ಬೆಂಗಳೂರಿನಲ್ಲಿ ಕೊರೊನಾ ಪರೀಕ್ಷೆಗೆ ಜನರ ಪರದಾಟ: ಬಿಯು ನಂಬರ್ ಸಿಗೋದು ಕಷ್ಟ ಕಷ್ಟ..!

: ನಗರದಲ್ಲೆಡೆ ಕೊರೊನಾ ಸೋಂಕು ಹಬ್ಬುತ್ತಿರುವ ನಡುವೆ ಪಿಎಚ್‌ಸಿಗಳ ಮುಂದೆ ಸರತಿ ಸಾಲು ಸೃಷ್ಟಿಯಾಗುತ್ತಿದೆ. ಕೆಲವೆಡೆಯಂತೂ ಅರ್ಧ ದಿನ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಆರೋಗ್ಯ ಕೇಂದ್ರಗಳಲ್ಲಿ ಬೆಳಗ್ಗೆ 10 ಗಂಟೆಯಿಂದ 5 ಗಂಟೆಯವರೆಗೆ ಟೆಸ್ಟ್‌ ನಡೆಸಲಾಗುತ್ತಿದೆ. ಕೆಲ ಆರೋಗ್ಯ ಕೇಂದ್ರಗಳಲ್ಲಿ ದಿನಕ್ಕೆ 200-300 ಜನರಿಗೆ ಟೆಸ್ಟ್‌ ಮಾಡಲಾಗುತ್ತಿದೆ. ತಡವಾಗಿ ಬಂದರೆ ಹೆಚ್ಚು ಹೊತ್ತು ಕಾಯಬೇಕು ಎಂದು ಬೆಳಗ್ಗೆ 8 ಗಂಟೆಗೆ ಜನರು ಸರದಿಯಲ್ಲಿ ಬಂದು ನಿಲ್ಲುತ್ತಿದ್ದಾರೆ. ಕೆಲವೇ ಹೊತ್ತಿನಲ್ಲಿ ಮಾಡಿಸಿಕೊಂಡು ಬರುವುದು ಎಲ್ಲೂ ಸಾಧ್ಯವಾಗುತ್ತಿಲ್ಲ. ಕನಿಷ್ಠ 2 ಗಂಟೆಯಿಂದ ಐದಾರು ಗಂಟೆ ಕಾಯುವುದು ಅನಿವಾರ್ಯವಾಗಿದೆ. ಸಂಗ್ರಹ ಕೇಂದ್ರ ಇಲ್ಲ: ಕೊರೊನಾ ಮೊದಲ ಅಲೆ ಸಂದರ್ಭದಲ್ಲಿ ರಸ್ತೆ ಬದಿ ಸೇರಿದಂತೆ ಅಲ್ಲಲ್ಲಿ ಟೆಂಟ್‌ ಹಾಕಿ ಸ್ಯಾಂಪಲ್‌ ಪಡೆಯಲಾಗುತ್ತಿತ್ತು. ಆದರೆ, ಇದೀಗ ಅಂತಹ ವ್ಯವಸ್ಥೆ ಇಲ್ಲದ ಕಾರಣ ಪಿಎಚ್‌ಸಿಗಳಿಗೇ ತೆರಳಿ ಪರೀಕ್ಷೆ ಮಾಡಿಸಬೇಕಿದೆ. ಪಾಲಿಕೆಯು ಹಲವು ಮೊಬೈಲ್‌ ತಂಡಗಳನ್ನು ರಚಿಸಿ ಸ್ಯಾಂಪಲ್‌ ಸಂಗ್ರಹಕ್ಕೆ ಕ್ರಮ ಕೈಗೊಂಡಿದ್ದರೂ ಇವುಗಳ ಸಂಖ್ಯೆ ಸದ್ಯದ ಪರಿಸ್ಥಿತಿಯಲ್ಲಿ ಏನೇನೂ ಸಾಲದು ಎಂಬಂತಾಗಿದೆ. ಖಾಸಗಿ ಟೆಸ್ಟ್‌ ದುಬಾರಿ: ಖಾಸಗಿ ಆಸ್ಪತ್ರೆ, ಲ್ಯಾಬೊರೇಟರಿಗಳಲ್ಲಿ ಆರ್‌ಟಿಸಿಪಿಆರ್‌ ಟೆಸ್ಟ್‌ಗೆ ಕನಿಷ್ಠ 800 ರೂ.ನಿಂದ 1500 ರೂ.ವರೆಗೂ ದರ ಇದೆ. ಆದರೆ ಹೆಚ್ಚಿನವರಿಗೆ ಹಣ ಕೊಟ್ಟು ಪರೀಕ್ಷೆ ಮಾಡಿಸಲು ಸಾಧ್ಯವಾಗುತ್ತಿಲ್ಲ. ಬಿಯು ನಂಬರ್‌ ವಿಳಂಬ: ಕೆಲ ಖಾಸಗಿ ಆಸ್ಪತ್ರೆ, ಲ್ಯಾಬೊರೇಟರಿಗಳಲ್ಲಿ ಪರೀಕ್ಷೆ ಮಾಡಿಸಿದವರಿಗೆ ಪರೀಕ್ಷಾ ವರದಿ ತ್ವರಿತವಾಗಿ ಸಿಗುತ್ತಿದ್ದರೂ ಬಿಯು ನಂಬರ್‌ ಸಿಗುವುದು ವಿಳಂಬವಾಗುತ್ತಿದೆ. ಇದರಿಂದಾಗಿ ಕೆಲವರು ಕಷ್ಟಪಟ್ಟಾದರೂ ಆರೋಗ್ಯ ಕೇಂದ್ರಗಳಲ್ಲೇ ತಪಾಸಣೆ ಮಾಡಿಸಿಕೊಳ್ಳುತ್ತಿದ್ದಾರೆ.


from India & World News in Kannada | VK Polls https://ift.tt/2QDk1AJ

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...