SRH vs DC Live Score: ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿದ ಡೆಲ್ಲಿ!

ಚೆನ್ನೈ: ಹದಿನಾಲ್ಕನೇ ಆವೃತ್ತಿಯ ಟೂರ್ನಿಯಲ್ಲಿ ಅಂಕಪಟ್ಟಿಯ ಅಗ್ರಸ್ಥಾನಕ್ಕೇರುವ ಕಡೆಗೆ ಗುರಿ ಇಟ್ಟಿರುವ ತಂಡ ತಂಡದ ಕಠಿಣ ಸವಾಲನ್ನು ಎದುರಿಸಲಿದೆ. ಇಲ್ಲಿನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಭಾನುವಾರದ ಡಬಲ್‌ ಹೆಡರ್‌ನ ಎರಡನೇ ಪಂದ್ಯದಲ್ಲಿ ಟಾಸ್‌ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್‌ ನಾಯಕ ರಿಷಭ್ ಪಂತ್ ಮೊದಲು ಬ್ಯಾಟ್‌ ಮಾಡುವ ನಿರ್ಧಾರ ತೆಗದುಕೊಂಡರು. ಡೆಲ್ಲಿ ತಂಡಕ್ಕೆ ಶುಭ ಸುದ್ದಿ ಎಂಬಂತೆ ಕೋವಿಡ್-19 ನಿಂದ ಚೇತರಿಸಿರುವ ಸ್ಟಾರ್‌ ಆಲ್‌ರೌಂಡರ್‌ ಅಕ್ಷರ್‌ ಪಟೇಲ್‌ ಆಡುವ ಹನ್ನೊಂದರ ಬಳಗಕ್ಕೆ ಕಮ್‌ಬ್ಯಾಕ್‌ ಮಾಡಿದ್ದಾರೆ. ಲಲಿತ್‌ ಯಾದವ್‌ ಜಾಗದಲ್ಲಿ ಪಟೇಲ್‌ ಅವರನ್ನು ಡೆಲ್ಲಿ ಆಡಿಸಲು ಮುಂದಾಗಿದೆ. ಇನ್ನು ಸನ್‌ರೈಸರ್ಸ್‌ ತಂಡದ ಅನುಭವಿ ವೇಗಿ ಭುವನೇಶ್ವರ್‌ ಕುಮಾರ್‌ ಗಾಯದ ಸಮಸ್ಯೆ ಎದುರಿಸಿರುವ ಕಾರಣ ಅವರ ಜಾಗದಲ್ಲಿ ಆಲ್‌ರೌಂಡರ್ ಕನ್ನಡಿಗ ಜಗದೀಶ ಸುಚಿತ್‌ ಅವಕಾಶ ಪಡೆದಿದ್ದಾರೆ. ಸನ್‌ರೈಸರ್ಸ್ ಪ್ಲೇಯಿಂಗ್ ಇಲೆವೆನ್ಡೇವಿಡ್ ವಾರ್ನರ್ (ನಾಯಕ), ಜಾನಿ ಬೈರ್‌ಸ್ಟೋವ್ (ವಿಕೆಟ್‌ಕೀಪರ್‌), ಕೇನ್ ವಿಲಿಯಮ್ಸನ್, ವಿರಾಟ್ ಸಿಂಗ್, ವಿಜಯ್ ಶಂಕರ್, ಅಭಿಷೇಕ್ ಶರ್ಮಾ, ಕೇದಾರ್ ಜಾಧವ್, ರಶೀದ್ ಖಾನ್, ಜಗದೀಶ ಸುಚಿತ್, ಖಲೀಲ್ ಅಹ್ಮದ್, ಸಿದ್ಧಾರ್ಥ್ ಕೌಲ್. ಕ್ಯಾಪಿಟಲ್ಸ್‌ ಪ್ಲೇಯಿಂಗ್ ಇಲೆವೆನ್ ಪೃಥ್ವಿ ಶಾ, ಶಿಖರ್ ಧವನ್, ಸ್ಟೀವ್ ಸ್ಮಿತ್, ರಿಷಭ್ ಪಂತ್ (ವಿಕೆಟ್‌ಕೀಪರ್‌ / ನಾಯಕ), ಶಿಮ್ರಾನ್ ಹೆಟ್ಮಾಯೆರ್‌, ಮಾರ್ಕಸ್ ಸ್ಟೊಯ್ನಿಸ್‌, ಅಕ್ಷರ್ ಪಟೇಲ್, ಆರ್‌ ಅಶ್ವಿನ್, ಕಗಿಸೊ ರಬಾಡ, ಅಮಿತ್ ಮಿಶ್ರಾ, ಅವೇಶ್ ಖಾನ್.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3gIPUCR

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...