ನಮಸ್ತೇ ಟ್ರಂಪ್‌ Live: ಇಂದಿನ ಟ್ರಂಪ್‌ ಕಾರ್ಯಕ್ರಮಗಳ ಪಟ್ಟಿ ಇಲ್ಲಿದೆ

ಅಹಮದಾಬಾದ್‌: ಭಾರಿ ನಿರೀಕ್ಷೆಗಳನ್ನು ಹುಟ್ಟುಹಾಕಿರುವ ಅಧ್ಯಕ್ಷ ಅವರ 36 ಗಂಟೆಗಳ ಭಾರತ ಭೇಟಿಗೆ ಭವ್ಯ ಸ್ವಾಗತ ನೀಡಲು ದೇಶ ಸಜ್ಜಾಗಿದೆ. ಅಹಮದಾಬಾದ್‌, ಆಗ್ರಾ, ಹೊಸದಿಲ್ಲಿಯಲ್ಲಿ ಭಾರಿ ಬಿಗಿ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿದೆ. ಸೋಮವಾರ ರಾತ್ರಿ ಟ್ರಂಪ್‌ ಉಳಿದುಕೊಳ್ಳಲಿರುವ ದಿಲ್ಲಿಯ ಮೌರ್ಯ ಹೋಟೆಲ್‌ ಅಕ್ಷರಶಃ ಏಳುಸುತ್ತಿನ ಕೋಟೆಯಾಗಿ ಮಾರ್ಪಟ್ಟಿದೆ. ಸೋಮವಾರ ಬಾಗೂ ಮಂಗಳವಾರ ಭಾರತ ಪ್ರವಾಸದಲ್ಲಿರುವ ಟ್ರಂಪ್‌ ಅವರ ಸೋಮವಾರದ ಕಾರ್ಯಕ್ರಮಗಳು ಹೀಗಿವೆ.
  • ಬೆಳಗ್ಗೆ 11.40: ಅಹಮದಾಬಾದ್‌ ಏರ್‌ಪೋರ್ಟ್‌ಗೆ ಆಗಮನ
  • ಅಲ್ಲಿಂದ ಮೊಟೆರಾ ಸ್ಟೇಡಿಯಂವರೆಗೆ 22 ಕಿ.ಮೀ ರೋಡ್‌ ಶೋ
  • ಸ್ಟೇಡಿಯಂ ಉದ್ಘಾಟನೆ, 'ನಮಸ್ತೇ ಟ್ರಂಪ್‌' ಕಾರ್ಯಕ್ರಮದಲ್ಲಿ ಭಾಗಿ. ಭಾರತದ ಸಂಪ್ರದಾಯ, ಸಂಸ್ಕೃತಿಗಳನ್ನು ಕಣ್ತುಂಬಿಕೊಳ್ಳಲಿರುವ ಟ್ರಂಪ್‌ ಕುಟುಂಬ
  • ನಂತರ ಸಬರಮತಿ ಆಶ್ರಮಕ್ಕೆ ಭೇಟಿ ಕೊಡುವ ಸಾಧ್ಯತೆ
  • ಸಂಜೆ 4.30ರ ಸುಮಾರಿಗೆ ಆಗ್ರಾದ ತಾಜ್‌ ಮಹಲ್‌ಗೆ ಭೇಟಿ
  • ರಾತ್ರಿ ದಿಲ್ಲಿಗೆ ಪಯಣ. ಮಂಗಳವಾರ ರಾಷ್ಟ್ರಪತಿ ಭವನದಲ್ಲಿ ಸ್ವಾಗತ
  • ರಾಜ್‌ಘಾಟ್‌ಗೆ ತೆರಳಿ ಮಹಾತ್ಮ ಗಾಂಧಿ ಸಮಾಧಿಗೆ ನಮನ
  • ಪ್ರಧಾನಿ ನರೇಂದ್ರ ಮೋದಿ ಜತೆ ದ್ವಿಪಕ್ಷೀಯ ಮಾತುಕತೆ. ರಕ್ಷಣೆ ಇಂಧನ ಸೇರಿ ಹಲವು ಕ್ಷೇತ್ರಗಳಲ್ಲಿ ಉಭಯ ದೇಶಗಳ ಮಧ್ಯೆ ಮಹತ್ವದ ಒಪ್ಪಂದಗಳು ಏರ್ಪಡುವ ನಿರೀಕ್ಷೆ ಇದೆ.
*ಟ್ರಂಪ್‌ ಭಾಗವಹಿಸುವ ಎಲ್ಲಾ ಕಾರ್ಯಕ್ರಮಗಳು ದೂರದರ್ಶನದಲ್ಲಿ ನೇರ ಪ್ರಸಾರವಾಗಲಿವೆ. ಟ್ರಂಪ್‌ ಜೊತೆ ಅವರ ಪತ್ನಿ ಮೆಲಾನಿಯಾ ಟ್ರಂಪ್‌, ಪುತ್ರಿ ಇವಾಂಕಾ ಕೂಡ ಭಾರತಕ್ಕೆ ಆಗಮಿಸುತ್ತಿದ್ದಾರೆ. ಈ ಪ್ರವಾಸದಲ್ಲಿ ಭಾರತದ ಸಂಪ್ರದಾಯ, ಸಂಸ್ಕೃತಿಯನ್ನು ಕಣ್ತುಂಬಿಕೊಳ್ಳಲಿರುವ ಟ್ರಂಪ್‌ ದಂಪತಿ ಅನೇಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಕೇವಲ 36 ಗಂಟೆಗಳ ಟ್ರಂಪ್‌ ಇಂಡಿಯಾ ಟೂರ್‌ ಹಲವು ಕಾರಣಗಳಿಗೆ ಪ್ರಮುಖವಾಗಿದೆ. ಹಾಗಿದ್ರೆ, ಟ್ರಂಪ್‌ ಪ್ರವಾಸದ ವೇಳಾಪಟ್ಟಿ ಹೇಗಿದೆ..? ಯಾವೆಲ್ಲಾ ಸ್ಥಳಗಳಿಗೆ ಭೇಟಿ ನೀಡಲಿದ್ದಾರೆ ಎಂಬುದನ್ನು ಮುಂದೆ ನೋಡಿ.


from India & World News in Kannada | VK Polls https://ift.tt/2HRJApY

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...