‘ ಗಾಂಧಿಯನ್ನು ಪ್ರತಿದಿನವೂ ಕೊಲ್ಲುತ್ತಿದ್ದಾರೆ’ ಅನಂತ್ ಕುಮಾರ್ ಹೆಗಡೆ ವಿರುದ್ಧ ಕಾಂಗ್ರೆಸ್ ಕಿಡಿ

ಬೆಂಗಳೂರು: ಸ್ವಾತಂತ್ರ್ಯ ಹೋರಾಟದಲ್ಲಿ ಅಹಿಂಸಾ ತತ್ವ ಹಾಗೂ ಮಹಾತ್ಮ ಗಾಂಧಿಯ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದ ಬಿಜೆಪಿ ಸಂಸದ ಅನಂತ್‌ ಕುಮಾರ್ ಹೆಗಡೆ ವಿರುದ್ಧ ವಾಗ್ದಾಳಿ ನಡೆಸಿದೆ. ಈ ರೀತಿಯ ಹೇಳಿಕೆ ನೀಡುವ ಮೂಲಕ ಗಾಂಧಿಯನ್ನು ಪ್ರತಿ ದಿನವೂ ಕೊಲ್ಲುತ್ತಿದ್ದಾರೆ ಎಂದು ಕಿಡಿಕಾರಿದೆ. ಈ ಕುರಿತಾಗಿ ಟ್ವೀಟ್‌ ಮಾಡಿರುವ ಕರ್ನಾಟಕ ಕಾಂಗ್ರೆಸ್, ಮಹಾತ್ಮ ಗಾಂಧಿ ಅವರ ಬಗ್ಗೆ ಹೇಳಿರುವುದು ಆರೆಸ್ಸೆಸ್ ತಯಾರಿಸಿರುವ ವಿಷವಾಗಿದೆ. ಎಲ್ಲರೂ ಮತ್ತಷ್ಟು ಉತ್ತಮ ನಾಗರಿಕತೆ ಕಡೆ ಪ್ರಯಾಣ ಬೆಳೆಸಿದರೆ ಬಿಜೆಪಿ ನಾಯಕರು ಮಾತ್ರ ಅನಾಗರಿಕವಾಗಿ ಪರಿವರ್ತನೆಗೊಳ್ಳುತ್ತಿದ್ದಾರೆ. ಆರೆಸ್ಸೆಸ್ ಹಾಗೂ ಬಿಜೆಪಿ ದೇಶಕ್ಕೆ ಗಾಂಧಿ ಹಾಗೂ ಗೋಡ್ಸೆ ಬಗ್ಗೆ ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕಾದ ಸಮಯ ಇದಾಗಿದೆ. ಭಯೋತ್ಪಾದಕನ ಗುಂಡಿಗೆ ಬಲಿಯಾದ ಮಹಾತ್ಮ ಗಾಂಧಿ ಹೇರಾಮ್ ಎಂದು ಸತ್ತರು. ಬಿಜೆಪಿಗರು ಗಾಂಧಿಯನ್ನು ಪ್ರತಿದಿನವೂ ಕೊಲ್ಲುತ್ತಿದ್ದಾರೆ. ವಿಶ್ವವೇ ಗಾಂಧಿಯವರ ಸತ್ಯ ಅಹಿಂಸೆ ಶಾಂತಿ ಮಾರ್ಗದಲ್ಲಿ ನಡೆಯುತ್ತಿದ್ದರೆ, ಬಿಜೆಪಿಗರು ಗೋಡ್ಸೆ ಮಾರ್ಗದಲ್ಲಿ ನಡೆಯುತ್ತಿದ್ದಾರೆ. ವಿಶ್ವದಲ್ಲಿ ಗಾಂಧಿಯನ್ನು ಅವಮಾನಿಸುವ ಏಕೈಕ ಸಂಘಟನೆ ಬಿಜೆಪಿ ಎಂದು ಕಾಂಗ್ರೆಸ್ ಟ್ವೀಟ್ದಾಳಿ ನಡೆಸಿದೆ. ಬೆಂಗಳೂರಿನಲ್ಲಿ ನಡೆದ ‘ಮತ್ತೆ ಮತ್ತೆ ಸಾವರ್ಕರ್’ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಸಂಸದ ಅನಂತ್ ಕುಮಾರ್ ಹೆಗಡೆ ‘ಸೌಮ್ಯವಾದಿ ಹಾಗೂ ಅಹಿಂಸಾತ್ಮಕವಾಗಿ’ ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರರ ಕುರಿತಾಗಿ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಅನಂತ್ ಕುಮಾರ್ ಹೆಗಡೆ ಹೇಳಿಕೆ ವ್ಯಾಪಕ ವಿರೋಧಕ್ಕೆ ಕಾರಣವಾಗಿದೆ. ಈ ನಡುವೆ ಬಿಜೆಪಿ ಹೈ ಕಮಾಂಡ್‌ ಕೂಡಾ ಕ್ಷಮೆ ಕೇಳುವಂತೆ ಅನಂತ್ ಕುಮಾರ್‌ ಹೆಗಡೆಗೆ ಸೂಚಿಸಿದೆ.


from India & World News in Kannada | VK Polls https://ift.tt/2UmP17Q

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...