ಒಂದೂ ಟ್ವೀಟ್‌ ಮಾಡದ ಅಮಿತ್‌ ಶಾ ಪುತ್ರ ಜಯ್‌ ಶಾ ಟ್ವಿಟ್ಟರ್ ಖಾತೆಗೆ ಬ್ಲೂ ಟಿಕ್‌: ಟ್ವೀಟಿಗರಿಂದ ತೀವ್ರ ಆಕ್ರೋಶ

ಹೊಸದಿಲ್ಲಿ: ಭಾರತ ಸೇರಿ ವಿಶ್ವಾದ್ಯಂತ ಜನಪ್ರಿಯ ಸಾಮಾಜಿಕ ಜಾಲತಾಣವಾಗಿದೆ. ಆದರೆ, ಭಾರತೀಯ ಟ್ವೀಟಿಗರು ಇಂದು ಟ್ವಿಟ್ಟರ್ ವಿರುದ್ಧವೇ ತಿರುಗಿಬಿದ್ದಿದ್ದು, ''ಕ್ಯಾನ್ಸಲ್‌ ಆಲ್‌ ಬ್ಲೂ ಟಿಕ್ಸ್ ಇನ್‌ ಇಂಡಿಯಾ'' ಎಂಬ ಹ್ಯಾಶ್‌ಟ್ಯಾಗ್‌ ಸೃಷ್ಟಿ ಮಾಡಿದ್ದು, ಅದು ಸದ್ಯ ನಂ. 1 ಟ್ರೆಂಡಿಂಗ್ ಆಗುತ್ತಿದೆ. ಟ್ವಿಟ್ಟರ್‌ನಲ್ಲಿ ಸೆಲೆಬ್ರಿಟಿಗಳ ಅಥವಾ ದೊಡ್ಡ ವ್ಯಕ್ತಿಗಳ ಅಧಿಕೃತ ಖಾತೆಗೆ ಬ್ಲೂ ಟಿಕ್‌ ನೀಡಲಾಗುತ್ತದೆ. ಆದರೆ, ಈ ಬ್ಲೂ ಟಿಕ್‌ ದುರ್ಬಳಕೆಯಾಗುತ್ತಿದೆ ಎಂದು ಭಾರತೀಯದ ಸಾವಿರಾರು ಟ್ವೀಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಂದೂ ಟ್ವೀಟ್‌ ಮಾಡದ ಹಾಗೂ 19 ಹಿಂಬಾಲಕರನ್ನು ಹೊಂದಿದ್ದ ಪುತ್ರ ಹಾಗೂ ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾಗೆ ಬ್ಲೂ ಟಿಕ್‌ ನೀಡಿರುವುದು ವಿವಾದವಾಗಿ ಪರಿಣಮಿಸಿದೆ. ಸದ್ಯ, ಜಯ್‌ ಶಾಗೆ 10 ಸಾವಿರಕ್ಕೂ ಅಧಿಕ ಹಿಂಬಾಲಕರನ್ನು ಹೊಂದಿದ್ದು, ಕೇವಲ 2 ಟ್ವೀಟ್‌ಗಳನ್ನು ಮಾಡಿದ್ದಾರೆ. ದೊಡ್ಡ ದೊಡ್ಡ ಸೆಲೆಬ್ರಿಟಿಗಳಿಗೆ, ಹಲವು ವರ್ಷಗಳಿಂದ ಟ್ವಿಟ್ಟರ್ ಖಾತೆಯನ್ನು ಹೊಂದಿರುವ ಜನಪ್ರಿಯ ವ್ಯಕ್ತಿಗಳ ಟ್ವಿಟರ್ ಖಾತೆಗಳಿಗೆ ಅಧಿಕೃತ ಖಾತೆ (ಬ್ಲೂ ಟಿಕ್‌) ನೀಡದ ಟ್ವಿಟರ್ ಇಂಡಿಯಾ, ಅಕ್ಟೋಬರ್‌ 2019ರಲ್ಲಿ ಟ್ವಿಟರ್ ಸೇರಿರುವ, ಒಂದೂ ಟ್ವೀಟ್ ಮಾಡದ, 19 ಹಿಂಬಾಲಕರನ್ನು ಹೊಂದಿದ್ದ ಬಿಸಿಸಿಐ ಕಾರ್ಯದರ್ಶಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಪುತ್ರ ಜಯ್‌ ಶಾಗೆ ಟ್ವಿಟ್ಟರ್ ಬ್ಲೂ ಟಿಕ್‌ ನೀಡಿರುವುದಕ್ಕೆ ಸಾವಿರಾರು ಟ್ವೀಟಿಗರು ವಿರೋಧ ವ್ಯಕ್ತಪಡಿಸಿದ್ದಾರೆ. ಬ್ಲೂ ಟಿಕ್‌ ದುರ್ಬಳಕೆಯಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಪ್ರಧಾನಿ ಮೋದಿ ಅವಧಿಯಲ್ಲೇ ಜಯ್‌ ಶಾ ಆಸ್ತಿ ಅಪಾರ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ ಎಂದು ಈ ಹಿಂದೆಯೂ ವಿವಾದವಾಗಿತ್ತು. ಈಗ ಸಹ ಅದನ್ನು ನೆನಪಿಸಿದ ಟ್ವೀಟಿಗರು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಪುತ್ರನ ಕಾಲೆಳೆದಿದ್ದಾರೆ. ಅಲ್ಲದೆ, ಬ್ಲೂ ಟಿಕ್‌ಗಳಿಗೆ ಹೆಚ್ಚು ಮನವಿಗಳು ಬರುತ್ತಿರುವುದರಿಂದ ಅಧಿಕೃತ ಮಾನ್ಯತೆ ಎಂಬುದನ್ನು ನಿಲ್ಲಿಸುತ್ತೇವೆ ಎಂದು ಟ್ವಿಟರ್ ಇತ್ತೀಚೆಗೆ ಹೇಳಿತ್ತು ಎನ್ನಲಾಗಿದ್ದು, ಆದರೆ ಈಗ ಜಯ್‌ ಶಾ ಟ್ವಿಟರ್ ಖಾತೆಗೆ ಬ್ಲೂ ಟಿಕ್‌ ನೀಡಿದ್ದಕ್ಕೆ ಟ್ವಿಟ್ಟರ್ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನೊಂದೆಡೆ, ಬಿಜೆಪಿ ನಾಯಕಿ ಹಾಗೂ ಮಾಲೆಗಾಂವ್‌ ಸ್ಫೋಟ ಆರೋಪಿಯಾಗಿದ್ದ ಪ್ರಗ್ಯಾ ಸಿಂಗ್ ಠಾಕೂರ್‌ ಟ್ವಿಟ್ಟರ್ ಖಾತೆಗೆ ಬ್ಲೂ ಟಿಕ್‌ ನೀಡಿರುವುದಕ್ಕೂ ಹಲವು ಟ್ವೀಟಿಗರು ವಿರೋಧ ವ್ಯಕ್ತಪಡಿಸಿದ್ದಾರೆ.


from India & World News in Kannada | VK Polls https://ift.tt/33miJLI

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...