ಹೊಸದಿಲ್ಲಿ: ಕೊರೊನಾ ನಿರೋಧಕ ಲಸಿಕೆಗಳ ಕೊರತೆಯಿಂದಾಗಿ, ಬಹುತೇಕ ರಾಜ್ಯಗಳಲ್ಲಿ ಮೇ 1ರಿಂದ ಆರಂಭಗೊಳ್ಳಬೇಕಿರುವ ವಿಳಂಬವಾಗುವ ಸಾಧ್ಯತೆ ಇದೆ. ಕೋವಿಶೀಲ್ಡ್ ಮತ್ತು ಕೊವ್ಯಾಕ್ಸಿನ್ ಲಸಿಕೆಗಳ ಪೂರೈಕೆಯಲ್ಲಿ ತೀವ್ರ ಕೊರತೆ ಎದುರಾಗಿರುವ ಕಾರಣ ದಿಲ್ಲಿ ಸರಕಾರ, 3ನೇ ಹಂತದ ಲಸಿಕೆ ಅಭಿಯಾನವನ್ನು ಮುಂದೂಡಿದೆ. ಮಹಾರಾಷ್ಟ್ರ ಬುಧವಾರವೇ ಇಂತಹ ನಿರ್ಧಾರ ಕೈಗೊಂಡಿತ್ತು. ಬಿಜೆಪಿ ಆಡಳಿತವಿರುವ ಗುಜರಾತ್ ಸರಕಾರ ಕೂಡ ಇದೇ ಕಾರಣ ನೀಡಿದೆ ಎನ್ನಲಾಗಿದೆ. ರಾಜಸ್ಥಾನ, ಛತ್ತೀಸ್‌ಗಢ ಸೇರಿ ಇನ್ನೂ ಕೆಲವು ರಾಜ್ಯಗಳೂ ಇದೇ ಹಾದಿ ತುಳಿಯುವ ಸಾಧ್ಯತೆ ಇದ್ದು, ಸದ್ಯಕ್ಕೆ 18ರಿಂದ 44 ವರ್ಷದವರಿಗೆ ಲಸಿಕೆ ಸಿಗುವುದು ಅನುಮಾನವಾಗಿದೆ. ಮೇ 1ರಿಂದ ಮೂರನೇ ಹಂತದ ಲಸಿಕೆ ಅಭಿಯಾನ ನಡೆಯಲಿದೆ ಎಂದು ಕೇಂದ್ರ ಸರಕಾರ ಏ.19ರಂದು ಘೋಷಿಸಿತ್ತು. ಏ. 28ರಿಂದ ಕೋವಿನ್ ಆ್ಯಪ್ ಇಲ್ಲವೇ ಆರೋಗ್ಯ ಸೇತು ಆ್ಯಪ್ ಮೂಲಕ ನೋಂದಣಿಗೆ ಚಾಲನೆಯನ್ನೂ ನೀಡಲಾಗಿದೆ. ಆದರೆ ಕೆಲವು ಲಸಿಕೆ ಕೊರತೆಯಿಂದ ಮೇ 1ರಿಂದ ಅಭಿಯಾನ ಆರಂಭಿಸಲು ಸಾಧ್ಯವಿಲ್ಲ ಎಂದಿವೆ. ಎರಡನೇ ಹಂತದ ಅಭಿಯಾನದಡಿ 45ರಿಂದ 60 ವರ್ಷದೊಳಗಿನವರಿಗೇ ಇನ್ನೂ ಪೂರ್ಣ ಪ್ರಮಾಣದಲ್ಲಿ ಲಸಿಕೆ ನೀಡಲು ಸಾಧ್ಯವಾಗುತ್ತಿಲ್ಲ. ಲಸಿಕೆಗಳ ಪೂರೈಕೆಯೇ ಇಲ್ಲದಿರುವಾಗ ಇನ್ನು 18ರಿಂದ 44 ವರ್ಷದೊಳಗಿನ ಎಲ್ಲರಿಗೂ ಲಸಿಕೆ ಹಾಕುವುದಾಗಿ ಹೇಳಿದರೆ ಅದು ಸಾಧ್ಯವಾಗದ ಮಾತಾಗಿದೆ. ಒಂದೊಮ್ಮೆ ಪ್ರಯತ್ನಿಸಿದರೂ ಜನದಟ್ಟಣೆ ಉಂಟಾಗಿ ಲಸಿಕೆ ಅಲಭ್ಯತೆಯಿಂದ ಜನರಲ್ಲಿ ಗೊಂದಲ ಸೃಷ್ಟಿಯಾಗಲಿದೆ. ಹಾಗಾಗಿ ಸಮರ್ಪಕ ಪೂರೈಕೆ ಆಗದ ಹೊರತು ಅಭಿಯಾನ ಆರಂಭಿಸುವುದಿಲ್ಲ ಎಂದು ದಿಲ್ಲಿ ಸೇರಿ ಕೆಲವು ರಾಜ್ಯಗಳು ಹೇಳಿವೆ.
from India & World News in Kannada | VK Polls https://ift.tt/330Q0NX