ಬೆಂಗಳೂರು: ಹಳೇ ದ್ವೇಷದ ಹಿನ್ನೆಲೆಯಲ್ಲಿ ಯಲಹಂಕದ ಶ್ರೀನಿವಾಸಪುರದಲ್ಲಿ ರಾಘವೇಂದ್ರ (28) ಎಂಬ ವ್ಯಕ್ತಿಯ ತಲೆ ಕತ್ತರಿಸಿ ಮೃತದೇಹದ ಕಾಲುಗಳ ಬಳಿ ಪರಾರಿಯಾಗಿದ್ದ ಏಳು ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರಮುಖ ಆರೋಪಿ ಹೇಮಣ್ಣ ಮತ್ತು ಆತನ ಸಹಚರ ವೇಲು ಸೇರಿದಂತೆ ಏಳು ಆರೋಪಿಗಳನ್ನು ಬಂಧಿಸಲಾಗಿದೆ. ಏ.11 ರಂದು ಶ್ರೀನಿವಾಸಪುರದ ತನ್ನ ಮನೆ ಬಳಿಯ ಮೈದಾನದಲ್ಲಿ ವಾಲಿಬಾಲ್ ಆಡುತ್ತಿದ್ದ ರಾಘವೇಂದ್ರ ಅವರನ್ನು ಮಾತನಾಡಿಸುವ ನೆಪದಲ್ಲಿ ಕರೆಸಿಕೊಂಡ ಆರೋಪಿಗಳು ಕೊಲೆ ಮಾಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿ ಹೇಮಣ್ಣನ ಮಾವ ಮುನಿರಾಜು ಎಂಬುವರ ಮೇಲೆ ಮುನಿಸ್ವಾಮಿ ಮತ್ತು ವಾಸು ಎಂಬುವರು ದಾಳಿ ಮಾಡಿ ಕೊಲೆ ಮಾಡಿದ್ದರು. ಜಗಳ ಬಿಡಿಸಲು ಬಂದಿದ್ದ ಅಳಿಯ ಹೇಮಣ್ಣನ ಮೇಲೂ ಹಲ್ಲೆ ಮಾಡಿದ್ದರು. ಈ ಸೇಡಿನಿಂದ ಹೇಮಣ್ಣ , ತನ್ನ ಸಹಚರರ ಜತೆ ಸೇರಿ ಸಂಪಿಗೆಹಳ್ಳಿ ವ್ಯಾಪ್ತಿಯಲ್ಲಿ ಮುನಿಸ್ವಾಮಿ ಮತ್ತು ವಾಸು ಕೊಲೆಗೆ ಯತ್ನಿಸಿ ಜೈಲಿಗೆ ಹೋಗಿದ್ದ. ಮುನಿಸ್ವಾಮಿ ಹಾಗೂ ವಾಸು ಬೆಂಗಳೂರು ತೊರೆದು ಬೇರೆ ಊರಿನಲ್ಲಿ ನೆಲೆಸಿದ್ದರು. ಜಾಮೀನು ಮೇಲೆ ಹೊರ ಬಂದ ಹೇಮಣ್ಣ , ಮುನಿಸ್ವಾಮಿ ಮತ್ತು ವಾಸು ಮೇಲೆ ದಾಳಿ ನಡೆಸಲು ಹುಡುಕಾಟ ನಡೆಸಿದರೂ ಸಿಕ್ಕಿರಲಿಲ್ಲ. ಅವರಿಗೆ ತಪ್ಪಿಸಿಕೊಳ್ಳಲು ನೆರವಾಗಿದ್ದಾರೆಂಬ ಶಂಕೆ ವ್ಯಕ್ತಪಡಿಸಿ ಮುನಿಸ್ವಾಮಿ ಸಹೋದರ ಅಂದಾನಪ್ಪನ ಅವರ ಪುತ್ರ ರಾಘವೇಂದ್ರನನ್ನು ಕೊಲೆ ಮಾಡಿದ್ದರು.
from India & World News in Kannada | VK Polls https://ift.tt/3gmaacW