ಸ್ಥಾನಕ್ಕೇರಿದ್ದು, ಬುಧವಾರ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಸೆಣಸಲಿದೆ. ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮಂಗಳವಾರ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ತನ್ನ ಆರನೇ ಪಂದ್ಯವಾಡಲಿದೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3aFb0hg