ಸೊರಬ: ಮೊಬೈಲ್‌ ಟವರ್‌ ಬ್ಯಾಟರಿ ಕದ್ದ ಆರು ಜನರ ಬಂಧನ

ಸೊರಬ: ಮೊಬೈಲ್‌ ಟವರ್‌ನಲ್ಲಿ ಅಳವಡಿಸಿದ್ದ ಬ್ಯಾಟರಿಗಳನ್ನು ಕಳವು ಮಾಡಿದ ಆರೋಪದ ಮೇಲೆ ಪೊಲೀಸರು ಗುರುವಾರ 6 ಜನರನ್ನು ಬಂಧಿಸಿದ್ದಾರೆ. ಚಂದ್ರು ಹಾವೇರಿ(21), ಗಣೇಶ ಕುದುರೆಗಣಿ(33), ದೀಪಕ್‌ ಶಿರಸಿ(25), ಸಂದೀಪ ಶಿರಸಿ(20), ಯುವರಾಜ್‌ ಶಿರಸಿ(18), ಗುಲ್ಘಾಮ್‌ ಮಲ್ಲಿಕ್‌ ಶಿರಸಿ(29) ಬಂಧಿತರು. ತಾಲೂಕಿನ ಮಾವಲಿ ಗ್ರಾಮದಲ್ಲಿರುವ ಮೊಬೈಲ್‌ ಟವರ್‌ನಲ್ಲಿ ಅಳವಡಿಸಿದ್ದ 48 ಬ್ಯಾಟರಿಗಳು ಮಂಗಳವಾರ ಕಳವಾಗಿದ್ದವು. ಈ ಬಗ್ಗೆ ದೂರು ದಾಖಲಿಸಿಕೊಂಡ ಪೊಲೀಸರು ಖಚಿತ ಮಾಹಿತಿ ಮೇರೆಗೆ ಪಟ್ಟಣದ ಕಾನುಕೊಪ್ಪದ ಬಳಿ ಕಳ್ಳತನ ಮಾಡಿ ಸಾಗಿಸುತ್ತಿದ್ದ ಬ್ಯಾಟರಿಗಳ ಸಮೇತ 2 ಲಗೇಜ್‌ ಆಟೊ ವಶಪಡಿಸಿಕೊಂಡಿದ್ದಾರೆ. ಸಿಪಿಐ ಮರುಳಸಿದ್ದಪ್ಪ ಹಾಗೂ ಪಿಎಸ್‌ಐ ಟಿ.ಬಿ.ಪ್ರಶಾಂತ್‌ ಕುಮಾರ್‌ ನೇತೃತ್ವದಲ್ಲಿಎಎಸ್‌ಐ ಶಬ್ಬೀರ್‌ ಖಾನ್‌, ಸಿಬ್ಬಂದಿ ದಿನೇಶ್‌, ಸಂದೀಪ್‌, ಪ್ರಭಾಕರ್‌, ಮೋಹನ್‌, ಉಮೇಶ್‌, ಶಿವಾಜಿ, ಸಿದ್ದನಗೌಡ, ಮಂಜುನಾಥ್‌ ದೈವಜ್ಞ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.


from India & World News in Kannada | VK Polls https://ift.tt/3topzxj

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...