ಹಾಸನ: ಜಿಲ್ಲೆಯ ಜೆಡಿಎಸ್ ಭದ್ರ ಕೋಟೆಯನ್ನು ಭೇದಿಸಿ ಕಮಲವನ್ನು ಅರಳಿಸಿದ ಬಿಜೆಪಿ ಶಾಸಕ ಪ್ರೀತಂ ಜೆ ಗೌಡ ಗೆ ಕೊರೊನಾ ಸೋಂಕು ದೃಢ ಪಟ್ಟಿದ್ದು ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದ 15 ದಿನಗಳಿಂದ ಉಪಚುನಾವಣೆಯ ಪ್ರಚಾರ ಕಾರ್ಯದಲ್ಲಿ ಭಾಗಿಯಾಗಿದ್ದ ಹಾಸನ ಶಾಸಕ ಪ್ರೀತಮ್ ಗೌಡ ನೆನ್ನೆ ಸಂಜೆ ಆರೋಗ್ಯದಲ್ಲಿ ವ್ಯತ್ಯಾಸ ಉಂಟಾಗಿ ಕೊರೋನಾ ಪರೀಕ್ಷೆಗೆ ಒಳಪಡಿಸಿದಾಗ ಕೊರೋನಾ ಇರುವುದು ದೃಢಪಟ್ಟಿದೆ. ಹೀಗಾಗಿ ಸ್ವತಹ ಶಾಸಕರೇ ಈ ಬಗ್ಗೆ ದೃಢಪಡಿಸಿದ್ದು ಅವರ ಸಾಮಾಜಿಕ ಜಾಲತಾಣಗಳಲ್ಲಿ ಒಂದಾದ ಫೇಸ್ಬುಕ್ ಮೂಲಕ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಆತ್ಮೀಯರೇ ನನಗೆ ಕೋವಿಡ್-19 ಸೋಂಕು ಅಂದರೆ ಪಟ್ಟಿದ್ದು ಯಾವುದೇ ರೋಗ ಲಕ್ಷಣಗಳಲ್ಲ ದಿದ್ದರೂ ವೈದ್ಯರ ಸಲಹೆಯಂತೆ ಮುಂಜಾಗೃತಾ ಕ್ರಮವಾಗಿ ಐಸೋಲೇಷನ್ ಗೆ ಒಳಪಟ್ಟಿರುತ್ತದೆ. ಇತ್ತೀಚಿನ ನನ್ನ ಜೊತೆ ಸಂಪರ್ಕದಲ್ಲಿದ್ದ ಎಲ್ಲರೂ ಆದಷ್ಟು ಬೇಗ ಹೋಗಿ ಪರೀಕ್ಷೆ ಮಾಡಿಸಿ ಆರೋಗ್ಯದ ಕಡೆ ಗಮನ ಹರಿಸಿ ತಾಯಿ ಹಾಸನಾಂಬೆಯ ಆಶೀರ್ವಾದ ಮತ್ತು ನಿಮ್ಮೆಲ್ಲರ ಹಾರೈಕೆಗಳಿಂದ ಬೇಗ ಗುಣಮುಖನಾಗುತ್ತಾನೆ ಇಂತಿ ನಿಮ್ಮ ಪ್ರೀತಮ್ ಗೌಡ ಎಂದು ತಮ್ಮ ಅಧಿಕೃತ ಫೇಸ್ಬುಕ್ ಮೂಲಕ ಕೋವಿಡ್ 19ರ ದೃಢಪಟ್ಟಿರುವದನ್ನ ಸ್ಪಷ್ಟಪಡಿಸಿದ್ದಾರೆ.
from India & World News in Kannada | VK Polls https://ift.tt/2QrDEeS