ಬೆಂಗಳೂರಿನಲ್ಲಿ ಹೋಮ್‌ ಐಸೋಲೇಷನ್‌ನಲ್ಲಿ ಇದ್ದೀರಾ? ನಿಮಗಾಗಿ ತೆರೆದಿದೆ ಕೋವಿಡ್‌ ಆರೈಕೆ ಕೇಂದ್ರ..

: ಕೋವಿಡ್‌ ಪಾಸಿಟಿವ್‌ ಆದ ಕಾರಣ ಹೋಂ ಐಸೋಲೇಷನ್‌ನಲ್ಲಿ ಇರುವ ರೋಗಿಗಳಿಗೆ ಜೈನ್‌ ಇಂಟರ್‌ನ್ಯಾಷನಲ್‌ ಟ್ರೇಡ್‌ ಆರ್ಗನೈಸೇಷನ್‌ ವತಿಯಿಂದ ಕೋವಿಡ್‌ ತೆರೆಯಲಾಗಿದೆ. ಮೆಜೆಸ್ಟಿಕ್‌ ಸಮೀಪದ 'ಮ್ಯಾನ್ಫೋ ಬೆಲ್‌'ನಲ್ಲಿ ಕೇಂದ್ರ ತೆರೆಯಲಾಗಿದೆ. ಇಲ್ಲಿನ ಕೇಂದ್ರ 170 ರೂಂಗಳನ್ನು ಹೊಂದಿದ್ದು, ನರ್ಸ್‌ಗಳ ವ್ಯವಸ್ಥೆಯಿರುತ್ತದೆ. ಪ್ರತಿ ದಿನ ಆರೋಗ್ಯ ತಪಾಸಣೆ ನಡೆಸಲಾಗುತ್ತದೆ. ತುರ್ತು ಅಗತ್ಯ ಎದುರಾದರೆ ಆಂಬ್ಯುಲೆನ್ಸ್‌ ವ್ಯವಸ್ಥೆಯೂ ಇದೆ ಎಂದು ಜೈನ ಸಮುದಾಯದ ಸಜ್ಜನ್‌ ರಾಜ್‌ ಮೆಹತಾ ತಿಳಿಸಿದರು. ರೋಗಿಗಳಿಗೆ ಕಡಿಮೆ ದರದಲ್ಲಿ ಬೆಡ್‌, ಊಟ, ತಿಂಡಿ ನೀಡಲಾಗುವುದು. ಅಗತ್ಯ ವೈದ್ಯಕೀಯ ಸೇವೆಗಳಿರುತ್ತವೆ. ಕೊರೊನಾ ನೆಗೆಟಿವ್‌ ಬರುವವರೆಗೆ ತಂಗಬಹುದು ಎಂದು ಮಾಧ್ಯಮ ಸಲಹೆಗಾರ ಸಿದ್ಧಾರ್ಥ ಬೊಹರಾ ತಿಳಿಸಿದರು. ಕೋವಿಡ್‌ ಕೇಂದ್ರವು ಸಂಘದ ಸಂಚಾಲಕರಾದ ಸುಶೀಲ್‌ ತಲೆಸರ, ಪ್ರಕಾಶ್‌ ಲುನಾವತ್‌, ನಿತೇಶ್‌ ಗಾಂಧಿ, ಮಹೇಂದ್ರ ಮತ್ತಿತರರ ನೇತೃತ್ವದಲ್ಲಿ ನಡೆಯುತ್ತಿದೆ. ಸೋಂಕಿತರಾಗಿ ಮನೆಯಲ್ಲೇ ಚಿಕಿತ್ಸೆ ಪಡೆಯಲು ಸಾಧ್ಯವಾಗದ ಜನರು ಈ ಆರೈಕೆ ಕೇಂದ್ರಕ್ಕೆ ದಾಖಲಾಗಬಹುದಾಗಿದೆ. ಮನೆಯಲ್ಲೇ ಐಸೋಲೇಷನ್ ಆಗಲು ವ್ಯವಸ್ಥೆ ಇಲ್ಲದ ಜನರಿಗೆ ಇದು ವರದಾನವಾಗಿದೆ.


from India & World News in Kannada | VK Polls https://ift.tt/3dW49Cx

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...