ಮೆಲಾನಿಯಾ ಟ್ರಂಪ್‌ ದಿಲ್ಲಿ ಶಾಲಾ ಭೇಟಿ ಕಾರ್ಯಕ್ರಮಕ್ಕೆ ಸಿಸೋಡಿಯಾ, ಕೇಜ್ರಿವಾಲ್‌ಗಿಲ್ಲ ಆಹ್ವಾನ

ಹೊಸದಿಲ್ಲಿ: ಮುಂದಿನ ವಾರ ಅಮೆರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ದಂಪತಿ ಭಾರತ ಪ್ರವಾಸ ಕೈಗೊಳ್ಳಲಿದ್ದು ಈ ವೇಳೆ ಅಧ್ಯಕ್ಷರ ಪತ್ನಿ ದಿಲ್ಲಿಯ ಸರಕಾರಿ ಶಾಲೆಗಳಿಗೆ ಭೇಟಿ ನೀಡುವ ಕಾರ್ಯಕ್ರಮ ಇಟ್ಟುಕೊಂಡಿದ್ದಾರೆ. ಅಮೆರಿಕಾದ ಪ್ರಥಮ ಮಹಿಳೆ ಶಾಲೆಯಲ್ಲಿ 'ಹ್ಯಾಪಿನೆಸ್‌ ಕ್ಲಾಸ್‌' ವೀಕ್ಷಿಸುವ ಸಾಧ್ಯತೆ ಇದೆ. ಆದರೆ ಈ ಕಾರ್ಯಕ್ರಮದಿಂದ ದಿಲ್ಲಿ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವ ಮನೀಶ್‌ ಸಿಸೋಡಿಯಾ ಅವರನ್ನು ಹೊರಗಿಟ್ಟಿರುವುದು ವಿವಾದಕ್ಕೆ ಕಾರಣವಾಗಿದೆ. ಕಾರ್ಯಕ್ರಮ ಪಟ್ಟಿಯಿಂದ ಕೇಂದ್ರ ಸರಕಾರವೇ ಅರವಿಂದ ಕೇಜ್ರಿವಾಲ್‌ ಮತ್ತು ಮನೀ‍ಷ್‌ ಸಿಸೋಡಿಯಾ ಹೆಸರನ್ನು ಹೊರಗಿಟ್ಟಿದೆ ಎಂದು ಎಎಪಿ ದೂರಿದೆ. ಆರಂಭದಲ್ಲಿ ದಕ್ಷಿಣ ದಿಲ್ಲಿಯ ಶಾಲೆಗೆ ಕೇಜ್ರಿವಾಲ್‌ ಮತ್ತು ಸಿಸೋಡಿಯಾ ಮೆಲಾನಿಯಾರನ್ನು ಬರಮಾಡಿಕೊಳ್ಳಲಿದ್ದಾರೆ ಎನ್ನಲಾಗಿತ್ತು. ಟ್ರಂಪ್‌ ಭೇಟಿಯ ಎರಡನೇ ದಿನವಾದ ಮಂಗಳವಾರ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಒಂದು ಗಂಟೆ ಅವಧಿಯ ಭೇಟಿ ವೇಳೆ ಶಾಲಾ ಮಕ್ಕಳೊಂದಿಗೆ ಮೆಲಾನಿಯಾ ಟ್ರಂಪ್‌ ಸಮಯ ಕಳೆಯಲಿದ್ದಾರೆ ಎಂದು ಹೇಳಲಾಗಿತ್ತು.

ಇದೀಗ ಪ್ಲ್ಯಾನ್‌ ಬದಲಾವಣೆಯಾಗಿದೆ. ಹೀಗಿದ್ದೂ ಈ ಶಾಲೆ ದಿಲ್ಲಿ ಸರಕಾರದ ಅಡಿಯಲ್ಲಿ ಬರುವುದರಿಂದ ಕಾರ್ಯಕ್ರಮ ಪಟ್ಟಿಯಲ್ಲಿ ತಮ್ಮ ಹೆಸರು ಇಲ್ಲದಿದ್ದರೂ ಕೇಜ್ರಿವಾಲ್‌ ಮತ್ತು ಸಿಸೋಡಿಯಾ ಮೆಲಾನಿಯಾ ಟ್ರಂಪ್‌ ಭೇಟಿ ಸಂದರ್ಭದಲ್ಲಿ ಉಪಸ್ಥಿತರಿರಲಿದ್ದಾರೆ ಎಂದು ಸರಕಾರದ ಮೂಲಗಳು ಹೇಳಿವೆ.


from India & World News in Kannada | VK Polls https://ift.tt/3c1sQtZ

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...