ಧೂಮಪಾನಿ, ಸಸ್ಯಾಹಾರಿಗಳಿಗೆ ಕೊರೊನಾ ಸೋಂಕು ತಗುಲುವ ಸಾಧ್ಯತೆ ಕಡಿಮೆ: ಸಿಎಸ್‌ಐಆರ್‌

ಹೊಸದಿಲ್ಲಿ: ಕೊರೊನಾ 2ನೇ ಅಲೆ ಜೋರಾಗಿರುವ ನಡುವೆ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನೆ ಮಂಡಳಿ ಅಧ್ಯಯನ ನಡೆಸಿ, ಮತ್ತು ಸಸ್ಯಾಹಾರಿಗಳಿಗೆ ಕೊರೊನಾ ಸೋಂಕು ತಗುಲುವ ಸಾಧ್ಯತೆ ಇತರರಿಗಿಂತ ಕಡಿಮೆ ಎಂದು ಹೇಳಿದೆ. ದೇಶದ ಹಲವು ರಾಜ್ಯಗಳಲ್ಲಿ ಮಂಡಳಿಯು ಸಮೀಕ್ಷೆ ನಡೆಸಿದ್ದು, ಸಿಗರೇಟು-ಬೀಡಿ ಸೇದುವವರಲ್ಲಿಈಗಾಗಲೇ ಕಫದ ಉತ್ಪತ್ತಿ ಹೆಚ್ಚಾಗಿಯೇ ಇರುತ್ತದೆ. ಈ ವೇಳೆ ಕೊರೊನಾ ವೈರಾಣು ಕೂಡ ಕಫದ ಉತ್ಪತ್ತಿಯಿಂದ ಶ್ವಾಸಕೋಶವನ್ನು ಆವರಿಸಲು ಯತ್ನಿಸಿದಾಗ ದೇಹವು ಪ್ರತಿರೋಧ ಒಡ್ಡುತ್ತದೆ. ಇದು ಮೊದಲ ಹಂತದ ನಿರೋಧಕತೆಯಂತೆ ಕೆಲಸ ಮಾಡುವ ಸಾಧ್ಯತೆಯಿದೆ. ಇನ್ನು ಸಸ್ಯಾಹಾರಿಗಳು ಹೆಚ್ಚಾಗಿ ನಾರಿನ ಅಂಶದಿಂದ ಕೂಡಿದ ಪದಾರ್ಥಗಳ ಸೇವನೆ ಮಾಡುವುದರಿಂದ ಕೊರೊನಾ ವಿರುದ್ಧ ದೇಹದಲ್ಲಿ ಪರಿಣಾಮಕಾರಿ ರೋಗನಿರೋಧಕತೆ ವೃದ್ಧಿಯಾಗಿರುತ್ತದೆ. ಶ್ವಾಸಕೋಶದ ಉರಿಯೂತ ಉಂಟು ಮಾಡಲು ಕೊರೊನಾ ವೈರಾಣುವಿಗೆ ಸುಲಭವಾಗಿ ಸಾಧ್ಯವಾಗುವುದಿಲ್ಲ ಎಂದು ಅಧ್ಯಯನಕಾರರು ಹೇಳಿದ್ದಾರೆ. ದಿಲ್ಲಿ ಲಾಕ್‌ಡೌನ್‌ ವಿಸ್ತರಣೆ! ಹಲವು ಬಿಗಿ ನಿರ್ಬಂಧಗಳ ಮಧ್ಯೆಯೂ ದೇಶದಲ್ಲಿಕೊರೊನಾ ಸ್ಫೋಟ ನಾಗಾಲೋಟದಲ್ಲಿಸಾಗಿದೆ. ದೇಶದಲ್ಲಿದಿನವಹಿ ಸೋಂಕಿನ ಪ್ರಕರಣಗಳು ಮೂರುವರೆ ಲಕ್ಷದ ಗಡಿಗೆ ಬಂದು ತಲುಪಿದೆ. ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿಸೋಂಕಿತರ ಸಂಖ್ಯೆ ಏರಿಕೆ ಹಾಗೂ ಆಮ್ಲಜನಕದ ಕೊರತೆ ಮುಂದುವರಿದಿರುವ ಮಧ್ಯೆ ಕೋವಿಡ್‌ ನಿಯಂತ್ರಣಕ್ಕೆ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಸರಕಾರ ಲಾಕ್‌ಡೌನ್‌ಅನ್ನು ಮೇ 3ರವರೆಗೆ ವಿಸ್ತರಿಸಿದೆ.


from India & World News in Kannada | VK Polls https://ift.tt/2S4wCNS

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...