ದೊಡ್ಡಬಳ್ಳಾಪುರ: ತವರು ಮನೆಗೆ ಹೋದ ವಾಪಸ್ ಬರಲಿಲ್ಲ ಎಂದು ಕ್ರೋಧಗೊಂಡ ಪತಿ ಮಹಾಶಯ, ಮಡದಿಯ ತಂದೆ ಮತ್ತು ತಾಯಿಗೆ ಚಾಕುವಿನಿಂದ ಇರಿದಿದ್ದಾನೆ. ನಗರದ ಮುತ್ಯಾಲಮ್ಮ ದೇವಾಲಯದ ಸಮೀಪ ಈ ಕೃತ್ಯ ನಡೆದಿದೆ. ಗೌರಿಬಿದನೂರಿನ ಮಂಜುನಾಥ್ ಕೃತ್ಯವೆಸಗಿದ ಆರೋಪಿ. ನಗರದ ಮುತ್ಯಾಲಮ್ಮ ಸಮೀಪ ವಾಸವಿರುವ ಶ್ರೀನಿವಾಸ್ ಜಯಮ್ಮ ದಂಪತಿ ಮನೆ ಬಳಿ ಬಂದ ಮಂಜುನಾಥ್, ಜಗಳವಾಡಿ ಅತ್ತೆ ಜಯಮ್ಮ ಹಾಗೂ ಮಾವ ಶ್ರೀನಿವಾಸ್ ಅವರಿಗೆ ಚಾಕುವಿನಿಂದ ಇರಿದಿದ್ದಾನೆ. ಘಟನೆಯಲ್ಲಿ ತೀವ್ರ ಗಾಯಗೊಂಡ ದಂಪತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿ ಮಂಜುನಾಥನನ್ನು ವಶಕ್ಕೆ ಪಡೆದಿರುವ ನಗರ ಠಾಣೆ ಪೊಲೀಸರು, ಪ್ರಕರಣ ದಾಖಲಿಸಿ, ತನಿಖೆ ನಡೆಸುತ್ತಿದ್ದಾರೆ. ಕೂಲಿ ಕಾರ್ಮಿಕನಾಗಿರುವ ಮಂಜುನಾಥ್ ನಿತ್ಯವು ಕುಡಿದು ತೂರಾಡುತ್ತಿದ್ದನಂತೆ. ಸಂಪೂರ್ಣ ಮನೆಯ ಜವಾಬ್ಧಾರಿಯನ್ನು ಪತ್ನಿಯೇ ನೋಡಿಕೊಳ್ಳುತ್ತಿದ್ದಳು. ಇತ್ತೀಚೆಗೆ ಗಲಾಟೆ ನಡೆದು ಪತ್ನಿ ತನ್ನ ತವರು ಮನೆಗೆ ಬಂದಿದ್ದಾಳೆ. ಇದರಿಂದ ಕೋಪಗೊಂಡಿದ್ದ ಪತಿರಾಯ ಅತ್ತೆ, ಮಾವನ ಮನೆಗೆ ಬಂದು ಗಲಾಟೆ ಮಾಡಿದ್ದಾನೆ. ತಂದಿದ್ದ ಚೂರಿಯಿಂದ ಇರಿದಿದ್ದಾನೆ.
from India & World News in Kannada | VK Polls https://ift.tt/3gd9RkT