2021ರ ಐಪಿಎಲ್‌ನಿಂದ ಅಶ್ವಿನ್‌ ಔಟ್‌! ಎಸ್‌ಆರ್‌ಎಚ್‌ ವಿರುದ್ಧ ಗೆದ್ದ ಬೆನ್ನಲ್ಲೆ ಡೆಲ್ಲಿಗೆ ಆಘಾತ!

ಚೆನ್ನೈ: ಕೋವಿಡ್ -19ನಿಂದ ಹೋರಾಡುತ್ತಿರುವ ತಮ್ಮ ಕುಟುಂಬಕ್ಕೆ ಬೆಂಬಲ ನೀಡಲು ಬಯಸುತ್ತಿರುವ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು ಪ್ರಸ್ತುತ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಹದಿನಾಲ್ಕನೇ ಋತುವಿನಿಂದ ವಿರಾಮ ತೆಗೆದುಕೊಳ್ಳುವುದಾಗಿ ಘೋಷಿಸಿದ್ದಾರೆ. ಭಾನುವಾರ ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಸನ್‌ರೈಸರ್ಸ್ ಹೈದರಬಾದ್‌ ವಿರುದ್ಧ ನಡೆದಿದ್ದ ಪಂದ್ಯದಲ್ಲಿ ರವಿಚಂದ್ರನ್ ಅಶ್ವಿನ್‌ ಆಡಿದ್ದರು. ಸೂಪರ್‌ ಓವರ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಗೆಲುವು ಪಡೆದ ಬಳಿಕ, ತಮ್ಮ ಅಧಿಕೃತ ಟ್ವಿಟರ್‌ನಲ್ಲಿ ಪ್ರಸಕ್ತ ಆವೃತ್ತಿಯ ಐಪಿಎಲ್‌ ಟೂರ್ನಿಯಿಂದ ವಿರಾಮ ಪಡೆಯುವ ಬಗ್ಗೆ ಅಶ್ವಿನ್ ಬಹಿರಂಗಪಡಿಸಿದ್ದಾರೆ. "ನಾಳೆಯಿಂದ(ಸೋಮವಾರ) 2021ರ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಗೆ ವಿರಾಮ ತೆಗೆದುಕೊಳ್ಳುತ್ತಿದ್ದೇನೆ. ಕೋವಿಡ್‌-19 ಕಠಿಣ ಸಮಯದಲ್ಲಿ ತಮ್ಮ ಕುಟುಂಬ ಹೋರಾಟಕ್ಕೆ ನೆರವು ನೀಡುವ ಸಲುವಾಗಿ ಈ ನಿರ್ಧಾರ ತೆಗೆದುಕೊಳ್ಳುತ್ತಿದ್ದೇನೆ. ಮುಂದಿನ ದಿನಗಳಲ್ಲಿ ಸಂಗತಿಗಳು ಸಕಾರಾತ್ಮಕವಾಗಿದ್ದರೆ, ಮತ್ತೆ ತಂಡಕ್ಕೆ ಮರಳುವ ನಿರೀಕ್ಷೆಯನ್ನು ಇಟ್ಟುಕೊಂಡಿದ್ದೇನೆ," ಎಂದು ಅಶ್ವಿನ್‌ ಟ್ವೀಟ್‌ ಮಾಡಿದ್ದಾರೆ. ಅವರ ನಿರ್ಧಾರವನ್ನು ಡೆಲ್ಲಿ ಕ್ಯಾಪಿಟಲ್ಸ್ ಕೂಡ ಬೆಂಬಲಿಸಿತು. "ನಿಮ್ಮ ಕುಟುಂಬದ ಕಠಿಣ ಸನ್ನಿವೇಶದಲ್ಲಿ ನಾವು ನಿಮಗೆ ಸಂಪೂರ್ಣ ಬೆಂಬಲ ನೀಡುತ್ತೇವೆ. ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಎಲ್ಲಾ ಆಟಗಾರರು ನಿಮಗೆ ಹಾಗೂ ನಿಮ್ಮ ಕುಟುಂಬದ ಒಳಿತಿಗೆ ಪ್ರಾರ್ಥನೆ ಮಾಡುತ್ತೇವೆ," ಎಂದು ಡೆಲ್ಲಿ ಕ್ಯಾಪಿಟಲ್ಸ್ ಟ್ವೀಟ್‌ ಮಾಡಿದೆ. ಭಾರತದಲ್ಲಿ ಕೋವಿಡ್‌-19 ಎರಡನೇ ಅಲೆ ಜಾಸ್ತಿಯಾಗುತ್ತಿದ್ದು, ಪ್ರತಿದಿನ ದೇಶದಲ್ಲಿ 3 ಲಕ್ಷ ಪ್ರಕರಣಗಳು ದಾಖಲಾಗುತ್ತಿವೆ. 