ಗಾಳಿಯಿಂದ ಆಮ್ಲಜನಕ ಹೀರಿ ಕೊರೊನಾ ರೋಗಿಗಳಿಗೆ ಪೂರೈಕೆ, ರಾಜ್ಯ ಸರಕಾರದ ಮಹತ್ವದ ಹೆಜ್ಜೆ!

ಶಿವಾನಂದ ಹಿರೇಮಠ ಬೆಂಗಳೂರು: ಆಮ್ಲಜನಕಕ್ಕೆ ಇಷ್ಟೊಂದು ಹಾಹಾಕಾರ ಎದ್ದಿರುವ ಈ ಹೊತ್ತಿನಲ್ಲಿ ಗಾಳಿಯಲ್ಲಿ ಯಥೇಚ್ಛವಾಗಿರುವ ಆಕ್ಸಿಜನ್‌ನ್ನು ಹೀರಿ ರೋಗಿಗಳಿಗೆ ಪೂರೈಸಲು ಸಾಧ್ಯವಿಲ್ಲವೇ ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತದೆ. ಈ ಚಿಂತನೆಗೆ ಪೂರಕವಾಗುವ ಉತ್ತಮ ತಂತ್ರಜ್ಞಾನವೊಂದನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಓ) ಅಭಿವೃದ್ಧಿಪಡಿಸಿದ್ದು, ಇದನ್ನು ಬಳಸಿಕೊಂಡು ರೋಗಿಗಳಿಗೆ ಆಮ್ಲಜನಕ ಪೂರೈಸಲು ರಾಜ್ಯ ಸರಕಾರ ಮುಂದಾಗಿದೆ. ಬೆಳಗಾವಿ ಮತ್ತು ಬೆಂಗಳೂರಿನ ಕೆಲವು ಆಸ್ಪತ್ರೆಗಳಲ್ಲಿ ಈಗಾಗಲೇ ಈ ಮಾದರಿಗಳು ಸಣ್ಣ ಮಟ್ಟದಲ್ಲಿ ಕಾರ್ಯಾಚರಿಸುತ್ತಿವೆ. ಗಡಿ ಭಾಗದ ಅತಿ ಎತ್ತರದ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸುವ ಯೋಧರಿಗಾಗಿ ರೂಪಿಸಿರುವ ತಂತ್ರಜ್ಞಾನ ಇದಾಗಿದೆ. 'ಡಿಫೆನ್ಸ್‌ ಬಯೋ-ಎಂಜಿನಿಯರಿಂಗ್‌ ಮತ್ತು ಎಲೆಕ್ಟ್ರೋ ಮೆಡಿಕಲ್‌ ಲ್ಯಾಬೊರೇಟರಿಯು ಅಭಿವೃದ್ಧಿಪಡಿಸಿರುವ ''(ಪಿಎಸ್‌ಎ ಅಥವಾ ಆಮ್ಲಜನಕ ಹೊರಹೀರುವಿಕೆ) ತಂತ್ರಜ್ಞಾನದಡಿ ಶೇ. 93.3ರಷ್ಟು ಶುದ್ಧ ಆಮ್ಲಜನಕ ಪೂರೈಸಲು ಸಾಧ್ಯವಿದೆ. ಉತ್ತರ ಪ್ರದೇಶ, ಗುಜರಾತ್‌ ಮತ್ತಿತರ ರಾಜ್ಯಗಳಲ್ಲಿ ಈಗಾಗಲೇ ಮಾರ್ಗದರ್ಶನದಲ್ಲಿ ಹಲವು ಘಟಕಗಳನ್ನು ಸ್ಥಾಪಿಸಿದ್ದು ಕಾರ್ಯಾಚರಣೆ ಆರಂಭಿಸಿವೆ. ಇದೇ ಮಾದರಿಯಲ್ಲಿ ಕರ್ನಾಟಕದಲ್ಲೂ ಹೊಸ ಘಟಕಗಳ ಸ್ಥಾಪನೆಗೆ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಪರವಾನಗಿ ನೀಡಿ, ಅಗತ್ಯ ಸೌಕರ್ಯ ಕಲ್ಪಿಸಲು ಯೋಚಿಸಿದೆ. ಹೇಗೆ ಕೆಲಸ ಮಾಡುತ್ತದೆ?