ನವದೆಹಲಿ: ಮತ್ತು ಆಸ್ಟ್ರೆಲೀಯಾ ಪ್ರಧಾನಿ ನಡುವೆ ವಿಡಿಯೋ ಕಾನ್ಫರೆನ್ಸ್ ಮೂಲಕ ದ್ವಿಪಕ್ಷೀಯ ಮಾತುಕತೆ ನಡೆದಿದೆ. ಆಸಿಸ್ ಪ್ರಧಾನಿ ಜೊತೆಗಿನ ಮಾತುಕತೆಯನ್ನು ಅತ್ಯಂತ ಯಶಸ್ವಿ ಎಂದು ಬಣ್ಣಿಸಿದ ಪ್ರಧಾನಿ ಮೋದಿ, ದ್ವಿಪಕ್ಷೀಯ ಸಂಬಂಧ ವೃದ್ಧಿಗೆ ಈ ಸಭೆ ಮುನ್ನುಡಿ ಬರೆದಿದೆ ಎಂದು ಹೇಳಿದ್ದಾರೆ. ಸಂಬಂಧ ಅತ್ಯಂತ ಗಾಢವಾಗಿದ್ದು, ಇದು ಪರಸ್ಪರ ಸಮಾನ ಹಂಚಿಕೆಯ ಆಧಾರದ ಮೇಲೆ ಯಶಸ್ಸಿನ ಹಳಿಗಳ ಮೇಲೆ ಸಾಗುತ್ತಿದೆ ಎಂದು ಪ್ರಧಾನಿ ಮೋದಿ ಅಭಿಪ್ರಾಯ ವ್ಯಕ್ತಪಡಿಸಿದರು. ಭಾರತ-ಆಸ್ಟ್ರೆಲೀಯಾದ ರಾಜತಾಂತ್ರಿಕ ಹಾಗೂ ವಾಣಿಜ್ಯ ಸಂಬಂಧಗಳನ್ನು ಮತ್ತಷ್ಟು ಗಟ್ಟಿಗೊಳಿಸಲು ಇಂದಿನ ವಿಡಿಯೋ ಕಾನ್ಫರೆನ್ಸ್ ಸಭೆ ಪ್ರಮುಖ ಪಾತ್ರವಹಿಸಿದೆ ಎಂದು ಮೋದಿ ಈ ವೇಳೆ ನುಡಿದರು. ವಿಡಿಯೋ ಕಾನ್ಫರೆನ್ಸ್ ಮನವಿಗೆ ಸ್ಪಂದಿಸಿ ಮಾತುಕತೆ ನಡೆಸಿದ ಆಸ್ಟ್ರೆಲೀಯಾ ಪ್ರಧಾನಿ ಸ್ಕಾಟ್ ಮಾರಿಸನ್‌ಗೆ ಈ ವೇಳೆ ಪ್ರಧಾನಿ ಮೋದಿ ಧನ್ಯವಾದ ಅರ್ಪಿಸಿದರು. ಇನ್ನು ವಿಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ಮಾತನಾಡಿದ ಆಸಿಸ್ ಪ್ರಧಾನಿ ಸ್ಕಾಟ್ ಮಾರಿಸನ್, ಭಾರತದೊಂದಿಗಿನ ಈ ಗಟ್ಟಿ ಸಂಬಂಧವನ್ನು ಗೌರವಿಸುವುದಾಗಿ ಹೇಳಿದರು.
from India & World News in Kannada | VK Polls https://ift.tt/2Xwn3aQ