
ಬೆಂಗಳೂರು: ಕಿಡ್ನ್ಯಾಪ್ ಪ್ರಕರಣ ರಾಜ್ಯದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಮಾಜಿ ಸಚಿವರೂ ಆಗಿರುವ ವರ್ತೂರು ಕಿಡ್ನ್ಯಾಪ್ ಹೇಗಾಯಿತು, ಅಪಹರಣಕಾರರು ಆ ಸಂದರ್ಭದಲ್ಲಿ ಹೇಗೆ ನಡೆದುಕೊಂಡರು ಎಂಬ ಭಯಾನಕ ಸಂಗತಿಯನ್ನು ಅವರು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಬೆಂಗಳೂರಿನಲ್ಲಿ ಬುಧವಾರ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ ವರ್ತೂರು ಪ್ರಕಾಶ್ ಘಟನೆಯ ಬಗ್ಗೆ ವಿವರಣೆ ನೀಡಿದ್ದು ರಕ್ಷಣೆ ನೀಡುವಂತೆ ಮನವಿ ಮಾಡಿದ್ದಾರೆ. ಆ ದಿನ ನಡೆದಿದ್ದೇನು? ನವೆಂಬರ್ 25 ಸಂಜೆ 7 ಗಂಟೆ. ಮಾಜಿ ಸಚಿವ ವರ್ತೂರು ಪ್ರಕಾಶ್ ಜಿಲ್ಲೆಯಲ್ಲಿರುವ ತಮ್ಮ ಫಾರ್ಮ್ ಹೌಸ್‌ನಿಂದ ಮದುವೆ ಕಾರ್ಯಕ್ರಮವೊಂದಕ್ಕೆ ಭಾಗಿಯಾಗಲು ಹೊರಡುತ್ತಾರೆ. ಇನ್ನೇನು ತೋಟದ ಮನೆಯಿಂದ ಅರ್ಥ ಕಿಲೋ ಮೀಟರ್ ದೂರ ಹೋಗುತ್ತಿದ್ದಂತೆ ಮುಂದೆ ಒಂದು ಕಾರು ಹಿಂದೆ ಒಂದು ಕಾರು ಇವರನ್ನು ಫಾಲೋ ಮಾಡುತ್ತಿರುತ್ತದೆ. ಇದ್ದಕ್ಕಿದ್ದಂತೆ ಎಂಟು ಮಂದಿ ಅಪಹರಣಕಾರರ ತಂಡ ವರ್ತೂರು ಕಾರನ್ನು ಅಡ್ಡ ಹಾಕುತ್ತೆ. ಕಾರಿನಿಂದ ಇಳಿಯಲು ಸೂಚಿಸಿದ ಅಪಹರಣಕಾರರು ಇದಕ್ಕೆ ನಿರಾಕರಣೆ ಮಾಡಿದ್ದಕ್ಕೆ ಹಲ್ಲೆ ನಡೆಸುತ್ತಾರೆ. ವರ್ತೂರು ಕಾರಿನ ಚಾಲಕನ ಮೇಲೆ ಅಪಹರಣಕಾರರು ಹಲ್ಲೆ ನಡೆಸುತ್ತಾರೆ. ಬಳಿಕ ಇವರ ಕಾರಿನಲ್ಲೇ ಇಬ್ಬರನ್ನು ಬಂಧಿಯನ್ನಾಗಿ ಮುಖಕ್ಕೆ ಮಂಕಿ ಕ್ಯಾಪ್ ಹಾಕಿ ಕಿಡ್ನ್ಯಾಪ್ ಮಾಡುತ್ತಾರೆ. ಕಾರಿನಲ್ಲಿ ನಾಲ್ಕು ತಾಸು ಹಿಂಸೆ ! ವರ್ತೂರು ಪ್ರಕಾಶ್ ಹಾಗೂ ಅವರ ಚಾಲಕನನ್ನು ಕಾರಿನಲ್ಲಿ ಕೂಡಿ ಹಾಕಿದ ಅಪಹರಣಕಾರರು ಸುಮಾರು ನಾಲ್ಕು ಗಂಟೆಗಳ ಕಾಲ ಸುತ್ತಾಡಿಸುತ್ತಾರೆ. ಅಲ್ಲದೆ 30 ಕೋಟಿ ರೂಪಾಯಿ ಹಣದ ಬೇಡಿಕೆ ಇಟ್ಟು ಚಿತ್ರಹಿಂಸೆ ನೀಡುತ್ತಾರೆ. ಬಳಿಂದ ಕಾಡಿನಂತಿರುವ ಒಂದು ಪ್ರದೇಶಕ್ಕೆ ಕರೆದೊಯ್ಯುತ್ತಾರೆ. ರಾತ್ರಿ ಸುಮಾರು 3 ಗಂಟೆಯವರೆಗೂ ಹಲ್ಲೆ ನಡೆಸುತ್ತಾರೆ. ಹಣ ಇಲ್ಲ ಎಂದು ಹೇಳಿದರೂ ಕೇಳದ ಕಿಡ್ನಾಪರ್ಸ್ ಮರುದಿನ ಬೆಳಗ್ಗೆ 6 ಗಂಟೆಗೆ ಮತ್ತೆ ಹೊಡೆಯಲು ಶುರುಮಾಡುತ್ತಾರೆ. ಅಪಹರಣಕಾರರಿಂದ ಪಾರಾಗಿದ್ದುಹೇಗೆ ? ಕಿಡ್ನಾಪ್ ಮಾಡಿ ಚಿತ್ರಹಿಂಸೆ ನೀಡಿದ ಮರುದಿನ ಅಪಹರಣಕಾರರು ವರ್ತೂರು ಪ್ರಕಾಶ್ ಹಾಗೂ ಅವರ ಕಾರು ಚಾಲಕನನ್ನು ಬೇರೆ ಕಡೆ ಕರೆದುಕೊಂಡು ಹೋಗುತ್ತಾರೆ. ಹಣಕ್ಕಾಗಿ ಪೀಡಿಸಿದ ಕಿಡ್ನ್ಯಾಪರ್ಸ್ ಒತ್ತಡಕ್ಕೆ ಮಣಿದು ವರ್ತೂರು ಕೋಲಾರದಲ್ಲಿ ತಮ್ಮ ಸ್ನೇಹಿತರಿಗೆ ಕಾಲ್ ಮಾಡಿ ಹಣ ಕೇಳುತ್ತಾರೆ. ಅವರಿಂದ 50 ಲಕ್ಷ ಹಣ ಪಡೆದುಕೊಂಡು ಅಪಹರಣಕಾರರಿಗೆ ನೀಡುತ್ತಾರೆ. ಆದರೆ ಯಾರಿಗೂ ಅನುಮಾನ ಬಾರದ ರೀತಿನಲ್ಲಿ ಮರ್ತೂರು ಮೊಬೈಲ್ ಫೋನ್ ಆಫ್ ಮಾಡಲು ಬಿಟ್ಟಿರಲಿಲ್ಲ. ಯಾರ ಫೋನ್ ಕರೆ ಬಂದರೂ ಮಾತನಾಡುವಂತೆ ಸೂಚನೆ ನೀಡಿದ್ದರಂತೆ. 50 ಲಕ್ಷ ಹಣಕ್ಕೆ ಬಗ್ಗದ ಅಪಹರಣಕಾರರು ಎರಡು ಕೋಟಿ ನೀಡಲಿದ್ದರೆ ಕೊಲ್ಲುವ ಬೆದರಿಕೆ ಹಾಕಿದ್ದರು. ಅಷ್ಟೇ ಅಲ್ಲ ವರ್ತೂರು ಅವರು ಕಾರು ಚಾಲಕರಿಗೆ ತೀವ್ರ ರೀತಿಯ ಹಲ್ಲೆ ನಡೆಸಿದರು. ಪರಿಣಾಮ ಕಾರು ಚಾಲಕ ಪ್ರಜ್ಞೆ ತಪ್ಪಿ ಬಿದ್ದಿದ್ದನಂತೆ. ಇದರಿಂದ ಸುಮ್ಮನಾದ ಕಿಡ್ನಾಪರ್ಸ್ ಮದ್ಯಪಾನ ಮಾಡಲು ಕುಳಿತುಕೊಂಡಿದ್ದರು. ಈ ವೇಳೆ ಪ್ರಜ್ಞೆ ಮರಳಿ ಬಂದ ಬಳಿಕ ಡ್ರೈವರ್ ಸ್ವಲ್ಪ ದೂರ ಹೋಗಿ ಬಚ್ಚಿಟ್ಟುಕೊಳ್ಳುತ್ತಾರೆ. ಈ ಘಟನೆಯ ಬಳಿಕ ಅಪಹರಣಕಾರರು ವರ್ತೂರು ಪ್ರಕಾಶ್ ಅವರನ್ನು ಅವರ ಕಾರಿನಲ್ಲಿ ಕರೆದುಕೊಂಡು ಬಂದು 5 ತಾಸು ಸುತ್ತಾಡಿಸಿ ಬಳಿಕ ಹೊಸಕೋಟೆ ಹೈವೇ ಪಕ್ಕದ ಶಿನವಾಪುರ ಮೈದಾನದ ಬಳಿ ಬಿಟ್ಟುಬಿಡುತ್ತಾರೆ. ಮೈಯಲ್ಲಿ ಬಟ್ಟೆ ಇರದ ವರ್ತೂರು ಬಳಿಕ ಕ್ಯಾಬ್ ಡ್ರೈವರ್ ಒಬ್ಬರ ಸಹಕಾರದಿಂದ ಆಸ್ಪತ್ರೆಗೆ ದಾಖಲಾಗುತ್ತಾರೆ. ಅಷ್ಟಕ್ಕೂ ಸಿನಿಮಾ ಮಾದರಿಯಲ್ಲಿ ನಡೆಯ ಈ ಕಿಡ್ನಾಪ್ ಕಥೆ ಅಸಲಿಯತ್ತು ಏನು ಎಂಬುವುದು ತನಿಖೆಯಿಂದ ತಿಳಿದುಬರಲಿದೆ. ಕಿಡ್ನಾಪ್ ಆದರೂ ದೂರು ನೀಡಲು ಏಕೆ ವಿಳಂಬ ಮಾಡಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ವರ್ತೂರು ದೂರು ಕೊಟ್ಟರೆ ಜೈಲಿಂದ ಬಿಡುಗಡೆ ಆದ ಬಳಿಕ ಕೊಲೆ ಮಾಡುತ್ತೇವೆ ಎಂದು ಬೆದರಿಕೆ ಹಾಕಿದ್ದಾರಂತೆ ಅಪಹರಣಕಾರರು.
from India & World News in Kannada | VK Polls https://ift.tt/3fZ7akK