ರಾಮ ಮಂದಿರ ನಿರ್ಮಾಣಕ್ಕಾಗಿ ನೀಡಿದ್ದ 22 ಕೋಟಿ ರೂ. ಮೌಲ್ಯದ 15 ಸಾವಿರ ಚೆಕ್‌ ಬೌನ್ಸ್‌!

ಲಖನೌ: ಅಯೋಧ್ಯೆಯಲ್ಲಿ ಬೃಹತ್‌ ರಾಮಮಂದಿರ ನಿರ್ಮಾಣಕ್ಕಾಗಿ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ಗೆ ದೇಶಾದ್ಯಂತ ದೇಣಿಗೆ ರೂಪದಲ್ಲಿ ನೀಡಲಾಗಿದ್ದ 22 ಕೋಟಿ ರೂ. ಮೌಲ್ಯದ ಸುಮಾರು 15 ಸಾವಿರ ಚೆಕ್‌ಗಳು ಬೌನ್ಸ್‌ ಆಗಿವೆ. ಈ ಪೈಕಿ 2 ಸಾವಿರ ಚೆಕ್‌ಗಳು ಅಯೋಧ್ಯೆಯಲ್ಲಿಯೇ ಪಡೆಯಲಾಗಿದ್ದು ಎಂದು ತಿಳಿದು ಬಂದಿದ್ದು, ಆಂತರಿಕ ಲೆಕ್ಕಪರಿಶೋಧನೆ ವೇಳೆ ಚೆಕ್‌ಬೌನ್ಸ್‌ ಸಂಗತಿ ಬೆಳಕಿಗೆ ಬಂದಿದೆ ಎಂದು ಟ್ರಸ್ಟ್‌ನ ಖಜಾಂಚಿ ಸ್ವಾಮಿ ಗೋವಿಂದ್‌ದೇವ್‌ ಗಿರಿ ಹೇಳಿದ್ದಾರೆ. ತಾಂತ್ರಿಕ ಸಮಸ್ಯೆಗಳು, ಸಹಿಗಳು ಹೊಂದಾಣಿಕೆ ಆಗದಿರುವುದು ಮತ್ತು ಚೆಕ್‌ನಲ್ಲಿ ಬರೆದಷ್ಟು ಮೊತ್ತವನ್ನು ಖಾತೆಯಲ್ಲಿ ಇರಿಸದಿರುವ ಕಾರಣಗಳಿಂದಾಗಿ ಚೆಕ್‌ಗಳು ಬೌನ್ಸ್‌ ಆಗಿವೆ ಎಂದು ಬ್ಯಾಂಕ್‌ ಅಧಿಕಾರಿಗಳು ತಿಳಿಸಿದ್ದಾರೆ. ಬ್ಯಾಂಕ್‌ಗಳೇ ಈ ಚೆಕ್‌ಗಳನ್ನು ದೇಣಿಗೆದಾರರಿಗೆ ಹಿಂದಿರುಗಿಸಿ ಹೊಸ ಚೆಕ್‌ ನೀಡುವಂತೆ ಮನವಿ ಮಾಡಲಿವೆ ಎಂದು ಅವರು ತಿಳಿಸಿದ್ದಾರೆ. ವಿಶ್ವ ಹಿಂದೂ ಪರಿಷತ್‌ ಸೇರಿದಂತೆ ಇತರ ಹಿಂದೂಪರ ಸಂಘಟನೆಗಳು ಜ.15ರಿಂದ ಫೆ.17ರವರೆಗೆ ದೇಶಾದ್ಯಂತ ರಾಮಮಂದಿರ ನಿರ್ಮಾಣ ದೇಣಿಗೆ ಸಂಗ್ರಹ ಅಭಿಯಾನ ನಡೆಸಿದ್ದವು. ನಿಧಿ ಸಂಗ್ರಹ ಅಭಿಯಾನದ ವೇಳೆ 5,000 ಕೋಟಿ ರೂ. ಸಂಗ್ರಹವಾಗಿದೆ ಎಂದು ಅಂದಾಜಿಸಲಾಗಿದೆ. ಆಂತರಿಕ ಲೆಕ್ಕ ಪರಿಶೋಧನೆ ಬಳಿಕ ಟ್ರಸ್ಟ್‌ ಈ ಕುರಿತು ಅಧಿಕೃತ ಮಾಹಿತಿ ನೀಡಲಿದೆ. ಅಂದಾಜು 1,000 ಕೋಟಿ ರೂ. ಮೊತ್ತದಲ್ಲಿ ರಾಮಮಂದಿರ ಮತ್ತು ಸಂಕೀರ್ಣ ನಿರ್ಮಿಸಲು ಟ್ರಸ್ಟ್‌ ನಿರ್ಧರಿಸಿದೆ. ಮಂದಿರ ನಿರ್ಮಾಣಕ್ಕೆ ದೇಶದ ಜನರಿಂದ ಹಣ ಸಂಗ್ರಹಿಸುತ್ತೇವೆಯೇ ವಿನಾ ವಿದೇಶಗಳಿಂದ ದೇಣಿಗೆ ಸ್ವೀಕರಿಸುವುದಿಲ್ಲ ಎಂದೂ ಟ್ರಸ್ಟ್‌ ತಿಳಿಸಿದೆ.


from India & World News in Kannada | VK Polls https://ift.tt/3ahqloh

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...