ಕಾರ್ಮಿಕರ ಸಂಕಷ್ಟ ಕೇಳುವ ಪಕ್ಷ ಯಾವುದು? ಸಂಘಟನೆ ಯಾವುದು? ಹೋರಾಟ ಮೇ 1ಕ್ಕೆ ಸೀಮಿತವೇ..?

ಲೇಖಕರು: ಅನಿಲ್ ಕುಮಾರ್ ನಂಜುಂಡಸ್ವಾಮಿ, ಯಲಿಯೂರು ಕಾರ್ಮಿಕರ ಪರಿಸ್ಥಿತಿ ಹಿಂದಿನಿಂದಲೂ ಸರಿಯಿಲ್ಲ. ಈಗಲೂ ಸರಿಯಿಲ್ಲ ಹಾಗೂ ಮುಂದೆಯೂ ಸರಿಯಾಗೋದಿಲ್ಲ. ಎಲ್ಲಾ ಸಂಸ್ಥೆಗಳಿಗೂ, ಕಾರ್ಖಾನೆಗಳಿಗೂ, ಖಾಸಗಿ ಕಾರ್ಖಾನೆಗಳಿಗೂ ಆಡಿಪಾಯವಾದ ಈ ಕಾರ್ಮಿಕರ ಏಳಿಗೆ ಎಂದೂ ಆಗಿಲ್ಲ.. ಮೇಲ್ದರ್ಜೆ ಅಧಿಕಾರಿಗಳ ಕಿರುಕುಳ, ವೇತನದಲ್ಲಿ ತಾರತಮ್ಯ, ಉತ್ತಮ ವಸತಿಗಳ ಕೊರತೆ, ಓವರ್ ಟೈಮ್ ದುಡಿಮೆ ಹಾಗೂ ಓವರ್ ಟೈಮ್ ದುಡಿಮೆಗೆ ವೇತನ ನೀಡದಿರುವುದು, ದೌರ್ಜನ್ಯ, ಸಾಮಾಜಿಕ ಭದ್ರತೆ ಕೊರತೆ.. ಹೀಗೆ, ಕಾರ್ಮಿಕರ ಬದುಕು ಶೋಚನೀಯವಾಗಿದೆ. ಮಹಿಳಾ ಕಾರ್ಮಿಕರ ಸ್ಥಿತಿ ಬಹಳ ದುಸ್ಥಿತಿಯಲ್ಲಿದೆ. ಮಹಿಳಾ ಕಾರ್ಮಿಕರ ಮೇಲಿನ ದೌರ್ಜನ್ಯಗಳಂತೂ ದಿನೇ ದಿನೇ ಹೆಚ್ಚುತಿವೆ. ಹೆಚ್ಚಾದ ದುಡಿಮೆಗಳಿಂದ ಆರೋಗ್ಯದ ಮೇಲೂ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿದೆ. ಈ ಸಮಸ್ಯೆಗಳಿಗೆ ಮಾಲೀಕರ ನಿರ್ಲಕ್ಷ, ಸರ್ಕಾರಗಳ ನಿರ್ಲಕ್ಷ ಹಾಗೂ ಸಂಘಟನೆಗಳಲ್ಲಿ ಒಗ್ಗಟ್ಟಿನ ಕೊರತೆ ಕಾರಣವಾಗಿದೆ. ಕಾರ್ಮಿಕರ ಹಿತ ಚಿಂತನೆ ಕೊರತೆ ಎದ್ದು ಕಾಣ್ತಿದೆ. ಪ್ರಮುಖವಾಗಿ ಖಾಸಗಿ ಕಂಪನಿಗಳಲ್ಲಿ ಮಾಲೀಕರ ನಿರ್ಲಕ್ಷ್ಯ ಹಾಗೂ ಕಾರ್ಮಿಕರ ಏಳಿಗೆಗಾಗಿ ಯೋಜನೆಗಳನ್ನು ರೂಪಿಸಿಲ್ಲ. ಕಾರ್ಮಿಕರು ಉತ್ತಮ ಜೀವನ ನಡೆಸಲು ಅಗತ್ಯ ವೇತನ ನೀಡದಿರುವುದೇ ಪ್ರಮುಖ ಕಾರಣ. ಸರ್ಕಾರಿ ಕಂಪನಿಗಳಲ್ಲಿ ಮೇಲ್ದರ್ಜೆ ಅಧಿಕಾರಿಗಳಿಂದ ಕಿರುಕುಳ, ವೇತನದಲ್ಲಿ ತಾರತಮ್ಯ ಹೆಚ್ಚಾಗಿ ಕಾಡುತ್ತಿದೆ. ಉದಾಹರಣೆಗೆ, BWSSB ಹಾಗೂ KPTCL ನೌಕರರು ಹೆಚ್ಚು ವೇತನ ಪಡೆದರೆ KSRTC, BMTC ನೌಕರರು ಕಡಿಮೆ ವೇತನ ಪಡೆಯುತ್ತಿದ್ದಾರೆ. ಹೀಗಾಗಿ, ರಾಜ್ಯ ಸರ್ಕಾರವು ಸಾರಿಗೆ ನೌಕರರನ್ನು ಸರ್ಕಾರಿ ನೌಕರರೆಂದು ಘೋಷಿಸಬೇಕಿದೆ. ಸಾರಿಗೆ ನೌಕರರ ದುಡಿಮೆಯಿಂದ ಹಿರಿಯ ನಾಗರಿಕರಿಗೆ ಕಡಿಮೆ ದರಕ್ಕೆ ಟಿಕೆಟ್ ಹಾಗೂ ವಿದ್ಯಾರ್ಥಿಗಳಿಗೆ ಕಡಿಮೆ ದರದಲ್ಲಿ ಪಾಸ್, ಕೆಲವು ವಿದ್ಯಾರ್ಥಿಗಳಿಗೆ ಉಚಿತ ಪಾಸ್, ಅಂಗವಿಕಲರಿಗೆ ಉಚಿತ ಪಾಸ್ ಕೊಡಲಾಗುತ್ತಿದೆ. ಆದ್ರೆ, ನೌಕರರಿಗೆ ಮಾತ್ರ ಕಡಿಮೆ ಸಂಬಳ ಕೊಡಲಾಗುತ್ತದೆ. ಇಷ್ಟೆಲ್ಲ ಸೇವೆಗಳನ್ನು ನೀಡುವ ಸಾರಿಗೆ ನೌಕರರನ್ನು ಸರ್ಕಾರಿ ನೌಕರರು ಎಂದು ಘೋಷಿಸಬೇಕಿದೆ. ಇನ್ನು ಸಾರಿಗೆ ನೌಕರರ ಮೇಲೆ ಮೇಲ್ದರ್ಜೆ ಅಧಿಕಾರಿಗಳ ಕಿರುಕುಳದ ವಿರುದ್ಧ ನ್ಯಾಯ ಕೊಡಿಸಿ, ಉತ್ತಮ ಜೀವನ ಮಾಡಲು ನೆರವಾಗಬೇಕಿದೆ. ಗರಿಷ್ಠ ದುಡಿಮೆ, ಕನಿಷ್ಠ ವೇತನ: ಈ ಮಾತು ಎಲ್ಲ ಖಾಸಗಿ ಕಂಪನಿ, ಗಾರ್ಮೆಂಟ್ಸ್ ಕಂಪನಿ ಹಾಗೂ ರಾಜ್ಯ ಸಾರಿಗೆ ನೌಕರರಿಗೆ ಅನ್ವಯಿಸುತ್ತದೆ. ಮೇಲ್ದರ್ಜೆ ಅಧಿಕಾರಿಗಳು ಹಾಗೂ ಮಾಲೀಕರು ವೈಭವದ ಜೀವನ ನಡೆಸುತ್ತಿದ್ದಾರೆ. ಇವರ ಮಕ್ಕಳು ಉತ್ತಮ ಶಿಕ್ಷಣ ಪಡೆಯುತ್ತಿದ್ದಾರೆ. ಆದರೆ ಇವರೆಲ್ಲರ ಏಳಿಗೆಗಾಗಿ ದುಡಿಯುವ ಕಾರ್ಮಿಕರ ಜೀವನ ಕಷ್ಟಕರವಾಗಿದೆ. ತಿಂಗಳ ಕೊನೆಯಲ್ಲಿ ಪರದಾಡುವ ಪರಿಸ್ಥಿತಿ ಇದೆ. ಕಾರ್ಮಿಕರ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಕೂಡ ಸಿಗುತ್ತಿಲ್ಲ. ಕಾರ್ಮಿಕರ ಹಲವಾರು ಸಂಘಟನೆಗಳಿದ್ದು ಈ ಸಂಘಟನೆಗಳು ಒಂದಾಗಿ ಹೋರಾಟ ಮಾಡಿದರೆ ಕಾರ್ಮಿಕರ ಬದುಕಿಗೆ ನ್ಯಾಯ ಸಿಗುತ್ತದೆ. ರಾಜಕೀಯ ಪಕ್ಷಗಳ ಇಚ್ಛಾಶಕ್ತಿ ಕೊರತೆ: ರೈತರಿಗೂ ಒಂದು ಪಕ್ಷ, ಮಧ್ಯಮ ವರ್ಗದವರಿಗೆ ಒಂದು ಪಕ್ಷ, ಒಂದೊಂದು ಧರ್ಮದವರಿಗೂ ಪಕ್ಷಗಳಿವೆ. ಅವರು ತಮ್ಮ ಮತ ಬ್ಯಾಂಕ್ ರಾಜಕೀಯ ಲಾಭಗಳಿಗೆ ಒಲೈಸುತ್ತಾರೆ. ಆದರೆ ಕಾರ್ಮಿಕರ ಪರ ಯಾವ ಪಕ್ಷವೂ ಓಲೈಸುವುದಿಲ್ಲ. ಕಾರ್ಮಿಕರ ಪರ ಪ್ರತಿನಿಧಿ ಯಾರು..?: ವಿಧಾನ ಪರಿಷತ್ತಿಗೆ ಸದಸ್ಯರನ್ನು ಆಯ್ಕೆ ಮಾಡುವಾಗ ಹಲವು ಆಯ್ಕೆಗಳಿವೆ. ವಿಧಾನಸಭೆಯಿಂದಲೂ ಪರಿಷತ್‌ಗೆ ಸದಸ್ಯರು ಆಯ್ಕೆ ಆಗುತ್ತಾರೆ. ಸ್ಥಳೀಯ ಸಂಸ್ಥೆಗಳ ಸದಸ್ಯರಿಂದಲೂ ಮೇಲ್ಮನೆಗೆ ಸದಸ್ಯರು ಆಯ್ಕೆ ಆಗುತ್ತಾರೆ. ಶಿಕ್ಷಕರಿಂದ, ಪದವೀಧರರಿಂದಲೂ ಪರಿಷತ್‌ಗೆ ಸದಸ್ಯರು ಚುನಾಯಿತರಾಗುತ್ತಾರೆ. ಕೆಲವು ಸದಸ್ಯರನ್ನು ರಾಜ್ಯಪಾಲರು ನಾಮ ನಿರ್ದೇಶನ ಮಾಡುತ್ತಾರೆ. ಇದೇ ರೀತಿ ಒಬ್ಬ ಸದಸ್ಯರನ್ನು ಕಾರ್ಮಿಕರ ಪರವಾಗಿ ವಿಧಾನಪರಿಷತ್‌ಗೆ ಕಳುಹಿಸಬೇಕು. ಕಾರ್ಮಿಕರ ಸಮಸ್ಯೆಗಳ ಬಗ್ಗೆ ಸದನದಲ್ಲಿ ಚರ್ಚೆ ಮಾಡಬೇಕು. ಒಟ್ಟಾರೆಯಾಗಿ ಶೈಕ್ಷಣಿಕ, ಸಾಮಾಜಿಕ, ವೇತನ ತಾರತಮ್ಯ ಸೇರಿದಂತೆ ಇನ್ನೂ ಅನೇಕ ಅನ್ಯಾಯಗಳ ವಿರುದ್ಧ ಸಂಘಟನೆಗಳು ಹೋರಾಟ ಮಾಡಬೇಕಿದೆ. ಖಾಸಗಿ ಬಿಪಿಒ ಒಂದರಲ್ಲಿ ಕಾರ್ಯನಿರ್ವಹಿಸುವ ಅನಿಲ್ ಕುಮಾರ್ ನಂಜುಂಡಸ್ವಾಮಿ ಅವರ ತಂದೆ ಬಿಎಂಟಿಸಿ ನೌಕರರು. ತಮ್ಮ ಹಾಗೂ ತಮ್ಮ ತಂದೆಯ ಔದ್ಯೋಗಿಕ ಸ್ಥಿತಿಗತಿ ಬಗ್ಗೆ ಅನಿಲ್ ಕುಮಾರ್ ಅವರು ತಮ್ಮ ಲೇಖನದಲ್ಲಿ ಬೆಳಕು ಚೆಲ್ಲಿದ್ದಾರೆ:


from India & World News in Kannada | VK Polls https://ift.tt/36z7h3t

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...