ದೇಶ ಉಳಿಯಬೇಕಾದರೆ ಮುಸ್ಲಿಮರಿಗೆ ಪ್ರಯಾಣ ನಿಷೇಧ ಆದೇಶ ಪುನ: ಜಾರಿಗೊಳಿಸಿ: ಟ್ರಂಪ್ ಒತ್ತಾಯ!

ವಾಷಿಂಗ್ಟನ್: ತೀವ್ರಗಾಮಿ ಇಸ್ಲಾಮಿಕ್ ಭಯೋತ್ಪಾದನೆಯಿಂದ ದೇಶವನ್ನು ಸುರಕ್ಷಿತವಾಗಿರಿಸಿಕೊಳ್ಳಲು, ಕೆಲವು ಮುಸ್ಲಿಂ ರಾಷ್ಟ್ರಗಳ ಮೇಲರೆ ಹೇರಿದ್ದ ಆದೇಶವನ್ನು ಪುನಃ ಜಾರಿಗೊಳಿಸಿ ಎಂದು ಅಮೆರಿಕದ ಮಾಜಿ ಅಧ್ಯಕ್ಷ ತಮ್ಮ ಪ್ರಸ್ತುತ ಅಧ್ಯಕ್ಷ ಅವರನ್ನು ಒತ್ತಾಯಿಸಿದ್ದಾರೆ. ಅಮೆರಿಕ ಒಂದು ದೇಶವಾಗಿ ಉಳಿಯಬೇಕು ಎಂದು ಜೋ ಬೈಡೆನ್ ಬಯಸಿದ್ದರೆ, ನಾನು ಜಾರಿಗೆ ತಂದ ಕೆಲವು ಮುಸ್ಲಿಂ ರಾಷ್ಟ್ರಗಳ ಮೇಲಿನ ಪ್ರಯಾಣ ನಿಷೇಧ ಆದೇಶವನ್ನು ಪುನ: ಜಾರಿಗೆ ತರಬೇಕು. ಅಲ್ಲದೇ ನಾನು ಯಶಸ್ವಿಯಾಗಿ ಜಾರಿಗೆ ತಂದ ನಿರಾಶ್ರಿತರ ನಿರ್ಬಂಧಗಳನ್ನು ಮತ್ತೆ ಜಾರಿಗೊಳಿಸಬೇಕು ಎಂದು ಟ್ರಂಪ್ ಆಗ್ರಹಿಸಿದ್ದಾರೆ. ಭಯೋತ್ಪಾದನೆ ಮತ್ತು ಉಗ್ರವಾದವನ್ನು ನಮ್ಮ ದೇಶದಿಂದ ಹೊರಗಿಡಲು, ನಾವು ಕಠಿಣ ನಿಯಮಗಳನ್ನು ಜಾರಿಗೆ ತರಬೇಕು. ಯುರೋಪ್ ಮಾಡಿದ ಅನೇಕ ವಲಸೆ ತಪ್ಪುಗಳನ್ನು ನಾವು ಪುನರಾವರ್ತಿಸಿದರೆ ಇತಿಹಾಸ ನಮ್ಮನ್ನು ಕ್ಷಮಿಸುವುದಿಲ್ಲ ಎಂದು ಟ್ರಂಪ್ ಅಭಿಪ್ರಾಯಪಟ್ಟಿದ್ದಾರೆ. ನನ್ನ ಆಡಳಿತಾವಧಿಯಲ್ಲಿ ಜಾರಿಗೆ ತಂದ ಈ ನಿಯಮಗಳಿಂದ ದೇಶ ಸುರಕ್ಷಿತವಾಗಿತ್ತು. ಆದರೆ ಬೈಡೆನ್ ಆಡಳಿತ ಈ ಆದೇಶವನ್ನು ಹಿಂಪಡೆದಿರುವುದರಿಂದ ದೇಶ ಭಯೋತ್ಪಾದನಾ ದಾಳಿಯ ಭೀತಿ ಎದುರಿಸುತ್ತಿದೆ ಎಂದು ಟ್ರಂಪ್ ಅಭಿಪ್ರಾಯಪಟ್ಟಿದ್ದಾರೆ. ಇರಾನ್, ಇರಾಕ್, ಲಿಬಿಯಾ, ಸೊಮಾಲಿಯಾ, ಸುಡಾನ್, ಸಿರಿಯಾ, ಮತ್ತು ಯೆಮೆನ್ ಸೇರಿದಂತೆ ಹಲವಾರು ಮುಸ್ಲಿಂ ರಾಷ್ಟ್ರಗಳ ಪ್ರಯಾಣಕ್ಕೆ ಟ್ರಂಪ್ ನಿಷೇಧ ಹೇರಿದ್ದರು. ಆದರೆ ಅಧಿಕಾರ ವಹಿಸಿಕೊಂಡ ನಂತರ ಬೈಡೆನ್ ಈ ನಿಷೇಧವನ್ನು ತೆಗೆದುಹಾಕಿದ್ದರು. ಬೈಡೆನ್ ಅವರ ಈ ನಿರ್ಧಾರವನ್ನು ಟೀಕಿಸಿರುವ ಟ್ರಂಪ್, ಅಮೆರಿಕ ಮೊದಲು ಎಂಬ ತಮ್ಮ ನೀತಿಯನ್ನು ಕೈಬಿಟ್ಟಿರುವ ಬೈಡೆನ್ ಭಾರೀ ಬೆಎ ತೆರಲಿದ್ದಾರೆ ಎಂದು ಎಚ್ಚರಿಸಿದ್ದಾರೆ.


from India & World News in Kannada | VK Polls https://ift.tt/32rBbDX

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...