ರೆಮ್‌ಡಿಸಿವಿರ್‌ ಕೋವಿಡ್ ಚುಚ್ಚುಮದ್ದು ದರ ಇಳಿಕೆ ಘೋಷಿಸಿದ ಕೇಂದ್ರ!

ಹೊಸದಿಲ್ಲಿ: ಕೊರೊನಾ ಸೋಂಕಿತರ ಚಿಕಿತ್ಸೆಗೆ ಬಳಸುವ 'ರೆಮ್‌ಡಿಸಿವಿರ್‌' ಚುಚ್ಚುಮದ್ದಿನ ಬೆಲೆಯನ್ನು ಇಳಿಕೆ ಮಾಡಲಾಗಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಸದಾನಂದ ಗೌಡ ಅವರು ಟ್ವೀಟ್‌ ಮಾಡಿದ್ದಾರೆ. ಸರಕಾರದ ಮಧ್ಯಪ್ರವೇಶದಿಂದ ರೆಮ್‌ಡಿಸಿವಿರ್‌ ಉತ್ಪಾದಕರು ಏಪ್ರಿಲ್‌ 15ರಿಂದ ಅನ್ವಯವಾಗುವಂತೆ ದರವನ್ನು 5,400 ರೂ.ನಿಂದ 3,500 ರೂ.ಗೆ ಇಳಿಕೆ ಮಾಡಿದ್ದಾರೆ. ಈ ಕ್ರಮದಿಂದ ಕೋವಿಡ್‌ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಅವರ ಹೋರಾಟಕ್ಕೆ ದೊಡ್ಡ ಬೆಂಬಲ ದೊರೆದಂತಾಗಿದೆ' ಎಂದು ಟ್ವೀಟ್‌ನಲ್ಲಿ ಸಚಿವರು ತಿಳಿಸಿದ್ದಾರೆ. ಏಪ್ರಿಲ್‌ 11ರಿಂದ 'ರೆಮ್‌ಡಿಸಿವಿರ್‌' ರಫ್ತು ನಿಷೇಧ ಜಾರಿಯಲ್ಲಿದ್ದು, ದೇಶೀಯ ಮಾರುಕಟ್ಟೆಯಲ್ಲಿ ಪೂರೈಕೆಯನ್ನು ಹೆಚ್ಚಿಸಲಾಗಿದೆ. 4 ಲಕ್ಷ ಬಾಟಲ್‌ಗಳಷ್ಟು ಲಸಿಕೆಯ ರಫ್ತನ್ನು ಸ್ಥಗಿತಗೊಳಿಸಿ ದೇಶೀಯ ಅಗತ್ಯಗಳನ್ನು ಪೂರೈಸಲು ಬಳಸಲಾಗಿದೆ,'' ಎಂದೂ ಅವರು ತಿಳಿಸಿದ್ದಾರೆ. ಔಷಧ ಇಲಾಖೆ ಮತ್ತು ರಾಷ್ಟ್ರೀಯ ಔಷಧ ದರ ಪ್ರಾಧಿಕಾರವು (ಎನ್‌ಪಿಪಿಎ) 'ರೆಮ್‌ಡಿಸಿವಿರ್‌' ಉತ್ಪಾದನೆ ಮೇಲೆ ನಿಗಾ ಇರಿಸಿದೆ. ಕಳೆದ ವಾರದಿಂದ ಅನ್ವಯವಾಗುವಂತೆ ತಿಂಗಳ ಉತ್ಪಾದನೆಯನ್ನು 28 ಲಕ್ಷ ಬಾಟಲ್‌ಗಳಿಂದ 41 ಲಕ್ಷಕ್ಕೆ ಹೆಚ್ಚಿಸಲಾಗಿದೆ ಎಂದೂ ಸದಾನಂದ ಗೌಡ ಅವರು ಟ್ವೀಟ್‌ ಮೂಲಕ ಮಾಹಿತಿ ನೀಡಿದ್ದಾರೆ.


from India & World News in Kannada | VK Polls https://ift.tt/2Q1YnGl

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...