ಅಮೆರಿಕ ಅಧ್ಯಕ್ಷರಿಗೆ ಸಿಕ್ತು ಮಿಶ್ರ ಸ್ವಾಗತ, ಟ್ರೆಂಡ್‌ ಆಯ್ತು ಗೋಬ್ಯಾಕ್‌ ಟ್ರಂಪ್‌

ಅಹಮದಾಬಾದ್‌: ಯುಎಸ್‌ ಅಧ್ಯಕ್ಷರಾದ ಮೇಲೆ ಇದೇ ಮೊದಲ ಬಾರಿಗೆ ಭಾರತಕ್ಕೆ ಆಗಮಿಸಿರುವ ಡೊನಾಲ್ಡ್‌ ಟ್ರಂಪ್‌ಗೆ ಮಿಶ್ರ ಸ್ವಾಗತ ಸಿಕ್ಕಿದೆ. ಅಮೆರಿಕ ಅಧ್ಯಕ್ಷ ಟ್ರಂಪ್‌ ಎರಡು ದಿನಗಳ ಪ್ರವಾಸಕ್ಕೆಂದು ಭಾರತಕ್ಕೆ ಬಂದ ಬೆನ್ನಲ್ಲೇ ಎಂಬ ಹ್ಯಾಷ್‌ಟ್ಯಾಗ್‌ ಅನ್‌ಲೈನ್‌ನಲ್ಲಿ ಸೃಷ್ಟಿಸಿದೆ. ಟ್ರೆಂಡಿಂಗ್‌ನಲ್ಲಿ 4ನೇ ಸ್ಥಾನದಲ್ಲಿರುವ #Gobacktrump ಹ್ಯಾಷ್‌ಟ್ಯಾಗ್‌ನಡಿಯಲ್ಲಿ ಇದುವರೆಗೂ ಸುಮಾರು 45 ಸಾವಿರ ಟ್ವೀಟ್‌ಗಳು ಪೋಸ್ಟ್‌ ಆಗಿವೆ. ಅನೇಕರು ಭಾರತದಿಂದ ವಾಪಸ್‌ ಹೋಗಿ ಎಂದು ತರಹೇವಾರಿ ಟ್ವೀಟ್‌ ಮಾಡಿದ್ದಾರೆ. ಒಂದಿಷ್ಟು ಟ್ವೀಟ್‌ಗಳಲ್ಲಿ ಆಕ್ರೋಶಭರಿತ ಮಾತುಗಳಿದ್ದರೆ, ಒಂದಿಷ್ಟು ಟ್ವೀಟ್‌ಗಳು ಟ್ರಂಪ್‌ರನ್ನು ಟ್ರೋಲ್‌ ಮಾಡುತ್ತಿವೆ. ಹನ್ಸರಾಜ್‌ ಮೀನಾ ಎಂಬುವವರು, ವಿಮಾನ ನಿಲ್ದಾಣದಿಂದ ಮೋಟೆರಾವರೆಗೂ ಸಾಲುಗಟ್ಟಿ ನಿಲ್ಲುವುದಕ್ಕೆ ನಾವೇನು ಅಮೆರಿಕದ ಗುಲಾಮರಲ್ಲ. ಟ್ರಂಪ್‌ಗೆ ಸ್ವಾಗತ ಬೇಕಿದ್ದರೆ ಮೋದಿ ಭಕ್ತರಿಂದ ಪಡೆಯಲಿ, ಸ್ವಗೌರವ ಇಟ್ಟುಕೊಂಡ ಭಾರತೀಯರಿಂದಲ್ಲ ಎಂದು ಟ್ವೀಟ್‌ ಮಾಡಿದ್ದಾರೆ. ಇನ್ನು, ಅಬೀದ್‌ ಖಾನ್‌ ಎಂಬುವವರು ತಮ್ಮ ಟ್ವೀಟ್‌ನಲ್ಲಿ, ಹೇ ಟ್ರಂಪ್‌, ನಿಮ್ಮಿಂದಾಗಿ ಗೋಡೆಗಳನ್ನು ನಿರ್ಮಿಸುವುದರೊಂದಿಗೆ ನಮ್ಮ ದೇಶದ ಬಡತನವನ್ನು ಮರೆಮಾಚಲಾಗಿದೆ, ಗೋಬ್ಯಾಕ್‌ ಟ್ರಂಪ್‌ ಎಂದು ಬರೆದುಕೊಂಡಿದ್ದಾರೆ. ಸ್ನಾಪ್‌ಎನ್‌ಚಾಟ್‌ ಎಂಬ ಅಕೌಂಟ್‌ನಿಂದ ಪೋಸ್ಟ್‌ ಆಗಿರುವ ಟ್ವೀಟ್‌ನಲ್ಲಿ, ಈ ಪ್ರವಾಸದಲ್ಲಿ ಯಾವುದೇ ವ್ಯಾಪಾರ ಒಪ್ಪಂದಗಳಿಲ್ಲ. ಹೆಚ್‌1ಬಿ ವೀಸಾ ಬಗ್ಗೆ ಯಾವುದೇ ಮಾತಿಲ್ಲ. ಜಿಎಸ್‌ಪಿ ಸ್ಥಿತಿಯ ಪರಿಷ್ಕರಣೆ ಇಲ್ಲ. ಗ್ರಾಮೀಣ ಭಾರತವನ್ನು ಮರೆಮಾಚಲು ಗೋಡೆ ನಿರ್ಮಾಣ, ದೇಶದ ಹಿತಾಸಕ್ತಿಗಿಂತ ವೈಯಕ್ತಿಕ ಪ್ರಚಾರದ ಹಿತಾಸಕ್ತಿ ಕಂಡುಬರುತ್ತಿದೆ ಎಂದು ಬರೆಯಲಾಗಿದೆ. ಟ್ರಂಪ್‌ ಭಾರತವನ್ನು ಅಭಿವೃದ್ಧಿ ಹೊಂದಿದ ಆರ್ಥಿಕತೆ ಎಂದು ಕರೆದಿದ್ದಾರೆ. ಇದರಿಂದ ಭಾರತಕ್ಕೆ ಸಿಗಬೇಕಾಗಿದ್ದ ಅಭಿವೃದ್ಧಿ ಹೊಂದುತ್ತಿರುವ ದೇಶದ ವಿಶೇಷ ಸೌಲಭ್ಯಗಳು ಕೈತಪ್ಪಲಿವೆ. ಟ್ರಂಪ್‌ ನಮ್ಮ ಅತಿಥಿ ಅಲ್ಲ, ಗೋಬ್ಯಾಕ್‌ ಟ್ರಂಪ್‌ ಎಂದು ಪ್ರೇಮ್‌ ಎನ್ನುವವರು ಟ್ವೀಟ್‌ ಮಾಡಿದ್ದಾರೆ.


from India & World News in Kannada | VK Polls https://ift.tt/2VgKEvb

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...