ಸಿಂಧನೂರು: ಐದು ವರ್ಷ ಅಧಿಕಾರ ಮಾಡಲಿ ಎಂದು ಆಶೀರ್ವದಿಸಿದ ಮಸ್ಕಿ ಕ್ಷೇತ್ರದ ಜನರಿಗೆ ದ್ರೋಹ ಬಗೆದ ಪ್ರತಾಪಗೌಡ ಪಾಟೀಲ್ ಅವರು ಹಣ, ಅಧಿಕಾರಕ್ಕಾಗಿ ಬಿಜೆಪಿಗೆ ಮಾರಾಟವಾಗಿ ಚುನಾವಣೆ ಬರುವಂತೆ ಮಾಡಿದ್ದಾರೆ. ಅವರಿಗೆ ಕ್ಷೇತ್ರದ ಮತದಾರರು ಈ ಬಾರಿ ತಕ್ಕಪಾಠ ಕಲಿಸಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು. ಕ್ಷೇತ್ರದ ಗುಂಡಾ ಗ್ರಾಮದಲ್ಲಿ ಮಸ್ಕಿ ಉಪ ಚುನಾವಣೆ ನಿಮಿತ್ತ ಕಾಂಗ್ರೆಸ್ ಅಭ್ಯರ್ಥಿ ಆರ್.ಬಸನಗೌಡ ತುರುವಿಹಾಳ ಅವರ ಪರ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದರು. ಮೂವತ್ತು ವರ್ಷಗಳಿಂದ ರಾಜಕೀಯ ಮಾಡುತ್ತಿದ್ದೇನೆ. ಮಸ್ಕಿ ಕ್ಷೇತ್ರದಲ್ಲಿ ಈ ಬಾರಿ ಮತದಾರರಲ್ಲಿ ಹೆಚ್ಚಿನ ಜಾಗೃತಿ ಕಂಡುಬಂದಿದೆ. ಕಾಂಗ್ರೆಸ್ ಅಭ್ಯರ್ಥಿಗೆ ಗೆಲುವು ಸುಲಭವಾಗಿ ಸಿಗಲಿದೆ. ದುಡ್ಡಿನಿಂದ ಅಧಿಕಾರ ಪಡೆಯಲು ಹೊರಟಿರುವ ಬಿಜೆಪಿಯವರ ಬಗ್ಗೆ ಕಾರ್ಯಕರ್ತರು ಎಚ್ಚರವಹಿಸಬೇಕು. ಮತದಾರರಲ್ಲಿ ಜಾಗೃತಿ ಮೂಡಿಸಬೇಕು. ದೇಶದಲ್ಲಿ ಬೆಲೆ ಏರಿಕೆಗಳಿಂದಾಗಿ ಜನಜೀವನ ನಡೆಸುವುದು ಕಷ್ಟವಾಗಿದೆ ಎಂದು ದೂರಿದರು. ಶಾಸಕ ಅಮರೇಗೌಡ ಬಯ್ಯಾಪುರ, ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಮಾತನಾಡಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆರ್.ಬಸನಗೌಡ ತುರುವಿಹಾಳ, ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ, ಮುಖಂಡರಾದ ಸಿದ್ದನಗೌಡ ಮಾಟೂರು, ಎಂ.ರಂಗನಗೌಡ ಗೊರೇಬಾಳ ಸೇರಿ ಹಲವರಿದ್ದರು.
from India & World News in Kannada | VK Polls https://ift.tt/3skjOiJ