ಇದು ಗಾಳಿಯಿಂದ ಆಮ್ಲಜನಕವನ್ನು ಪ್ರತ್ಯೇಕಿಸುವ ವಿಧಾನ. ಗಾಳಿಯನ್ನು ಕಂಪ್ರೆಸ್‌ ಮಾಡಿ ಹಲವು ಹಂತಗಳ ಮೂಲಕ ದಾಟಿಸುವ ಈ ವಿಧಾನದಲ್ಲಿ ಗಾಳಿಯಲ್ಲಿರುವ ಬೇರೆ ಬೇರೆ ಅನಿಲಗಳನ್ನು ಹೀರಿಕೊಳ್ಳುವ ಹೀರಕ (ಅಬ್ಸಾರ್ಬೆಂಟ್‌)ಗಳ ಮೂಲಕ ಹಾಯಿಸಲಾಗುತ್ತದೆ. ಉಳಿದೆಲ್ಲಅನಿಲಗಳು ಹೀರಲ್ಪಟ್ಟು ಬಹುತೇಕ ಶುದ್ಧವಾದ (93%) ಆಮ್ಲಜನಕ ಅತಿ ಒತ್ತಡದಲ್ಲಿ ಹೊರಬರುತ್ತದೆ. ಇದನ್ನು ಸಂಗ್ರಹಿಸಿಟ್ಟುಕೊಳ್ಳಬಹುದು. ಇಲ್ಲವೇ ಅಗತ್ಯವಿರುವ ಬೆಡ್‌ಗಳಿಗೆ ಪೂರೈಸಬಹುದು. ಪ್ರತಿ ನಿಮಿಷಕ್ಕೆ 2/5/7/10 ಲೀಟರ್‌ನಷ್ಟು ಹರಿವು ಇಲ್ಲಿದೊರೆಯುತ್ತದೆ. ಬಿಎಚ್‌ಇಎಲ್‌ ಸಹಕಾರ ಡಿಆರ್‌ಡಿಒ ತಂತ್ರಜ್ಞಾನವನ್ನು ಉಪಕರಣವಾಗಿ ಅಭಿವೃದ್ಧಿಪಡಿಸಲು ಬಿಎಚ್‌ಇಎಲ್‌ ಜತೆ ಒಡಂಬಡಿಕೆ ಆಗಿರುವ ಹಿನ್ನೆಲೆ 'ಪ್ರೆಷರ್‌ ಸ್ವಿಂಗ್‌ ಅಡ್ಸೋಪ್ರ್ಷನ್‌' ಉಪಕರಣವನ್ನು ಆಸ್ಪತ್ರೆಗಳಲ್ಲಿ ಸ್ಥಾಪಿಸುವಂತೆ ಬಿಎಚ್‌ಇಎಲ್‌ ಹಾಗೂ ಡಿಆರ್‌ಡಿಒ ಜತೆ ಕೈಗಾರಿಕಾ ಇಲಾಖೆ ಒಂದು ಸುತ್ತಿನ ಮಾತುಕತೆ ನಡೆಸಿದೆ. ಬಿಇಎಲ್‌ ಕೂಡ 6 ಉಪಕರಣವನ್ನು ಸ್ಥಾಪಿಸಲು ಮುಂದೆ ಬಂದಿದೆ ಎಂದು ಕೈಗಾರಿಕಾ ಇಲಾಖೆ ತಿಳಿಸಿದೆ. ಕೊಯಮತ್ತೂರಿನ ಟ್ರಿಡೆಂಟ್‌ ಫೆನುಮೆಟಿಕ್ಸ್‌ ಕಂಪನಿಯು ಈ ಉಪಕರಣ ಸ್ಥಾಪಿಸಲು ಆಸಕ್ತಿ ತೋರಿದೆ.


from India & World News in Kannada | VK Polls https://ift.tt/3aG8lUF

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...