ಮುಂಬಯಿ: ಮಹಾರಾಷ್ಟ್ರದ 'ಮಹಾ ವಿಕಾದ ಆಘಾಡಿ' ಪಕ್ಷಗಳ ಅಧಿಕಾರ ಹಂಚಿಕೆಯಲ್ಲಿ ಸಣ್ಣ ಬದಲಾವಣೆಯಾಗಿದೆ. ಸರಕಾರದಲ್ಲಿ ಏಕೈಕ ಡಿಸಿಎಂ ಸ್ಥಾನ ಇರಲಿದ್ದು ಇದು ಎನ್ಸಿಪಿ ಪಾಲಾಗಿದೆ. ಇದರ ಜೊತೆಗೆ ಎನ್ಸಿಪಿಗೆ ಅತೀ ಹೆಚ್ಚಿನ 16 ಸಚಿವ ಸಚಿವ ಸ್ಥಾನಗಳು ಸಿಗಲಿವೆ. ಶಿವಸೇನೆಗೆ ಮುಖ್ಯಮಂತ್ರಿ ಸ್ಥಾನದ ಜೊತೆಗೆ 15 ಸ್ಥಾನಗಳು ಸಿಕ್ಕಿವೆ. ಸ್ಪೀಕರ್ ಸ್ಥಾನದ ಜೊತೆ 12 ಸಚಿವ ಸ್ಥಾನಗಳನ್ನು ಪಡೆದುಕೊಳ್ಳಲಿದೆ. ಕಾಂಗ್ರೆಸ್ಗೆ ಸ್ಪೀಕರ್ ಸ್ಥಾನ ನೀಡಿದ ನಂತರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಎನ್ಸಿಪಿಗೆ ಹೆಚ್ಚುವರಿ ಸಚಿವ ಸ್ಥಾನವನ್ನು ನೀಡಿದ್ದಾರೆ. “ಬಿಜೆಪಿಯನ್ನು ಅಧಿಕಾರದಿಂದ ದೂರದಲ್ಲಿಡುವುದು ಉದ್ದೇಶ, ಆದರೆ ಪ್ರಕ್ರಿಯೆಯಲ್ಲಿ ಕಾಂಗ್ರೆಸ್ ಅತೀ ಹೆಚ್ಚು ಕಳೆದುಕೊಂಡಿದೆ,” ಎಂಬುದಾಗಿ ಮೂರು ಪಕ್ಷಗಳ ಅಧಿಕಾರ ಹಂಚಿಕೆಯಲ್ಲಿ ಭಾಗವಹಿಸಿದ ಕಾಂಗ್ರೆಸ್ ರಾಜಕಾರಣಿಯೊಬ್ಬರು ಹೇಳಿದ್ದಾರೆ. “ನಮಗೆ ಉಪಮುಖ್ಯಮಂತ್ರಿ ಸ್ಥಾನ ಮತ್ತು ಸ್ಪೀಕರ್ ಸ್ಥಾನಕ್ಕೆ ಮಾತುಕತೆಯಾಗಿತ್ತು. ಆದರೆ ಸ್ಫೀಕರ್ ಸ್ಥಾನವನ್ನು ಮಾತ್ರ ನೀಡಲಾಗಿದೆ,” ಎಂದು ಅವರು ವಿವರಿಸಿದ್ದಾರೆ.
