'ಆಕ್ಸಿಜನ್ ಕೊರತೆ' ಎದುರಿಸುತ್ತಿದ್ದ ಇಂಡೋನೇಷ್ಯಾ ಸಬ್‌ಮರೀನ್ ನಾಪತ್ತೆ: ಏನಾಯ್ತು 53 ಸಿಬ್ಬಂದಿಯ ಕಥೆ?

ಬಾಲಿ: ಆಮ್ಲಜನಕ ಸಂಗ್ರಹ ಇನ್ನೇನು ಮುಗಿಯಲಿದೆ ಎನ್ನುವಷ್ಟರಲ್ಲಿ ಇಂಡೋನೇಷ್ಯಾದ ಜಲಾಂತರ್ಗಾಮಿಯೊಂದು ನಾಪತ್ತೆಯಾಗಿದ್ದು, 53 ಸಿಬ್ಬಂದಿ ಇದ್ದ ಸಬ್‌ಮರೀನ್‌ಗಾಗಿ ತೀವ್ರ ಹುಡುಕಾಟ ಆರಂಭವಾಗಿದೆ. ತರಬೇತಿ ನಿರತವಾಗಿದ್ದ ಈ ಜಲಾಂತರ್ಗಾಮಿ ಕಳೆದ ಎರಡು ದಿನಗಳ ಹಿಂದೆ ಏಕಾಏಕಿ ನಾಪತ್ತೆಯಾಗಿದ್ದು, ಸಬಮರೀನ್‌ನಲ್ಲಿ ಆಮ್ಲಜನಕದ ಸಂಗ್ರಹ ಮುಗಿಯುವ ಹಂತಕ್ಕೆ ಬಂದಿತ್ತು ಎಂದು ಇಂಡೋನೇಷ್ಯಾ ನೌಕಾಸೇನೆ ಸ್ಪಷ್ಟಪಡಿಸಿದೆ. ಎಂಬ ಹೆಸರಿನ ಜಲಾಂತರ್ಗಾಮಿ ನಾಪತ್ತೆಯಾಗಿದ್ದು, ಇದರ ಹುಡುಕಾಟಕ್ಕಾಗಿ ಸೋನಾರ್-ಟ್ರ್ಯಾಕಿಂಗ್ ಉಪಕರಣಗಳನ್ನು ಹೊಂದಿದ ಹಡಗುಗಳನ್ನು ಬಾಲಿ ಕರಾವಳಿಗೆ ರವಾನಿಸಲಾಗಿದೆ. ಸಮುದ್ರದ 50 ರಿಂದ 100 ಮೀಟರ್ (165 ರಿಂದ 330 ಅಡಿ) ಆಳದಲ್ಲಿ ಹೆಚ್ಚಿನ ಕಾಂತೀಯತೆಯ ವಸ್ತು ಪತ್ತೆಯಾಗಿದ್ದು, ಇದು ನಾಪತ್ತೆಯಾಗಿರುವ ಸಬ್‌ಮರೀನ್ ಇರಬಹುದು ಎಂದು ಶಂಕಿಸಲಾಗಿದೆ. ಇದೇ ಕಾರಣಕ್ಕೆ ಸೋನಾರ್-ಟ್ರ್ಯಾಕಿಂಗ್ ಉಪಕರಣಗಳನ್ನು ಹೊಂದಿದ ಹಡಗುಗಳನ್ನು ಪತ್ತೆ ಕಾರ್ಯಕ್ಕೆ ಬಳಸಿಕೊಳ್ಳಲಾಗಿದೆ. ಆದರೆ ಜಲಾಂತರ್ಗಾಮಿ ಮುಳುಗಿದೆ ಎನ್ನಲಾದ ಪ್ರದೇಶದಲ್ಲಿ ತೈಲ ಸೋರಿಕೆಯ ಅಂಶ ಪತ್ತೆಯಾಗಿದ್ದು, ಇಂಧನ ಟ್ಯಾಂಕ್ ಸ್ಫೋಟಗೊಂಡಿದ್ದರೆ ಭಾರೀ ದುರಂತ ಸಂಭವಿಸಿರಬಹುದಾದ ಸಾಧ್ಯತೆಯೂ ಇದೆ ಎಂದು ಇಂಡೋನೇಷ್ಯಾ ನೌಕಾಪಡೆ ಆತಂಕ ವ್ಯಕ್ತಪಡಿಸಿದೆ. ಒಂದು ವೇಳೆ ಅಪಘಾತವೇನಾದರೂ ಸಂಭವಿಸಿದ್ದರೆ, ಕೆಆರ್‌ಐ ನಂಗ್ಗಾಲಾ 402 ಜಲಾಂತರ್ಗಾಮಿ ಸಮುದ್ರದಲ್ಲಿ ಸುಮಾರು 700 ಮೀಟರ್ (2,300 ಅಡಿ) ಆಳದಲ್ಲಿ ಮುಳುಗಿರಬಹುದು ಎಂದು ಶಂಕೆ ವ್ಯಕ್ತಪಡಿಸಲಾಗಿದೆ. ಜಮರ್ನ್ ನಿರ್ಮಿತ ಕೆಆರ್‌ಐ ನಂಗ್ಗಾಲಾ 402 ಜಲಾಂತರ್ಗಾಮಿ ಟಾರ್ಪಿಡೊ ಬಳಕೆಯ ತರಬೇತಿ ನಡೆಯುತ್ತಿದ್ದ ವೇಳೆ ನಾಪತ್ತೆಯಾಗಿದೆ. ಈ ಸಬ್‌ಮರೀನ್ ಪತ್ತೆಗಾಗಿ ಅಮೆರಿಕ ಮತ್ತು ಆಸ್ಟ್ರೇಲಿಯಾ ನೌಕಾಪಡೆ ಕೂಡ ಸಾಥ್ ನೀಡಿವೆ.


from India & World News in Kannada | VK Polls https://ift.tt/3aysPil

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...