ಮೈಸೂರು: ಸಿನಿಮಾ ನೋಡಿಕೊಂಡು ಬಂದ ದಂಪತಿ ನೇರವಾಗಿ ತೋಟಕ್ಕೆ ತೆರಳಿ ಆತ್ಮಹತ್ಯೆ ಮಾಡಿಕೊಂಡರು!

ನಂಜನಗೂಡು: ತಾಲೂಕಿನ ಕೃಷ್ಣಾಪುರ ಗ್ರಾಮದಲ್ಲಿದಂಪತಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಚಂದ್ರಶೇಖರ್‌(30) ಹಾಗೂ ಈತನ ಪತ್ನಿ ಕವಿತಾ(18) ಮೃತರು. ಆತ್ಮಹತ್ಯೆಗೆ ನಿಖರ ಕಾರಣ ತಿಳಿದಿಲ್ಲ. ಕೃಷ್ಣಾಪುರದ ಲಕ್ಷ್ಮಮ್ಮ, ಚಿನ್ನಾಬೋವಿ ಪುತ್ರ ಚಂದ್ರಶೇಖರ್‌ ಅವರಿಗೆ ತಾಲೂಕಿನ ವೆಂಕಟಾಚಲಪುರ ಗ್ರಾಮದ ಗೌರಮ್ಮ ಹಾಗೂ ಸೀತಾರಾಮ ದಂಪತಿ ಪುತ್ರಿ ಕವಿತಾಳನ್ನು 9 ತಿಂಗಳ ಹಿಂದೆ ವಿವಾಹ ಮಾಡಿಕೊಡಲಾಗಿತ್ತು. ಭಾನುವಾರ ಸಿನಿಮಾ ನೋಡಿ ಬರುವುದಾಗಿ ದಂಪತಿ ನಂಜನಗೂಡಿಗೆ ತೆರಳಿದ್ದು, ವಾಪಸ್‌ ಮನೆಗೆ ಬಾರದೆ ನೇರವಾಗಿ ಜಮೀನಿಗೆ ತೆರಳಿ ಇಬ್ಬರೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಳಿಕ ಕವಿತಾ ಅತ್ತೆ ಲಕ್ಷ್ಮಮ್ಮಗೆ ಕರೆ ಮಾಡಿ ವಿಷ ಸೇವಿಸಿರುವುದಾಗಿ ಮಾಹಿತಿ ನೀಡಿದ್ದಾಳೆ. ತಕ್ಷಣ ಸ್ಥಳಕ್ಕೆ ತೆರಳಿದ ಕುಟುಂಬದವರು ಇಬ್ಬರನ್ನೂ ಮೈಸೂರಿನ ಕೆ.ಆರ್‌.ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದರು. ಚಿಕಿತ್ಸೆ ಫಲಿಸದೇ ರಾತ್ರಿ 10.30ರ ಸಮಯದಲ್ಲಿ ಚಂದ್ರಶೇಖರ್‌ ಮೃತಪಟ್ಟರೆ, ತಡರಾತ್ರಿ ಕವಿತಾ ಅಸುನೀಗಿದರು. ಮದುವೆಯಾಗಿ 9 ತಿಂಗಳಾದರೂ ಇನ್ನು ಗರ್ಭಿಣಿಯಾಗಿಲ್ಲ ಎಂಬ ನೋವು ದಂಪತಿಯಲ್ಲಿದ್ದರೂ ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿಗೆ ಹೋಗುತ್ತಿರಲಿಲ್ಲ. ಯಾವುದೋ ಗಂಭೀರ ಸಮಸ್ಯೆಗೆ ಎದುರಾಗಿದ್ದರಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಗ್ರಾಮಾಂತರ ಪೊಲೀಸ್‌ ಠಾಣೆ ಸರ್ಕಲ್‌ ಇನ್ಸ್‌ಪೆಕ್ಟರ್‌ ಶಿವನಂಜಶೆಟ್ಟಿ ಮಹಜರು ನಡೆಸಿದರು. ಮೃತದೇಹಗಳನ್ನು ಕೆ.ಆರ್‌.ಆಸ್ಪತ್ರೆಯ ಶವಾಗಾರದಲ್ಲಿ ವೈದ್ಯಕೀಯ ಪರೀಕ್ಷೆಗೊಳಪಡಿಸಿ ಬಳಿಕ ವಾರಸುದಾರರಿಗೆ ಹಸ್ತಾಂತರಿಸಲಾಯಿತು. ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.


from India & World News in Kannada | VK Polls https://ift.tt/2QEmSJo

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...