ಅಶ್ವಿನ್‌ ರೂಪಿಸಿದ್ದ ಮಾಸ್ಟರ್‌ ಮೈಂಡ್‌ ಯೋಜನೆಗೆ ಮತ್ತೊಮ್ಮೆ ಎಡವಿದ ಸ್ಮಿತ್‌! ವಿಡಿಯೋ

ಮೆಲ್ಬೋರ್ನ್‌: ಇಲ್ಲಿನ ಎಂಸಿಜಿ ಕ್ರಿಕೆಟ್‌ ಅಂಗಳದಲ್ಲಿ ಶನಿವಾರದಿಂದ ಆರಂಭವಾದ ಆಸ್ಟ್ರೇಲಿಯಾ ವಿರುದ್ಧದ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದ ಮೊದಲ ದಿನ ಭಾರತದ ಯಶಸ್ವಿ ಬೌಲರ್‌ ಎಂಬುದನ್ನು ಸ್ಪಿನ್ನರ್‌ ಆರ್‌ ಅಶ್ವಿನ್ ಮತ್ತೊಮ್ಮೆ ಸಾಬೀತುಪಡಿಸಿದರು. ಸೇರಿದಂತೆ ಎದುರಾಳಿ ತಂಡದ ಪ್ರಮುಖ ವಿಕೆಟ್‌ಗಳನ್ನು ಪಡೆಯುವ ಮೂಲಕ ತಂಡಕ್ಕೆ ಆಫ್‌ ಸ್ಪಿನ್ನರ್‌ ಉತ್ತಮ ಆರಂಭ ತಂದುಕೊಟ್ಟರು. ಅಡಿಲೇಡ್‌ ಟೆಸ್ಟ್ ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ ಸ್ಟೀವನ್‌ ಸ್ಮಿತ್‌ ಅವರನ್ನು ಔಟ್‌ ಮಾಡಿದ್ದ ಬಗ್ಗೆ ವಿಶ್ವದಾದ್ಯಂತ ಕ್ರಿಕೆಟ್‌ ಪಂಡಿತರು ಸಾಕಷ್ಟು ಚರ್ಚೆ ನಡೆಸಿದ್ದರು. ಇದೀಗ ಮೆಲ್ಬೋರ್ನ್‌ ಪ್ರಥಮ ಇನಿಂಗ್ಸ್‌ನಲ್ಲಿಯೂ ಆಸ್ಟ್ರೇಲಿಯಾ ಮಾಜಿ ನಾಯಕನನ್ನು ಔಟ್‌ ಮಾಡುವಲ್ಲಿ ಅಶ್ವಿನ್‌ ಯಶಸ್ವಿಯಾದರು. ಸ್ಮಿತ್‌ ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತ ವಿರುದ್ಧ ಡಕ್‌ ಆಗಿದ್ದು ಇದೇ ಮೊದಲು. ಅಡಿಲೇಡ್‌ನಲ್ಲಿ ಔಟ್‌ ಸ್ಟಾಡಿಂಗ್‌ ಡೆಲಿವರಿ ಹಾಕಿದ್ದ ಆರ್‌ ಅಶ್ವಿನ್‌, ಮೆಲ್ಬೋರ್ನ್‌ನಲ್ಲಿ ಸಾಮೂಹಿಕ ಯೋಜನೆಯನ್ನು ರೂಪಿಸಿದ್ದರು. ಆಸ್ಟ್ರೇಲಿಯಾ ಮಾಜಿ ನಾಯಕನನ್ನು ಕಟ್ಟಿಹಾಕಲು ಆರ್‌ ಅಶ್ವಿನ್‌ ಬೌಲಿಂಗ್‌ಗೆ ಅಜಿಂಕ್ಯಾ ರಹಾನೆ ಲೆಗ್‌ ಸೈಡ್‌ ಫೀಲ್ಡಿಂಗ್‌ ಫುಲ್‌ ಟೈಟ್‌ ಮಾಡಿದ್ದರು. ಬ್ಯಾಕ್ವರ್ಡ್‌ ಶಾರ್ಟ್ ಲೆಗ್‌ ಹಾಗೂ ಫಾರ್ವರ್ಡ್‌ ಶಾರ್ಟ್‌ ಲೆಗ್‌ ನಿಲ್ಲಿಸಿಕೊಂಡಿದ್ದರು. ಅಶ್ವಿನ್‌ ಎಸೆತದಲ್ಲಿ ಮುಂದೆ ಆಡಲು ಪ್ರಯತ್ನಿಸಿದ ಸ್ಮಿತ್‌, ಇನ್‌ಸೈಡ್‌ ಎಡ್ಜ್‌ ಆಗಿ ಲೆಗ್‌ ಸ್ಲಿಪ್‌ನಲ್ಲಿದ್ದ ಚೇತೇಶ್ವರ್‌ ಪೂಜಾರಾ ಕೈಗೆ ಕ್ಯಾಚ್‌ ನೀಡಿದರು. ಒಟ್ಟಾರೆ ಟೆಸ್ಟ್ ಕ್ರಿಕೆಟ್‌ನಲ್ಲಿ ಐದನೇ ಬಾರಿ ಸ್ಟೀವನ್‌ ಸ್ಮಿತ್‌ ಡಕ್‌ ಔಟ್‌ ಆದಂತಾಯಿತು. ಅಲ್ಲದೆ, ಆರ್‌ ಅಶ್ವಿನ್‌, ಸ್ಮಿತ್‌ ಅವರನ್ನು ಐದು ಬಾರಿ ಔಟ್‌ ಮಾಡಿದ್ದಾರೆ. ಆಸ್ಟ್ರೇಲಿಯಾ ನೆಲದಲ್ಲಿ ಎರಡು ಬಾರಿ ಹಾಗೂ ಭಾರತದಲ್ಲಿ ಮೂರು ಬಾರಿ ಬಲಗೈ ಆಫ್‌ ಸ್ಪಿನ್ನರ್‌ಗೆ ಆಸೀಸ್‌ ಮಾಜಿ ನಾಯಕ ವಿಕೆಟ್‌ ಒಪ್ಪಿಸಿದ್ದಾರೆ. 