ಕಾಂಗ್ರೆಸ್ ಹಿರಿಯ ನಾಯಕ ಅಹಮದ್ ಪಟೇಲ್ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಖರ್ಗೆ ಜೊತೆ ಹೊಸದಿಲ್ಲಿಯಲ್ಲಿ ನಡೆದ ಸಭೆಯಲ್ಲಿ ಎನ್ಸಿಪಿ ಮತ್ತು ಕಾಂಗ್ರೆಸ್ಗೆ ಸ್ಪೀಕರ್ ಸ್ಥಾನದ ಜೊತೆ 12 ಸಚಿವ ಸ್ಥಾನ ನೀಡಲು ಒಪ್ಪಿಕೊಂಡಿದ್ದವು. ಇದರ ಉಪಮುಖ್ಯಮಂತ್ರಿ ಸ್ಥಾನವೂ ಇತ್ತು. ಆದರೆ ಮುಂದಿನ ದಿನಗಳಲ್ಲಿ ಎರಡು ಉಪಮುಖ್ಯಮಂತ್ರಿ ಸ್ಥಾನಕ್ಕೆ ಎನ್ಸಿಪಿ ತಗಾದೆ ತೆಗೆದಿತ್ತು. ಹೀಗಾಗಿ ಕಾಂಗ್ರೆಸ್ ಕೇವಲ ಸ್ಫೀಕರ್ ಸ್ಥಾನಕ್ಕೆ ಸಮಾಧಾನ ಪಡುವಂತಾಯಿತು. ಗುರುವಾರವರೆಗೂ ಕಾಂಗ್ರೆಸ್ ಸ್ಪೀಕರ್ ಸ್ಥಾನದ ಬಗ್ಗೆ ತನಗೆ ಆಸಕ್ತಿಯಿಲ್ಲ ಮತ್ತು ಡಿಸಿಎಂ ಸ್ಥಾನವನ್ನು ಬಿಟ್ಟುಕೊಡಲು ಸಾಧ್ಯವಿಲ್ಲ ಎಂದು ಎನ್ಸಿಪಿ ಮತ್ತು ಶಿವಸೇನೆ ಮುಂದೆ ಎಂದು ಪಟ್ಟು ಹಿಡಿದು ಕೂತಿತ್ತು. ಆದರೆ, "ಅಜಿತ್ ಪವಾರ್ ನೇತೃತ್ವದ ಎನ್ಸಿಪಿ ನಾಯಕರು ಮಾತ್ರ ಇದರಲ್ಲಿ ಯಾವುದೇ ಹೊಂದಾಣಿಕೆ ಇಲ್ಲ. ಸರಕಾರದಲ್ಲಿ ಕೇವಲ ಒಂದೇ ಉಪಮುಖ್ಯಮಂತ್ರಿ ಸ್ಥಾನ ಇರಲಿದ್ದು, ಇದು ಎನ್ಸಿಪಿಗೆ ಎಂದು ಪಟ್ಟು ಹಿಡಿದರು," ಎಂದು ಕಾಂಗ್ರೆಸ್ ನಾಯಕರು ವಿವರಿಸಿದ್ದಾರೆ. ಕೊನೆಗೆ ಕಾಂಗ್ರೆಸ್ಗೆ ಉಳಿದಿದ್ದು ಸ್ಪೀಕರ್ ಸ್ಥಾನ ಮಾತ್ರ. ಇದನ್ನೇ ಅನಿವಾರ್ಯವಾಗಿ ಒಪ್ಪಿಕೊಳ್ಳಬೇಕಾಯಿತು. “ಹೊಂದಾಣಿಕೆಗೆ ಅವಕಾಶವಿಲ್ಲ ಎಂಬುದು ಅರ್ಥವಾಗುತ್ತಿದ್ದಂತೆ ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ಸ್ಪೀಕರ್ ಹುದ್ದೆಗೆ ನಾನಾಭಾವ್ ಪಾಟೋಲೆ ಹೆಸರನ್ನು ಅಂತಿಮಗೊಳಿಸಿದರು.” ಇದೀಗ ಕಾಂಗ್ರೆಸ್ ಇಬ್ಬರು ಹಿರಿಯ ನಾಯಕರಾದ ಮಾಜಿ ಮುಖ್ಯಮಂತ್ರಿ ಅಶೋಕ್ ಚವಾಣ್ ಮತ್ತು ಪೃಥ್ವಿರಾಜ್ ಚವಾಣ್ರನ್ನು ಹೇಗೆ ಸಮಾಧಾನ ಪಡಿಸುವುದು ಎಂಬುದನ್ನು ಕಂಡುಕೊಳ್ಳಬೇಕಿದೆ.
from India & World News in Kannada | VK Polls https://ift.tt/33x6gnG