ಮುಂಬೈ: ರಾಜಸ್ಥಾನ್ ರಾಯಲ್ಸ್ ವಿರುದ್ಧ 45 ರನ್‌ಗಳ ಗೆಲುವು ಪಡೆದ ಬಳಿಕ ಮಾತನಾಡಿದ ಹೆಡ್ ಕೋಚ್ ಸ್ಟಿಫೆನ್ ಫ್ಲೆಮಿಂಗ್, ಆಲ್‌ರೌಂಡರ್ ತಂಡಕ್ಕೆ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡಲ್ಲೂ ನೆರವಾಗುತ್ತಿದ್ದಾರೆಂದು ಗುಣಗಾನ ಮಾಡಿದ್ದಾರೆ. ಸೋಮವಾರ ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ನಡದಿದ್ದ 2021ರ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 12ನೇ ಪಂದ್ಯದಲ್ಲಿ 189 ರನ್ ಗುರಿ ಹಿಂಬಾಲಿಸಿದ್ದ ರಾಜಸ್ಥಾನ್ ರಾಯಲ್ಸ್ ತಂಡವನ್ನು 143 ರನ್‌ಗಳಿಗೆ ನಿಯಂತ್ರಿಸುವಲ್ಲಿ ರವೀಂದ್ರ ಜಡೇಜಾ ಹಾಗೂ ಮೊಯಿನ್ ಅಲಿ ಮಹತ್ವದ ಪಾತ್ರವನ್ನು ನಿರ್ವಹಿಸಿದರು. 45 ರನ್‌ಗಳ ರನ್‌ಗಳ ಗೆಲುವಿನೊಂದಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡ 4 ಅಂಕಗಳೊಂದಿಗೆ ಪಾಯಿಂಟ್ಸ್ ಟೇಬಲ್‌ನಲ್ಲಿ ಎರಡನೇ ಸ್ಥಾನಕ್ಕೆರಿದೆ. ಎರಡು ವಿಕೆಟ್ ಕಬಳಿಸಿದ ಸ್ಯಾಮ್ ಕರ್ರನ್ ಕೂಡ ಸಿಎಸ್‌ಕೆ ಗೆಲುವಿನಲ್ಲಿ ಅಳಿವು ಸೇವೆ ಸಲ್ಲಿಸಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಮೊಯೀನ್ ಅಲಿ ಆಗಮನದಿಂದ ಉಂಟಾಗಿರುವ ವ್ಯತ್ಯಾಸದ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿಎಸ್‌ಕೆ ಕೋಚ್ ಸ್ಪಿಫೆನ್ ಫ್ಲೆಮಿಂಗ್, ಇಂಗ್ಲೆಂಡ್ ಆಲ್‌ರೌಂಡರ್ ತಂಡಕ್ಕೆ ಸಾಕಷ್ಟು ಮೌಲ್ಯವನ್ನು ತಂದುಕೊಟ್ಟಿದ್ದಾರೆ ಎಂದು ಹೇಳಿದರು. "ಅವರು (ಮೊಯೀನ್ ಅಲಿ) ಆಟಕ್ಕೆ ಸರ್ವಾಂಗೀಣ ಅಂಶವನ್ನು ಸೇರಿಸಿದ್ದಾರೆ, ಇದು ಕಳೆದ ವರ್ಷ ನಮಗೆ ಕೊರತೆಯಾಗಿತ್ತು. ನಾವು ಏನು ನಿರೀಕ್ಷೆ ಮಾಡುತ್ತಿದ್ದೇವೆ ಎಂಬುದನ್ನು ಅವರು ಇಂದು(ಸೋಮವಾರ) ತಂಡಕ್ಕೆ ಕೊಡುಗೆ ನೀಡಿದ್ದಾರೆ. ಅವರು ಆರಂಭಿಸಿದ ರೀತಿಗೆ ನಾವು ಮಗ್ನರಾಗಿದ್ದೇವೆ. ಮೊಯೀನ್ ಅಲಿ ನಿಜಕ್ಕೂ ಪ್ರಭಾವಶಾಲಿಯಾಗಿದ್ದಾರೆ. ಮೂರನೇ ಕ್ರಮಾಂಕದಲ್ಲಿ ಅವರು ಬ್ಯಾಟಿಂಗ್ ಮಾಡುವ ಹಾದಿ ಹೆಚ್ಚಿನ ರನ್ ಗಳಿಸುವ ನಮಗೆ ಪ್ರಮುಖ ಅಸ್ತ್ರವಾಗಿದೆ," ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಚೆನ್ನೈ ಸೂಪರ್ ಕಿಂಗ್ಸ್ ಸ್ಪಿನ್ನರ್‌ಗಳಾದ ರವೀಂದ್ರ ಜಡೇಜಾ ಹಾಗೂ ಮೊಯಿನ್ ಅಲಿ ತಂಡದ ಪ್ರಕ್ರಿಯೆಗಳಲ್ಲಿ ಸಾಕಷ್ಟು ನೆರವಾಗುತ್ತಿದ್ದಾರೆ. ಅದರಲ್ಲೂ ರಾಜಸ್ಥಾನ್ ರಾಯಲ್ಸ್ ಚೇಸಿಂಗ್‌ನಲ್ಲಿ ಚೆಂಡಿನ ಮೇಲೆ ಹಿಡಿತ ಹಾಗೂ ತಿರುಗುವಿಕೆ ಆರಂಭವಾದಾಗ ಪಂದ್ಯದ ಮೇಲೆ ಇವರಿಬ್ಬರೂ ಪ್ರಭಾವ ಬೀರಿದ್ದಾರೆ ಎಂದು ತಿಳಿಸಿದ್ದಾರೆ. ರವೀಂದ್ರ ಜಡೇಜಾ ಹಾಗೂ ಮೊಯೀನ್ ಅಲಿ ಇಬ್ಬರನ್ನೂ ಮುಂದುವರಿಸುತ್ತೀರಾ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿಎಸ್‌ಕೆ ಕೋಚ್, ಮುಂದಿನ ಪಂದ್ಯಗಳ ಪರಿಸ್ಥಿತಿಗಳಿಗೆ ಅನುಗುಣವಾಗಿ ಈ ನಿರ್ಧಾರವನ್ನು ತೆಗದುಕೊಳ್ಳುತ್ತೇವೆ ಎಂದು ಹೇಳಿದರು. "ಇಂದಿನ(ಸೋಮವಾರ) ಪರಿಸ್ಥಿತಿಗಳಿಗೆ ಅವರು(ಅಲಿ-ಜಡೇಜಾ) ಹೊಂದಿಕೊಂಡಿದ್ದರು. ಮುಂದಿನ ಪಂದ್ಯಗಳಲ್ಲಿ ಪರಿಸ್ಥಿತಿಗಳನ್ನು ನೋಡಿಕೊಂಡು ಇವರಿಬ್ಬರನ್ನು ಕಣಕ್ಕೆ ಇಳಿಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇವೆ. ಆದರೆ, ಸ್ಪಿನ್‌ಗೆ ಸ್ವಲ್ಪ ತಿರುಗುತ್ತಿದ್ದ ವಾಂಖೆಡೆ ಕ್ರೀಡಾಂಗಣದ ಪಿಚ್ ಇಂದು ಸ್ಪಿನ್ ಸ್ನೇಹಿಯಾಗಿ ವರ್ತಿಸಿದ್ದು ಆಸಕ್ತದಾಯಕವಾಗಿತ್ತು," ಎಂದು ತಿಳಿಸಿದರು. ಇದಕ್ಕೂ ಮುನ್ನ ಮೊದಲು ಬ್ಯಾಟಿಂಗ್ ಮಾಡಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಫಾಫ್ ಡು ಪ್ಲೆಸಿಸ್ ಹಾಗೂ ಅಂಬಾಟಿ ರಾಯುಡು ಸ್ಪೋಟಕ ಬ್ಯಾಟಿಂಗ್ ಮಾಡಿದ್ದರು. ಕೊನೆಯಲ್ಲಿ ಡ್ವೇನ್ ಬ್ರಾವೊ ಕೇವಲ 8 ಎಸೆತಗಳಲ್ಲಿ 20 ರನ್ ಸಿಡಿಸಿದ್ದರು. ಆ ಮೂಲಕ ಸಿಎಸ್‌ಕೆ 188 ರನ್ ದಾಖಲಿಸಲು ಸಾಧ್ಯವಾಗಿತ್ತು. ರಾಜಸ್ಥಾನ್ ರಾಯಲ್ಸ್ ಪರ ಅತ್ಯುತ್ತಮ ಬೌಲಿಂಗ್ ಮಾಡಿದ್ದ ಚೇತನ್ ಸಕಾರಿಯಾ 4 ಓವರ್‌ಗಳಿಗೆ 36 ರನ್ ನೀಡಿ ಪ್ರಮುಖ 3 ವಿಕೆಟ್‌ಗಳನ್ನು ಪಡೆದುಕೊಂಡಿದ್ದರು. ಬುಧವಾರ ಇದೇ ಅಂಗಳದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಐಯಾನ್ ಮಾರ್ಗನ್ ನಾಯಕತ್ವದ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಸೆಣಸಲಿದೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2Qgc8kE