ವಾಷಿಂಗ್ಟನ್: ಭಾರತದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಎರಡನೇ ಅಲೆಗೆ ಆತಂಕ ವ್ಯಕ್ತಪಡಿಸಿರುವ ಮತ್ತು , ಭಾರತೀಯರ ಸಹಾಯಕ್ಕೆ ಸಾಧ್ಯವಾದ ಎಲ್ಲಾ ಪ್ರಯತ್ನಗಳನ್ನು ಮಾಡುವುದಾಗಿ ಘೋಷಿಸಿವೆ. ಈ ಕುರಿತು ಮಾತನಾಡಿರುವ ಮೈಕ್ರೋಸಾಫ್ಟ್ ಮುಖ್ಯಸ್ಥ ಸತ್ಯಾ ನಾಡೆಲ್ಲಾ, ಭಾರತದ ಪ್ರಸ್ತುತ ಪರಿಸ್ಥಿತಿಯಿಂದ ಎದೆಗುಂದಿರುವುದಾಗಿ ಹೇಳಿದ್ದಾರೆ. ಪರಿಹಾರ ಪ್ರಯತ್ನಗಳಿಗೆ ಸಹಾಯ ಮಾಡಲು ಮತ್ತು ನಿರ್ಣಾಯಕ ಆಮ್ಲಜನಕ ಸಾಂದ್ರತೆಯ ಸಾಧನಗಳ ಖರೀದಿಗೆ ಮೈಕ್ರೋಸಾಫ್ಟ್ ಅಗತ್ಯ ಬೆಂಬಲ ನೀಡಲಿದೆ ಎಂದು ಸತ್ಯಾ ನಾಡೆಲ್ಲಾ ಇದೇ ವೇಳೆ ಘೋಷಿಸಿದ್ದಾರೆ. ಮೈಕ್ರೋಸಾಫ್ಟ್ ತನ್ನ ಸಂಪನ್ಮೂಲಗಳು ಮತ್ತು ತಂತ್ರಜ್ಞಾನವನ್ನು ಬಳಸುವ ಮೂಲಕ ಕೊರೊನಾ ವಿರುದ್ಧದ ಯುದ್ಧದಲ್ಲಿ ಭಾರತೀಯರ ಪರವಾಗಿ ಹೋರಾಡುವುದಾಗಿ ಸತ್ಯಾ ನಾಡೆಲ್ಲಾ ಭರವಸೆ ನೀಡಿದ್ದಾರೆ. ಭಾರತೀಯರ ಪರ ಗೂಗಲ್ ಧ್ವನಿ: ಇನ್ನು ಭಾರತದ ಕೊರೊನಾ ಪರಿಸ್ಥಿತಿ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಗೂಗಲ್ ಮುಖ್ಯಸ್ಥ ಸುಂದರ್ ಪಿಚೈ, ಭಾರತದಲ್ಲಿ ಹದಗೆಡುತ್ತಿರುವ ಕೋವಿಡ್ ಬಿಕ್ಕಟ್ಟನ್ನು ನೋಡಿ ತೀವ್ರ ಆತಂಕಕ್ಕೆ ಒಳಗಾಗಿರುವುದಾಗಿ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ 'ಗಿವ್ ಇಂಡಿಯಾ' ಅಭಿಯಾನದಡಿ ಗೂಗಲ್ ಸಂಸ್ಥೆ ಭಾರತಕ್ಕೆ 135 ಕೋಟಿ ರೂ. ಸಹಾಯ ನೀಡಲಿರುವುದಾಗಿ ಸುಂದರ್ ಪಿಚೈ ಘೋಷಿಸಿದ್ದಾರೆ. ಯುನಿಸೆಫ್‌ನ ಈ ಅಭಿಯಾನಕ್ಕೆ ಗೂಗಲ್ ಸಾಥ್ ನೀಡಿದ್ದು, ಭಾರತಕ್ಕೆ ವೈದ್ಯಕೀಯ ಉಪಕರಣಗಳ ಸರಬರಾಜಿಗೆ ಅಗತ್ಯ ನೆರವು ನೀಡಲಾಗವುದು ಎಂದು ಸುಂದರ್ ಪಿಚೈ ಹೇಳಿದ್ದಾರೆ. ಈ ಹಿಂದೆ ಭಾರತಕ್ಕೆ ಅಗತ್ಯ ವೈದ್ಯಕೀಯ ನೆರವು ನೀಡಲು ಹಿಂಜರಿದಿದ್ದ , ಇದೀಗ ನೆರವಿನ ಹಸ್ತ ಚಾಚಿದೆ. ಭಾರತಕ್ಕೆ ಬೇಕಾದ ಎಲ್ಲಾ ಅಗತ್ಯ ವೈದ್ಯಕೀಯ ಉಪಕರಣಗಳ ಸರಬರಾಜು ಮಾಡಲು ಸಿದ್ಧವಿರುವುದಾಗಿ ಅಧ್ಯಕ್ಷ ಜೋ ಬೈಡೆನ್ ಆಡಳಿತ ಘೋಷಿಸಿದೆ. ನಮ್ಮ ಸಂಕಷ್ಟದ ಕಾಲದಲ್ಲಿ ನಾವು ಕೇಳಿದ ಮಾತ್ರೆಗಳನ್ನು ರವಾನಿಸುವ ಮೂಲಕ ಭಾರತ ನಮಗೆ ಸಹಾಯ ಮಾಡಿತ್ತು. ಇದೀಗ ಭಾರತಕ್ಕೆ ಸಹಾಯ ಮಾಡುವ ಅವಕಾಶವನ್ನು ನಾವು ಸದುಪಯೋಗಪಡಿಸಿಕೊಳ್ಳುತ್ತೇವೆ ಎಂದು ಜೋ ಬೈಡೆನ್ ಹೇಳಿದ್ದಾರೆ. ಒಟ್ಟಿನಲ್ಲಿ ಭಾರತದ ಕೊರೊನಾ ವೈರಸ್ ವಿರುದ್ಧದ ಹೋರಾಟಕ್ಕೆ ವಿಶ್ವ ಸಾಥ್ ನೀಡುತ್ತಿದ್ದು, ಭಾರತ ಈ ಹೋರಾಟದಲ್ಲಿ ಜಯ ಸಾಧಿಸುವ ಭರವಸೆ ಮತ್ತಷ್ಟು ಹೆಚ್ವಾಗಿದೆ ಎಂದು ಹೇಳಬಹುದು.
from India & World News in Kannada | VK Polls https://ift.tt/3sT5EoW