ಕಾಂಗ್ರೆಸ್‌ ಅಧ್ಯಕ್ಷ ಪಟ್ಟ, ಸಲ್ಮಾನ್‌ ಖುರ್ಷಿದ್‌ ಸಂದರ್ಶನದಲ್ಲಿ ಹೇಳಿದ್ಧರ ಅರ್ಥವೇನು?

ಹೊಸದಿಲ್ಲಿ: ಮತ್ತೆ ನಾಯಕತ್ವ ವಹಿಸಿಕೊಳ್ಳಬೇಕು ಎನ್ನುವುದು ಪಕ್ಷದ ಬಹುತೇಕ ನಾಯಕರ ಅಪೇಕ್ಷೆಯಾಗಿದೆ ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ಹೇಳಿದ್ದಾರೆ. ಈ ಹೇಳಿಕೆಯು ರಾಹುಲ್‌ ಗಾಂಧಿ ಅವರಿಗೆ ಮತ್ತೆ ಕಾಂಗ್ರೆಸ್‌ ಅಧ್ಯಕ್ಷ ಪಟ್ಟ ಕಟ್ಟಲು ಸಿದ್ಧತೆಗಳು ನಡೆಯುತ್ತಿವೆ ಎಂಬ ವದಂತಿಗಳಿಗೆ ಇಂಬು ನೀಡಿದೆ. ಕಳೆದ ವರ್ಷದ ಲೋಕಸಭೆ ಚುನಾವಣೆಯ ಸೋಲಿನ ನೈತಿಕ ಹೊಣೆ ಹೊತ್ತು ರಾಹುಲ್‌ ಗಾಂಧಿ ಅವರು ಕಾಂಗ್ರೆಸ್‌ ಅಧ್ಯಕ್ಷ ಸ್ಥಾನದಿಂದ ನಿರ್ಗಮಿಸಿದ್ದರು. ಆ ಬಳಿಕ ಸೋನಿಯಾ ಗಾಂಧಿ ಅವರನ್ನು ಹಂಗಾಮಿ ಅಧ್ಯಕ್ಷರಾಗಿ ಕಾಂಗ್ರೆಸ್‌ ಕಾರ್ಯಕಾರಿಣಿಯು ಆಯ್ಕೆ ಮಾಡಿದೆ. ನಾಯಕತ್ವದ ಕೊರತೆಯಿಂದ ಪಕ್ಷಕ್ಕೆ ಹಿನ್ನಡೆಯಾಗುತ್ತಿದೆ ಎಂದು ಹಿರಿಯ ನಾಯಕರಾದ ಸಂದೀಪ್‌ ಶಾಸ್ತ್ರಿ, ಶಶಿ ತರೂರ್‌ ಮೊದಲಾದವರು ಬಹಿರಂಗವಾಗಿ ಕಳವಳ ವ್ಯಕ್ತಪಡಿಸಿದ್ದಲ್ಲದೇ ನಾಯಕತ್ವಕ್ಕೆ ಚುನಾವಣೆ ನಡೆಸಲು ಆಗ್ರಹಿಸಿದ್ದಾರೆ. ಅದರ ಬೆನ್ನಲ್ಲಿಯೇ ರಾಹುಲ್‌ ಗಾಂಧಿಯವರು ಮತ್ತೆ ನಾಯಕತ್ವದ ಹೊಣೆ ಹೊತ್ತುಕೊಳ್ಳಲಿದ್ದಾರೆ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಶುರುವಾಗಿದೆ. ಆದರೆ ಈ ಕುರಿತು ರಾಹುಲ್‌ ಗಾಂಧಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಶನಿವಾರ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಸಲ್ಮಾನ್‌ ಖುರ್ಷಿದ್‌ ಅವರು, ''ಪಕ್ಷದಲ್ಲಿಅನೇಕ ನಾಯಕರು ಇದ್ದಾರೆ. ಆದರೆ ಸರ್ವೋಚ್ಚ ನಾಯಕ ಯಾರು ಎನ್ನುವ ಪ್ರಶ್ನೆ ಬಂದರೆ ರಾಹುಲ್‌ ಗಾಂಧಿ ಎಂದೇ ಹೇಳಬೇಕಾಗುತ್ತದೆ. ಇದರಲ್ಲಿ ಎರಡನೇ ಮಾತೇ ಇಲ್ಲ. ರಾಹುಲ್‌ ಗಾಂಧಿ ಎಲ್ಲಿಗೂ ಹೋಗಿಲ್ಲ ಮತ್ತು ಎಲ್ಲಿಗೂ ಹೋಗುವುದೂ ಇಲ್ಲ. ಅವರೇ ಮತ್ತೆ ಪಕ್ಷದ ಅಧ್ಯಕ್ಷರಾಗಬೇಕು ಎನ್ನುವುದು ಕಾಂಗ್ರೆಸ್‌ನ ಬಹುತೇಕ ನಾಯಕರ ಅಪೇಕ್ಷೆಯಾಗಿದೆ. ಈ ಬಗ್ಗೆ ನಿರ್ಧಾರ ಕೈಗೊಳ್ಳಲು ರಾಹುಲ್‌ ಅವರಿಗೆ ಸಮಯಾಧಿಧಿವಕಾಶ ನೀಡುವುದು ಅಗತ್ಯ,'' ಎಂದು ಹೇಳಿದ್ದಾರೆ. ಪಕ್ಷದಲ್ಲಿ ನಾಯಕತ್ವದ ಸಮಸ್ಯೆ ಇದೆ ಎನ್ನುವುದನ್ನು ತಳ್ಳಿಹಾಕಿದ ಅವರು, ಸೋನಿಯಾ ಗಾಂಧಿಯವರೂ ಪಕ್ಷವನ್ನು ಸಮರ್ಥವಾಗಿಯೇ ಮುನ್ನಡೆಸುತ್ತಿದ್ದಾರೆ. ಆದರೆ ಪಕ್ಷ ಈಗ ಸಂಕಷ್ಟದ ಸಮಯದಲ್ಲಿದೆ ಅಷ್ಟೆ. ಈ ಸವಾಲನ್ನು ಎದುರಿಸುವ ಸಾಮರ್ಥ್ಯ ಕಾಂಗ್ರೆಸ್‌ಗೆ ಇದೆ ಎಂದರು. ಕಾಂಗ್ರೆಸ್‌ ವಂಶಾಡಳಿತದ ಪಕ್ಷವಲ್ಲವೇ ಎಂದು ಪ್ರಶ್ನಿಸಿದಾಗ, ''ಇಂದು ವಂಶಾಡಳಿತ ಎನ್ನುವುದು ಎಲ್ಲಿಇಲ್ಲ ಹೇಳಿ? ರಾಜಕೀಯ ಕ್ಷೇತ್ರ ಮಾತ್ರವಲ್ಲದೆ ಮಾಧ್ಯಮ, ಪೊಲೀಸ್‌ ಮತ್ತು ನ್ಯಾಯಾಂಗ ವ್ಯವಸ್ಥೆ, ಆಡಳಿತ ವ್ಯವಸ್ಥೆ, ಬಾಲಿವುಡ್‌ ಎಲ್ಲಾ ಕಡೆಗಳಲ್ಲಿಯೂ ವಂಶಾಡಳಿತವಿದೆ. ವಂಶಾಡಳಿತ ಇಲ್ಲ ಎನ್ನುವ ಕ್ಷೇತ್ರವೇ ಇಲ್ಲ,'' ಎಂದು ಉತ್ತರಿಸಿದರು.


from India & World News in Kannada | VK Polls https://ift.tt/2T2vbw0

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...