11ನೇ ಓವರ್‌ನಲ್ಲಿ ಬೌಲಿಂಗ್‌ಗೆ ಬಂದ ಆರ್‌ ಅಶ್ವಿನ್‌ ತಮ್ಮ ಎರಡನೇ ಓವರ್‌ನಲ್ಲಿಯೇ ಆರಂಭಿಕ ಬ್ಯಾಟ್ಸ್‌ಮನ್‌ ಮ್ಯಾಥ್ಯೂ ವೇಡ್‌(30) ಅವರನ್ನು ಔಟ್‌ ಮಾಡಿದರು. ಇದಕ್ಕೂ ಮುನ್ನ ಜಸ್‌ಪ್ರಿತ್‌ ಬುಮ್ರಾ ಮತ್ತೊಬ್ಬ ಆರಂಭಿಕ ಬ್ಯಾಟ್ಸ್‌ಮನ್‌ ಜೋಬರ್ನ್ಸ್‌ ವಿಕೆಟ್‌ ಕಿತ್ತಿದ್ದರು. 10 ಎಸೆತಗಳನ್ನು ಎದುರಿಸಿದ್ದ ಬರ್ನ್ಸ್ ಎರಡನೇ ಓವರ್‌ನಲ್ಲಿ ಶೂನ್ಯಕ್ಕೆ ವಿಕೆಟ್‌ ಒಪ್ಪಿಸಿದ್ದರು. "ಮೊದಲ ದಿನವೇ ಭಾರತದ ಸ್ಪಿನ್ನರ್‌ಗಳಿಗೆ ಚೆಂಡು ಚೆನ್ನಾಗಿ ತಿರುಗುತ್ತಿದೆ ಎಂಬುದು ನನಗೆ ತುಂಬಾ ಅಚ್ಚರಿ ತರಿಸಿದೆ. ಮಿಡ್ಲ್‌ ಹಾಗೂ ಲೆಗ್‌ ವಿಕೆಟ್‌ ನಡುವೆ ಬೌಲಿಂಗ್‌ ಮಾಡಿ ಬ್ಯಾಟ್ಸ್‌ಮನ್‌ ಅನ್ನು ನಿಯಂತ್ರಿಸಲು ಇದು ಅತ್ಯುತ್ತಮ ಯೋಜನೆಯಾಗಿದೆ. ನೀವು ಸ್ಟೀವನ್‌ ಸ್ಮಿತ್‌ ಅವರು ಔಟ್‌ ಆಗಿದ್ದನ್ನು ನೋಡಬಹುದು. ಅಶ್ವಿನ್‌ ಎಸೆತವನ್ನು ಸ್ಮಿತ್‌ ಆಫ್‌ ಸೈಡ್‌ ಆಡಲು ಪ್ರಯತ್ನಿಸಿದರು, ಆದರೆ, ಅವರ ನಿಯಂತ್ರಣಕ್ಕೆ ಚೆಂಡು ಸಿಗಲಿಲ್ಲ. ಹಾಗಾಗಿ ಲೆಗ್‌ ಸ್ಲಿಪ್‌ಗೆ ಕ್ಯಾಚ್‌ ನೀಡಿದರು. ಲಾಬುಶೇನ್‌ಗೂ ಅಶ್ವಿನ್‌ ಇದೇ ಎಸೆತಗಳನ್ನು ಹಾಕಿದ್ದರು ಆದರೆ ಅವರು ಸಮರ್ಥವಾಗಿ ಎದುರಿಸಿದ್ದರು. ಅದೇ ಅದೇ ರೀತಿ ಸ್ಮಿತ್‌ ಆಡಬೇಕಾಗಿತ್ತು," ಎಂದು ಗವಾಸ್ಕರ್‌ 7 ಕ್ರಿಕೆಟ್‌ಗೆ ತಿಳಿಸಿದರು. 72.3 ಓವರ್‌ಗಳ ಮುಕ್ತಾಯಕ್ಕೆ ಆಸ್ಟ್ರೇಲಿಯಾ 195 ರನ್‌ಗಳಿಗೆ ಆಲೌಟ್‌ ಆಯಿತು. ಭಾರತದ ಪರ ಆರ್‌ ಅಶ್ವಿನ್‌ ಮೂರು ವಿಕೆಟ್‌ ಪಡೆದರೆ, ಜಸ್‌ಪ್ರಿತ್‌ ಬುಮ್ರಾ ನಾಲ್ಕು ವಿಕೆಟ್‌ಗಳನ್ನು ಪಡೆದುಕೊಂಡರು. ಅಂತಾರಾಷ್ಟ್ರೀಯ ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಮೊಹಮ್ಮದ್‌ ಸಿರಾಜ್‌ ಎರಡು ವಿಕೆಟ್‌ ಕಿತ್ತರು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3aHaAbh

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...