ಪಂಜಾಬ್: ಪ್ರತ್ಯೇಕ ವಾರ್ಡ್ ಗೆ ಸ್ಥಳಾಂತರವಾಗಲು ಕೊರೊನಾ ಸೋಂಕು ಶಂಕಿತ ವ್ಯಕ್ತಿ ನಿರಾಕರಣೆ ಬಂಧನಕ್ಕೆ ಆದೇಶ

ಪಂಜಾಬ್: ತಗುಲಿದ ಶಂಕಿತ ವ್ಯಕ್ತಿಯೊಬ್ಬ ಪ್ರತ್ಯೇಕ ವಾರ್ಡ್‍ಗೆ ಸ್ಥಳಾಂತರಗೊಳ್ಳಲು ನಿರಾಕರಿಸಿದ ಹಿನ್ನೆಲೆಯಲ್ಲಿ ಆತನ ಬಂಧನಕ್ಕೆ ಸರಕಾರ ಆದೇಶಿಸಿದ ಘಟನೆ ನಡೆದಿದೆ. ಕೊರೊನಾ ವೈರಸ್ ಸೋಂಕು ತಗುಲಿದೆ ಎಂದು 38 ವರ್ಷದ ವ್ಯಕ್ತಿಯೊಬ್ಬನ ಆರೋಗ್ಯದಲ್ಲಿ ಬದಲಾವಣೆ ಬಂದಾಗ ಶಂಕಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಆತನನ್ನು ಆಸ್ಪತ್ರೆಯ ಬೇರ್ಪಡಿಕೆ ವಾರ್ಡ್‍ನಲ್ಲಿ ಇಡಲು ತೀರ್ಮಾನ ತೆಗೆದುಕೊಳ್ಳಲಾಗಿತ್ತು. ಆದರೆ ಆ ವ್ಯಕ್ತಿ ಶಂಕಿತರಿಗಾಗಿಯೇ ವ್ಯವಸ್ಥೆಗೊಳಿಸಲಾಗಿರುವ ಪ್ರತ್ಯೇಕ ವಾರ್ಡ್‍ನಲ್ಲಿ ಇರಲು ನಿರಾಕರಿಸಿದ ಹೀಗಾಗಿ ಪಂಜಾಬ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಈತನ ಬಂಧನಕ್ಕೆ ಆದೇಶಿಸಿದ್ದಾರೆ. ದೇಶದಲ್ಲಿ ಬೇರ್ಪಟ್ಟ ವಾರ್ಡ್‍ನಲ್ಲಿ ಇರಲು ನಿರಾಕರಿಸಿ ಹಿನ್ನಲೆಯಲ್ಲಿ ವ್ಯಕ್ತಿಯ ಬಂಧನಕ್ಕೆ ಆದೇಶಿಸಿರುವ ಪ್ರಕರಣ ಇದೇ ಮೊದಲು. ಈ ವ್ಯಕ್ತಿಯ ಹೆಸರನ್ನು ಬಹಿರಂಗಪಡಿಸಿಲ್ಲ. ಇತ್ತೀಚೆಗೆ ಕೆನಡಾದಿಂದ ಪಂಜಾಬ್ ನಲ್ಲಿರುವ ತನ್ನ ಕೋತಾಪುರ ಮನೆಗೆ ವ್ಯಕ್ತಿ ಬಂದಿದ್ದರು. ಈ ವೇಳೆ ಬರುವ ಮಾರ್ಗಮಧ್ಯದಲ್ಲಿ ಚೀನಾದ ಶಾಂಘೈ ವಿಮಾನ ನಿಲ್ದಾಣದಲ್ಲಿ ಒಂಬತ್ತು ಗಂಟೆ ಕಾಲ ತಂಗಿದ್ದರು ಎಂದು ವರದಿ ತಿಳಿಸಿದೆ.


from India & World News in Kannada | VK Polls https://ift.tt/2uoqkwS

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...