ಅಫ್ಘಾನ್‌ನಿಂದ ಯುಎಸ್ ಪಡೆ ಕಾಲ್ಕಿಳಲು ಚೀನಾ ವಿರೋಧ: ಡ್ರ್ಯಾಗನ್ ಕಳವಳಕ್ಕೆ ಕಾರಣ ಏನು?

ಬೀಜಿಂಗ್: ಅಫ್ಘಾನಿಸ್ತಾನ್‌ದಲ್ಲಿ ಬೀಡು ಬಿಟ್ಟಿರುವ ಎಲ್ಲಾ ಅಮೆರಿಕನ್ ಸೈನಿಕರನ್ನು ವಾಪಸ್ ಕರೆಸಿಕೊಳ್ಳುವ ಜೋ ಬೈಡೆನ್ ನಿರ್ಧಾರವನ್ನು ಟೀಕಿಸಿದೆ. ಅಲ್ಲದೇ ಚೀನಾದಿಂದ ಎದುರಾಗಿರುವ ಬೆದರಿಕೆಯನ್ನು ಎದುರಿಸಲು ಅಫ್ಘಾನಿಸ್ತಾನ್‌ದಿಂದ ಸೈನ್ಯ ಹಿಂಪಡೆಯುತ್ತಿರುವುದಾಗಿ ಅಮೆರಿಕ ಘೋಷಿಸಿರುವುದಕ್ಕೂ ಚೀನಾ ತೀವ್ರ ವಿರೋಧ ವ್ಯಕ್ತಪಡಿಸಿದೆ. ಭಯೋತ್ಪಾದನೆ ವಿರುದ್ಧದ ಜಾಗತಿಕ ಹೋರಾಟದಲ್ಲಿ ನಾವೆಲ್ಲರೂ ಭಾಗಿಗಳು. ಹಾಗೆಂದ ಮೇಲೆ ನಮ್ಮಿಂದ ಅಮೆರಿಕಕ್ಕೆ ಏನು ಅಪಾಯ ಎದುರಾಗಿದೆ ಎಂಬುದು ತಿಳಿಯುತ್ತಿಲ್ಲ ಎಂದು ಚೀನಾ ಪ್ರಶ್ನಿಸಿದೆ. ಅಫ್ಘಾನಿಸ್ತಾನದಲ್ಲಿ ಪ್ರಸ್ತುತ ಭದ್ರತಾ ಪರಿಸ್ಥಿತಿ ಇನ್ನೂ ಸಂಕೀರ್ಣ ಮತ್ತು ಕಠೋರವಾಗಿದೆ. ಭಯೋತ್ಪಾದನೆಯ ಸಮಸ್ಯೆ ಬಗೆಹರಿಯಲು ಇನ್ನೂ ಬಹಳಷ್ಟು ಕಾಲಾವಕಾಶ ಅಗತ್ಯವಿದೆ. ಇಂತಹ ಸಂದರ್ಭದಲ್ಲಿ ಅಫ್ಘಾನಿಸ್ತಾನ್‌ದಿಂದ ತನ್ನ ಸೈನ್ಯವನ್ನು ಅಮೆರಿಕ ಹಿಂಪಡೆಯುತ್ತಿರುವುದು ಸರಿಯಾದ ನಿರ್ಧಾರವಲ್ಲ ಎಂದು ಚೀನಾ ಪ್ರತಿಪಾದಿಸಿದೆ. ಈ ಕುರಿತು ಮಾತನಾಡಿರುವ ಚೀನಾದ ವಿದೇಶಾಂಗ ಇಲಾಖೆ ವಕ್ತಾರ ಜಾವೋ ಲಿಜಿಯಾನ್, ಅಫ್ಘಾನಿಸ್ತಾನ್‌ದಲ್ಲಿ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿರುವುದನ್ನು ಖಾತರಿಪಡಿಸಿಕೊಳ್ಳದ ಹೊರತು ವಿದೇಶಿ ಪಡೆಗಳು ಆ ದೇಶವನ್ನು ತೊರೆಯವುದು ಸೂಕ್ತವಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಅಫ್ಘಾನಿಸ್ತಾನ್‌ದಲ್ಲಿ ಅಮೆರಿಕದ ಹಸ್ತಕ್ಷೇಪ ಅತ್ಯಂತ ಸಂಕೀರ್ಣವಾಗಿದೆ. ಹೀಗೆ ಏಕಾಏಕಿ ಸೈನ್ಯವನ್ನು ಹಿಂಪಡೆದರೆ ಆ ದೇಶ ಅರಾಜಕತೆಯತ್ತ ಮುಖ ಮಾಡಲಿದೆ. ಅಮೆರಿಕ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ ಎಂದು ಜಾವೋ ಲಿಜಿಯಾನ್ ಹೇಳಿದ್ದಾರೆ. ಅಫ್ಘಾನಿಸ್ತಾನ್‌ದಲ್ಲಿ ರಾಜಕೀಯ ಸ್ಥಿರತೆ ಮತ್ತು ಶಾಂತಿ ಸ್ಥಾಪನೆ ಜಾಗತಿಕ ಜವಾಬ್ದಾರಿಯಾಗಿದ್ದು, ಈ ನಿಟ್ಟಿನಲ್ಲಿ ಚೀನಾ ತನ್ನ ಪಾತ್ರವನ್ನು ಅತ್ಯಂತ ಪ್ರಾಮಾಣಿಕತೆಯಿಂದ ನಿಭಾಯಿಸುತ್ತಿದೆ ಎಂದು ಜಾವೋ ಲಿಜಿಯಾನ್ ನುಡಿದರು. ಒಟ್ಟಿನಲ್ಲಿ ಅಫ್ಘಾನಿಸ್ತಾನ್‌ದಿಂದ ಅಮೆರಿಕನ್ ಸೇನೆ ಮರಳುತ್ತಿರುವದಕ್ಕೆ ಚೀನಾ ವಿರೋಧ ವ್ಯಕ್ತಪಡಿಸಿದ್ದು, ಈ ಸೈನ್ಯವನ್ನು ಅಮೆರಿಕ ತನ್ನ ವಿರುದ್ಧ ತಿರುಗಿಸಬಹುದು ಎಂಬ ಆತಂಕದಲ್ಲೂ ಇದೆ ಎಂಬುದು ಸ್ಪಷ್ಟ.


from India & World News in Kannada | VK Polls https://ift.tt/3uUmMfI

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...