ಪ್ರಧಾನಿ ಮೋದಿ ಕುರಿತಾದ ಫೋಟೋ ಟ್ವೀಟ್‌, ಪ್ರಿಯಾಂಕ್‌ ಖರ್ಗೆ ವಿರುದ್ಧ ರೇಣುಕಾಚಾರ್ಯ ಗರಂ

ಬೆಂಗಳೂರು: ಕೋವಿಡ್‌ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ವಿಫಲರಾಗಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಶಾಸಕ ಮಾಡಿರುವ ಫೋಟೋ ಟ್ವೀಟ್‌ಗೆ ಆಕ್ಷೇಪ ವ್ಯಕ್ತವಾಗಿದೆ. ಪ್ರಧಾನಿ ನರೇಂದ್ರ ಮೋದಿ ಮಾಸ್ಕನ್ನು ಕಣ್ಣಿಗೆ ಹಾಕಿರುವ ಫೋಟೋವನ್ನು ಪ್ರಿಯಾಂಕ್‌ ಖರ್ಗೆ ತಮ್ಮ ಟ್ವಿಟ್ಟರ್‌ನಲ್ಲಿ ಪೋಸ್ಟ್‌ ಮಾಡಿದ್ದರು. ಅಲ್ಲದೆ ಟ್ವೀಟ್ ಮುಖಪುಟದಲ್ಲೂ ಇದೇ ಫೋಟೋ ಹಾಕಿದ್ದಾರೆ. ‘ಲಕ್ಷಾಂತರ ಭಾರತೀಯರು ಬಳಲುತ್ತಿರುದಕ್ಕೆ ಕಾರಣ ಅವನ ಕೈಯಲ್ಲಿ ರಕ್ತದ ಕಲೆಗಳಿವೆ. ಧಾರ್ಮಿಕ ವಾಕ್ಚಾತುರ್ಯದಿಂದ ಜಾರಿಗೆ ತಂದ ಜಿಂಗೊಯಿಸಂ ನಮ್ಮ ಭವಿಷ್ಯವನ್ನು ಕಳೆದುಕೊಂಡಿದೆ. ಜನರು ಈಗ ಎಚ್ಚರಗೊಳ್ಳದಿದ್ದರೆ, ರಾಷ್ಟ್ರವಾಗಿ ಭಾರತವು ಅವನತಿ ಹೊಂದುತ್ತದೆ’ ಎಂಬ ಒಕ್ಕಣೆಯನ್ನು ಅವರು ಸೇರಿಸಿದ್ದರು. ಆದರೆ ಇದಕ್ಕೆ ಬಿಜೆಪಿ ಶಾಸಕ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಕುರಿತಾಗಿ ಅವರು ಟ್ವೀಟ್ ಮಾಡಿದ್ದು, ಅಪ್ಪನ ಹೆಸರಲ್ಲಿ ರಾಜಕಾರಣ ಮಾಡಿದರೆ ಈ ರೀತಿ ಆಗತ್ತೆ. ದೇಶದ ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ ಅವರು ಒಂದು ದಿನವು ರಜೆ ಪಡೆಯದೆ ಕರೋನಾ ಸಂಕಷ್ಟದ ಸಮಯದಲ್ಲಿ ಕಾಯ೯ ನಿವ೯ಹಿಸುತ್ತಿದ್ದಾರೆ ಎಂದಿದ್ದಾರೆ. ಅಲ್ಲದೆ, ಪ್ರಧಾನಿಗೆ ಈ ರೀತಿ ಅವಮಾನ ಮಾಡಿರುವುದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ಈ ಕೂಡಲೇ ಈ ಫೋಟೋವನ್ನು ತೆಗೆಯಬೇಕು ಎಂದು ಅವರು ಒತ್ತಾಯಿಸಿದ್ದಾರೆ.


from India & World News in Kannada | VK Polls https://ift.tt/3np8SzL

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...