ಪೂರ್ವ ಲಡಾಖ್ ಗಡಿಗೆ ಭೂಸೇನಾ ಮುಖ್ಯಸ್ಥ: ಸೈನ್ಯ ಸಿದ್ಧತೆ ಪರಿಶೀಲಿಸಿದ ಜನರಲ್ ನರವಣೆ!

ಲಡಾಖ್: ಭಾರತ-ಚೀನಾ ಸೈನಿಕರ ಸಂಘರ್ಷಕ್ಕೆ ಕಾರಣವಾಗಿದ್ದ ಮತ್ತು ಇದೀಗ ಬಹುತೇಕ ಸ್ತಬ್ಧವಾಗಿರುವ ಲಡಾಖ್ ಗಡಿ ಪ್ರದೇಶಕ್ಕೆ ಭಾರತೀಯ ಭೂಸೇನೆ ಮುಖ್ಯಸ್ಥ ಭೇಟಿ ನೀಡಿದ್ದಾರೆ. ಪೂರ್ವ ಲಡಾಖ್‌ನ ಮುಂಚೂಣಿ ಸೇನಾ ನೆಲೆಗಳಿಗೆ ಭೇಟಿ ನೀಡಿದ ಜನರಲ್ ಎಂಎಂ ನರವಣೆ, ಸೈನ್ಯ ಸಿದ್ಧತೆಯನ್ನು ಪರಿಶೀಲಿಸಿದರು. ಅಲ್ಲದೇ ಸುದೀರ್ಘ ಅವಧಿಗೆ ಗಡಿ ಕಾಯುತ್ತಿರುವ ಯೋಧರ ಆತ್ಮಬಲವನ್ನು ಕೊಂಡಾಡಿದರು. ಪೂರ್ವ ಲಡಾಖ್‌ನ ಮುಂಚೂಣಿ ಸೇನಾ ನೆಲೆಗಳಲ್ಲಿ ಬೀಡು ಬಿಟ್ಟಿರುವ ಸೈನಿಕರೊಂದಿಗೆ ಸಂವಾದ ನಡೆಸಿದ ಜನರಲ್ ನರವಣೆ, ಸೈನ್ಯ ಸಿದ್ಧತೆಗೆ ತೃಪ್ತಿ ವ್ಯಕ್ತಪಡಿಸಿದರು. ಕಳೆದ ವರ್ಷ ಚೀನಿ ಸೇನೆಯ ಆಕ್ರಮಣಕಾರಿ ವರ್ತನೆಯ ಪರಿಣಾಮವಾಗಿ ಭಾರತ-ಚೀನಾ ಸೈನಿಕರ ನಡುವೆ ಸಂಘರ್ಷವೇರ್ಪಟ್ಟಿತ್ತು. ಅಲ್ಲದೇ ಸುದೀರ್ಘ ಲಡಾಖ್ ಗಡಿ ಬಿಕ್ಕಟ್ಟಿಗೆ ನಾಂದಿ ಹಾಡಿತ್ತು. ಆದರೆ ಸತತ ಮಿಲಿಟರಿ ಮತ್ತು ರಾಜತಾಂತ್ರಿಕ ಮಾತುಕತೆಯ ಫಲವಾಗಿ, ಲಡಾಖ್ ಗಡಿಯಿಂದ ಸೈನ್ಯವನ್ನು ಹಿಂಪಡೆಯುವ ನಿರ್ಧಾರಕ್ಕೆ ಬರಲಾಗಿದೆ. ಅದರಂತೆ ಭಾರತ-ಚೀನಾ ಸೈನಿಕರು ಇದೀಗ ತಮ್ಮ ಮೂಲ ಗಡಿ ಸ್ಥಾನಗಳಿಗೆ ಮರಳಿಸಿದ್ದಾರೆ. ಕಳೆದ ವರ್ಷದ ಜೂನ್ 15ರಂದು ಲಡಾಖ್ ಗಡಿಯ ಗಲ್ವಾನ್ ಪ್ರದೇಶದಲ್ಲಿ ಭಾರತ-ಚೀನಾ ಸೈನಿಕರ ನಡುವೆ ಭೀಕರ ಸಂಘರ್ಷ ನಡೆದ ಪರಿಣಾಮ, ಭಾರತೀಯ ಸೇನೆಯ 20 ಯೋಧರು ಹುತಾತ್ಮರಾಗಿದ್ದರು. ಅದರಂತೆ ಸುಮಾರು 45 ಚೀನಿ ಸೈನಿಕರೂ ಹತರಾಗಿದ್ದು, ಚೀನಾ ಮಾತ್ರ ಇದುವರೆಗೂ ಈ ಕುರಿತು ಅಧಿಕೃತ ಮಾಹಿತಿಯನ್ನು ನೀಡಿಲ್ಲ. ಕೇವಲ ತನ್ನ ಸೈನಿಕರು ಸತ್ತಿರುವುದಾಗಿ ಮಾತ್ರ ಚೀನಾ ದೃಢಪಡಿಸಿದೆ.


from India & World News in Kannada | VK Polls https://ift.tt/3u3kAlO

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...