2020 ರಿಂದ ಇಷ್ಟು ಪ್ರಮಾಣದ ಕೊರೊನಾ ವೈರಸ್ ಕೇಸ್‌ಗಳು ದಾಖಲಾಗುತ್ತಿರುವುದು ಇದೇ ಮೊದಲು. ಇನ್ನು ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್‌ ತಂಡದ ಕೇನ್‌ ವಿಲಿಯಮ್ಸನ್‌ ಅಜೇಯ 66 ರನ್‌ಗಳಿಸಿದರು. ಆದರೆ, ಅವರಿಗೆ ಮತ್ತೊಂದು ತುದಿಯಲ್ಲಿ ಸರಿಯಾಗಿ ಯಾರೂ ಸಾಥ್‌ ನೀಡಲಿಲ್ಲ. ಆದರೆ, ಕರ್ನಾಟಕ ಆಟಗಾರ ಜೆ ಸುಚಿತ್‌ ಅವರ ಅಜೇಯ 14 ರನ್‌ಗಳಿಂದ ಪಂದ್ಯ ಸೂಪರ್‌ ಓವರ್‌ಗೆ ಹೋಗಲು ಕಾರಣವಾಯಿತು. ಆದರೆ, ಎಸ್‌ಆರ್‌ಎಚ್‌ ನೀಡಿದ್ದ 8 ರನ್‌ಗಳನ್ನು ಡೆಲ್ಲಿ ಕ್ಯಾಪಿಟಲ್ಸ್ ಚೇಸ್‌ ಮಾಡಿ ಗೆಲುವು ದಕ್ಕಿಸಿಕೊಂಡಿತು. ಇದಕ್ಕೂ ಮುನ್ನ ಮೊದಲು ಬ್ಯಾಟಿಂಗ್‌ ಮಾಡಿದ್ದ ಪೃಥ್ವಿ ಶಾ(53) ಹಾಗೂ ರಿಷಭ್‌ ಪಂತ್‌ (37) ಅವರ ಜವಾಬ್ದಾರಿಯುತ ಬ್ಯಾಟಿಂಗ್‌ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡ ತನ್ನ ಪಾಲಿನ 20 ಓವರ್‌ಗಳಿಗೆ 4 ವಿಕೆಟ್‌ ಕಳೆದುಕೊಂಡು 159 ರನ್‌ ದಾಖಲಿಸಿತ್ತು. ಶಿಖರ್ ಧವನ್‌ ಹಾಗೂ ಸ್ಟೀವನ್‌ ಸ್ಮಿತ್‌ ಕ್ರಮವಾಗಿ 28 ಮತ್ತು 34 ರನ್‌ಗಳಿಸುವ ಮೂಲಕ ತಂಡಕ್ಕೆ ನೆರವಾಗಿದ್ದರು. ಎಸ್‌ಆರ್‌ಎಚ್‌ ಪರ ಸಿದ್ದಾರ್ಥ್‌ ಕೌಲ್ ಎರಡು ವಿಕೆಟ್‌ ಕಿತ್ತಿದ್ದರು. ಡೆಲ್ಲಿ ಕ್ಯಾಪಿಟಲ್ಸ್ ತಂಡ ನಾಲ್ಕು ಪಂದ್ಯಗಳ ಗೆಲುವಿನೊಂದಿಗೆ ಪಾಯಿಂಟ್ಸ್‌ ಟೇಬಲ್‌ನಲ್ಲಿ ಎರಡನೇ ಸ್ಥಾನಕ್ಕೇರಿದೆ. ಮಂಗಳವಾರ ವಿರಾಟ್‌ ಕೊಹ್ಲಿ ನಾಯಕತ್ವದ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಅಹ್ಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಸೆಣಸಲಿದೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3vgRXBW

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...