ಬೆಂಗಳೂರು: ಕೊರೊನಾ ಪ್ರಕರಣಗಳು ಹೆಚ್ಚಾದಂತೆ ಸಾವಿನ ಸಂಖ್ಯೆಯೂ ದಿನೇ ದಿನೆ ಗಣನೀಯ ಪ್ರಮಾಣದಲ್ಲಿ ಏರಿಕೆ ಆಗುತ್ತಿದೆ. ಕೊರೊನಾ ರೋಗಿಗಳ ಸಾವಿನ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಶವ ಸಂಸ್ಕಾರಕ್ಕೆ ಚಿತಾಗಾರ ಮತ್ತು ರುದ್ರಭೂಮಿಗಳ ಕೊರತೆ ಉಲ್ಬಣಿಸಿತ್ತು. ಈ ಕೊರತೆ ನೀಗಿಸಲು ರಾಜ್ಯ ಸರಕಾರ ಬುಧವಾರ ತಾತ್ಕಾಲಿಕವಾಗಿ 230 ಎಕರೆ 25 ಗುಂಟೆ ಜಾಗ ಮೀಸಲಿರಿಸಿ ಆದೇಶ ಹೊರಡಿಸಿದೆ. ಕರ್ನಾಟಕ ಭೂ ಕಂದಾಯ ಕಾಯಿದೆಯಡಿ ಜಮೀನನ್ನು ವಶಪಡಿಸಿಕೊಂಡು ಕೂಡಲೇ ಬಿಬಿಎಂಪಿಗೆ ಹಸ್ತಾಂತರಿಸಲು ನಗರ ಜಿಲ್ಲಾಧಿಕಾರಿಗಳಿಗೆ ಕಂದಾಯ ಇಲಾಖೆ ಸೂಚಿಸಿದೆ. ಮೀಸಲಿರಿಸಿದ ಜಾಗದ ವಿವರ:
- ಬೆಂಗಳೂರು ದಕ್ಷಿಣ: ಮುದ್ದಯ್ಯನ ಪಾಳ್ಯ (4.20 ಎಕರೆ) , ಮಾರಗೊಂಡನಹಳ್ಳಿ (5 ಎಕರೆ), ವಿಟ್ಟಸಂದ್ರ (4.10 ಎಕರೆ), ಮೈಲಸಂದ್ರ (3 ಎಕರೆ), ಗೊಲ್ಲಹಳ್ಳಿ (24 ಎಕರೆ),
- ಬೆಂಗಳೂರು ಉತ್ತರ(ಅಪರ): ಬೆಟ್ಟಹಲಸೂರು (44 ಎಕರೆ) ಮೀಸಗಾನಹಳ್ಳಿ (1 ಎಕರೆ), ಬಾಗಲೂರು (12 ಎಕರೆ), ಚಾಗಲಟ್ಟಿ (ಬೆಳ್ಳಹಳ್ಳಿ(15 ಎಕರೆ)
- ಬೆಂಗಳೂರು ಪೂರ್ವ: ಕಾಡಅಗ್ರಹಾರ (9 ಎಕರೆ), ಕಣ್ಣೂರು (46 ಎಕರೆ), ಮಿಟ್ಟಗಾನಹಳ್ಳಿ (35 ಎಕರೆ), ದೊಣ್ಣೇನಹಳ್ಳಿ (7.20 ಎಕರೆ)
- ಆನೇಕಲ್: ಮಹಾಂತಲಿಂಗಪುರ (2 ಎಕರೆ), ಹಳೇ ಸಂಪಿಗೆಹಳ್ಳಿ (4.20 ಎಕರೆ), ಮಂಟಪ (1.20 ಎಕರೆ), ಹುಲಿಮಂಗಲ (2 ಎಕರೆ), ಎಸ್. ಬಿಂಗಿಪುರ (3.20 ಎಕರೆ), ಹುಲ್ಲಹಳ್ಳಿ (2.20 ಎಕರೆ), ಲಕ್ಷ್ಮಿಪುರ (2 ಎಕರೆ), ಗೊಲ್ಲಹಳ್ಳಿ (1.15 ಎಕರೆ), ಸಕಲವಾರ ( 1.1 ಎಕರೆ).
from India & World News in Kannada | VK Polls https://ift.tt/3ntLWiw